ಸ್ನೇಹಮಯಿ ಕೃಷ್ಣ ಓರ್ವ ರೌಡಿ ಶೀಟರ್
ಸಂಜೆವಾಣಿ ನ್ಯೂಸ್
ಮೈಸೂರು: ಆ.29:- ಆರ್‍ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಓರ್ವ ರೌಡಿಶೀಟರ್ ಆಗಿದ್ದು, ಆತನ ವಿರುದ್ಧ ರಾಜ್ಯದಾದ್ಯಂತ 44 ಪ್ರಕರಣಗಳು ದಾಖಲಾಗಿವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಲಕ್ಷ್ಮಣ್ ವಿರುದ್ಧ ಸ್ನೇಹಮಯಿ ಪೆÇಲೀಸರಿಗೆ ದೂರು ದಾಖಲಿಸಿರುವ ಸಂಬಂಧÀ ಬುಧÀವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲಕ್ಷ್ಮಣ್, ಸ್ನೇಹಮಯಿ ಕೃಷ್ಣ ಒಬ್ಬ ಬ್ಲಾಕ್ ಮೇಲರ್ ಹಾಗೂ ರೌಡಿಶೀಟರ್. ಮುಡಾ ಪ್ರಕರಣದಲ್ಲಿ ಸಿಎಂ ಕೇಸ್ ಸಂಬಂಧ ಸ್ನೇಹಮಯಿ ಕೃಷ್ಣ ಕಡೆಯವರು ನನ್ನ ಹತ್ತಿರ 100 ಕೋಟಿ ರೂ. ಡೀಲ್ ಗೆ ಬಂದಿದ್ದರು ಎಂದು ಆಧಾರ ರಹಿತ ಆರೋಪ ಮಾಡಿದರು.
ಅಪರಿಚಿತರೊಬ್ಬರು ಸ್ನೇಹಮಯಿ ಕೃಷ್ಣ ಅವರನ್ನು ಅಡ್ಜ¸ ಮಾಡಿಕೊಳ್ಳಿ ಸರ್ ಎಂದು ನನಗೆ ಮೆಸೇಜ್ ಮಾಡಿದ್ದರು. ಆ ವ್ಯಕ್ತಿ ಯಾರು ಎಂದು ನಾನು ಈಗ ಹೇಳಲ್ಲ. ಅವರು 100 ಕೋಟಿ ರೂ. ಕೊಡಿ ಅಂದರು. ನಾನು ತಪ್ಪೇ ಇಲ್ಲದೇ ನಾವು ಯಾಕೆ ಹಣ ಕೊಡಬೇಕು ಎಂದು ಹೇಳಿದವು. ಈ ಮಾತು ಯಾರು ಹೇಳಿದ್ದರು ಎಂದು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ದೂರಿದರು.
ಆತ ಈ ಹಿಂದೆಯೂ ಇಂತಹ ಅನೇಕ ಕೇಸ್‍ಗಳಲ್ಲಿ ಇದೇ ರೀತಿ ಮಾಡಿz್ದÁನೆ. ಈ ಬಗ್ಗೆ ದಾಖಲೆ ಇಲ್ಲ, ಇನ್ನೂ ದೂರು ಕೂಡ ಕೊಟ್ಟಿಲ್ಲ. ಮುಂದಿನ ದಿನ ಅದೇ ವ್ಯಕ್ತಿಯನ್ನು ಕರೆದುಕೊಂಡು ಬಂದು ಸುದ್ದಿಗೋಷ್ಠಿ ಮಾಡಿಸುತ್ತೇನೆ ಎಂದರು.
ಆರ್‍ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ರಾಜ್ಯದ ವಿವಿಧ ಪೆÇಲೀಸ್ ಠಾಣೆಗಳಲ್ಲಿ 44 ಪ್ರಕರಣಗಳು ದಾಖಲಾಗಿವೆ.
ಈ ಪೈಕಿ ಮೈಸೂರಿನ¯್ಲÉೀ 17 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಮೈಸೂರಿನ ಕೆ.ಆರ್.ಪೆÇಲೀಸ್ ಠಾಣೆಯಲ್ಲಿ ರೌಡಿಶೀಟರ್ ಹಾಕಲಾಗಿದೆ. ಈಗಲೂ ರೌಡಿಶೀಟರ್ ಆಗಿz್ದÁರೆ. ಜತೆಗೆ ಆತನ ವಿರುದ್ಧ ಕೊಲೆ, ಸುಲಿಗೆ, ಬ್ಲಾಕ್ ಮೇಲ್, ಬೆದರಿಕೆ ಸೇರಿದಂತೆ ಇನ್ನಿತರ ಆರೋಪಗಳಡಿ ಪ್ರಕರಣಗಳು ದಾಖಲಾಗಿವೆ. ಆತನ ಮನೆಯ ಮೇಲೆ ದಾಳಿ ನಡೆಸಿದ ಮುಡಾಗೆ ಸಂಬಂಧಿಸಿದ ದಾಖಲೆಗಳು ಸಿಗಲಿದೆ ಎಂದರು.