ಆದಿ ಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿ ಅಕ್ರಮ ಪರಭಾರೆ ಮಾಡಿದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.29- ಆದಿಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿ ಅಕ್ರಮ ಪರಭಾರೆ ಮಾಡಲು ಹಾಗೂ ಅಕ್ರಮವಾಗಿ ಅನ್ಯಕ್ರಾಂತ ಮಾಡಿದ ಅಧಿಕಾರಿಗಳ ವಿರುದ್ದ ಕ್ರಮವಾಗಬೇಕು. ಜಿಲ್ಲಾ ಮಟ್ಟದ ಎಸ್ಸಿ, ಎಸ್ಟಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಧಮಕಿ ಹಾಕಿದವರ ವಿರುದ್ದ ಪ್ರಕರಣ ದಾಖಲಿಸಿ ಎಂದು ಆದಿಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿಸಂರಕ್ಷಣಾ ಸಮಿತಿ ಕಾರ್ಯದರ್ಶಿ ಅಯ್ಯನಪುರ ಶಿವಕುಮಾರ್ ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಿ ಕರ್ನಾಟಕ ಅಭಿವೃದ್ದಿ ಸಂಘದ ಆಡಳಿತ ಮಂಡಲಿ ಅಸ್ವಿತ್ತದಲ್ಲಿದ್ದರು ಸಹ ಈ ಸಮಾಜಕ್ಕೆ ಸೇರಿದ ಆಸ್ತಿಯನ್ನು ಕಂದಾಯ ಇಲಾಖೆ, ನಗರಾಭಿವೃದ್ದಿ ಪ್ರಾಧಿಕಾರÀ ಹಾಗೂ ನೊಂದಾಣಿ ಇಲಾಖೆಗಳ ಅಧಿಕಾರಿಗಳು ಶಾಮಿಲಾಗಿ ಅಕ್ರಮವಾಗಿ ನಕಲಿ ದಾಖಲು ಸೃಷ್ಟಿ ಮತ್ತು ಅಕ್ರಮವಾಗಿ ಅನ್ಯಕ್ರಾಂತ ಮಾಡಿರುವುದು ಹಾಗೂ ನಗರಸಭೆಯಿಂದ ಇ-ಸ್ವತ್ತು ನೀಡಲಾಗಿದೆ. ನಾವುಗಳು ದೂರು ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿಗಳು ಈ ಪ್ರಕರಣದ ಖಾತೆ, ಆರ್‍ಟಿಸಿ, ಇ-ಸ್ವತ್ತುಗಳನ್ನು ರದ್ದುಪಡಿಸಿರುವುದು ಸ್ವಾಗತಾರ್ಹ. ಈ ಅಕ್ರಮದಲ್ಲಿ ಭಾಗಿಯಾಗಿರುವÀವರ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಕೆಲವರು ಜೈಲಿನಲ್ಲಿದ್ದಾರೆ. ಇನ್ನು ಕೆಲವರು ಜಾಮೀನು ಪಡೆದುಕೊಂಡಿದ್ದಾರೆ. ಅಕ್ರಮವಾಗಿ ಸರ್ಕಾರಿ ದಾಖಲೆಗಳನ್ನು ತಿದ್ದಿರುವ, ಸೃಷ್ಟಿ ಮಾಡಿರುವ ಮತ್ತು ತಪ್ಪು ಎಂದು ಗೊತ್ತಿದ್ದರು ಸಹ ಅವರಿಗೆ ಸಹಾಯ ಮಾಡಿರುವ ಅಧಿಕಾರಿಗಳ ವಿರುದ್ದವು ಶಿಸ್ತು ಕ್ರಮವಾಗಬೇಕು. ಅಂಥವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕೆಂಬುವುದು ನಮ್ಮ ಒತ್ತಾಯವಾಗಿದೆ ಎಂದರು.
ಸಂಘದ ಆಸ್ತಿ ಪರಭಾರೆ ಮಾಡಿಕೊಂಡು ಅನ್ಯಕ್ರಾಂತ ಮಾಡಿಸಿಕೊಂಡಿದ್ದ ಚಾ.ಸಿ.ಗೋವಿಂದರಾಜು ಅವರ ಖಾತೆಯನ್ನು ರದ್ದು ಪಡಿಸಿರುವುದು ಸ್ವಾಗತಾರ್ಹ. ಇದಕ್ಕೆ ಕಾರಣಕರ್ತರಾದ ಗ್ರ್ರಾಮ ಲೆಕ್ಕಾಧಿಕಾರಿ, ರಾಜಸ್ವನಿರೀಕ್ಷಕರು, ತಹಸೀಲ್ದಾರ್, ಚುಡಾ ಅಧಿಕಾರಿಗಳು, ನಗರಸಭಾ ಅಧಿಕಾರಿಗಳ ವಿರುದ್ದ ಕ್ರಮವಾದರೆ, ಇನ್ನುಳಿದ ಅಧಿಕಾರಿಗಳಿಗೆ ಶಿಸ್ತು ಮತ್ತು ಭಯ ಬರುತ್ತದೆ. ಇದೇ ರೀತಿ ಮುಂದುವರಿದರೆ, ಏನು ಆಗುವುದಿಲ್ಲ. ಮುಂದೆ ಬಂದ ಅಧಿಕಾರಿಗಳು ಸರಿಪಡಿಸಿಕೊಳ್ಳುತ್ತಾರೆ ಎಂಬ ಉದಾಸೀನ ಮನೋಭಾವ ಅಧಿಕಾರಿಗಳಲ್ಲೂ ಬರುತ್ತದೆ ಎಂದರು.
ಸಿ.ಕೆ.ಮಂಜುನಾಥ್, ಸಿ.ಕೆ.ರವಿಕುಮಾರ್ ಬಂಧಿಸಿ : ಜಿಲ್ಲಾ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿ ಸಭೆಯನ್ನು ದುರುಪಯೋಗ ಪಡಿಸಿಕೊಂಡು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಧಮಕಿ ಹಾಕಿರುವವರನ್ನು ಬಂಧಿಸಬೇಕು. ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ವಿಚಾರದಲ್ಲಿ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಮುಖಾಂತರ ಪ್ರಕರಣ ದಾಖಲು ಮಾಡಿಸಿದ್ದಾರೆ.
ಆದೇ ರೀತಿ ಇತರೇ ಸಮಾಜಗಳಾದ ಉಪ್ಪಾರರು, ನಾಯಕರು, ಕುರುಬರು ವೀರಶೈವ ಸಮಾಜದವರಿಗೆ ಸರ್ಕಾರ ನೀಡಿರುವ ಆಸ್ತಿಯಲ್ಲಿ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅವರ ಮೇಲೆ ಏಕೆ ಯಾವುದೇ ಕ್ರಮ ಇಲ್ಲ. ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ವಿಚಾರದಲ್ಲಿ ಮಾತ್ರ ಈ ರೀತಿ ಮಾಡುವುದು ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿರುವುದು ಬೆದರಿಕೆ ತಂತ್ರವಾಗಿದೆ.
ಅಲ್ಲದೇ ಜಿಲ್ಲಾ ಮಟ್ಟದ ಅಧಿಕಾರಿಗಳ ಮೇಲೆ ಎಸ್‍ಸಿ, ಎಸ್‍ಟಿ ದೌರ್ಜನ್ಯ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲು ಮಾಡುವುದಾಗಿ ಸಭೆಯಲ್ಲಿ ಧಮಕಿ ಹಾಕಿರುವ ದಲಿತ ಮುಖಂಡರಾದ ಸಿ.ಕೆ. ಮಂಜುನಾಥ್ ಹಾಗೂ ಸಿ.ಕೆ.ರವಿಕುಮಾರ್, ಸೇರಿದಂತೆ ಇತರರು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ರೀತಿ ನಡೆದು ಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇವರ ವಿರುದ್ದ ಕೂಡಲೇ ಜಿಲ್ಲಾಧಿಕಾರಿಗಳು ಮೊಕದ್ದಮೆ ದಾಖಲು ಮಾಡಿ, ಬಂಧಿಸಬೇಕು ಎಂದು ಒತ್ತಾಯಿಸಿದರು.
ಕುರುಬ ಸಮಾಜದವರು, ನಾಯಕ ಸಮಾಜದವರು ವೀರಶೈವರು, ಉಪ್ಪಾರರು ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ನೀಡಿರುವ ಜಾಗದಲ್ಲಿ ಅಂಗಡಿಗಳು, ಕಾಂಪ್ಲೆಕ್ಸ್ ನಿರ್ಮಾಣ ಮಾಡಿ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿದಾರೆ. ಆದರೆ, ಆದಿಕರ್ನಾಟಕ ಅಭಿವೃದ್ಧಿ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಅವರಂತೆ ಸಮುದಾಯದ ಆಸ್ತಿಯನ್ನು ದುರುಪಯೋಗ ಪಡಿಸಿಕೊಂಡಿಲ್ಲ. ತಮ್ಮದಲ್ಲದ ಅಸ್ತಿಯನ್ನು ಜೈ ಭೀಮ್‍ಫೇರ್‍ಗೆ 30 ವರ್ಷಗಳ ಅವಧಿಗೆ ಭೋಗ್ಯಕ್ಕೆ ಹಾಕಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇತರೇ ಸಮಾಜದ ಬಗ್ಗೆ ಮಾತನಾಡುವ ನೀವು ಅವರು ಮಾಡಿರುವ ಒಳ್ಳಯ ಕಾರ್ಯವನ್ನು ಒಂದಾದರು ಮಾಡೀದ್ದೀರಾ, ಸಂಘದ ಅಸ್ತಿಯನ್ನು ಸಂರಕ್ಷಣೆ ಮಾಡಲು ಮುಂದಾಗಿದ್ದೀರಾ. ಅಸ್ತಿಯನ್ನು ಉಳಿಸಲು ದಿಟ್ಟ ಕ್ರಮ ಕೈಗೊಳ್ಳುತ್ತಿರುವ ದಕ್ಷ ಅಧಿಕಾರಿಗಳ ಮೇಲೆ ಅಸ್ಪಶ್ಯತೆ ಕಾಯಿದೆ ಅಸ್ತ್ರವನ್ನು ಬಳಸಲು ಮುಂದಾಗಿರುವುದು ನಾಚಿಗೇಡು ಎಂದು ಶಿವಕುಮಾರ್ ಟೀಕಿಸಿದರು.
ಸಮಾಜದ ಆಸ್ತಿ ಅನ್ಯಕ್ರಾಂತವಾಗಿ ಇತರರಿಗೆ ಮಾರಾಟವಾಗಿರುವುದನ್ನು ದಾಖಲೆಗಳ ಸಮೇತ ದೂರು ನೀಡಿದ್ದರಿಂದ ಜಿಲ್ಲಾಧಿಕಾರಿಗಳು ಮನವಿ ಪರಿಶೀಲಿಸಿ, ಸುಳ್ಳು ಅಫಿಡವಿಟ್ ಸಲ್ಲಿಸಿರುವುದು ಗಮನಿಸಿ, ಜುಲೈ 4 ರಂದು ಭೂಮಿ ಪರಿವರ್ತನೆ ಅದೇಶವನ್ನು ರದ್ದುಪಡಿಸಿದ್ದಾರೆ.
ಎಸ್.ಮಹದೇವಯ್ಯ ಕ್ರಿಮಿನಲ್ ಪಿನ್: ಸಂಘದ ನಿರ್ದೇಶಕ ಮಹದೇವಯ್ಯ ಅವರೊಬ್ಬರೂ ಕ್ರಿಮಿನಲ್ ಪಿನ್ ಆಗಿದ್ದು, ದಿನನಿತ್ಯ ಅಧಿಕಾರಿಗಳು, ವಕೀಲರನ್ನು ಭೇಟಿ ಮಾಡಿ ಆದಿಕರ್ನಾಟಕ ಅಭಿವೃದ್ಧಿ ಸಂಘದಲ್ಲಿ ನಡೆದಿರುವ ಅಕ್ರಮಗಳನ್ನು ಮುಚ್ಚಿಹಾಕಲು ಸತತ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಓರ್ವ ಸಂಘದ ನಿರ್ದೇಶಕರಾಗಿ ಸಮಾಜದ ಆಸ್ತಿಯನ್ನು ಉಳಿಸಲು ಮುಂದಾಗದೆ ಆಕ್ರಮವಾಗಿ ಆಸ್ತಿ ಕಬಳಿಸಿಕೊಂಡಿರುವವರ ಪರವಾಗಿಯೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡುವುದು, ಸುಳ್ಳು ಮಾಹಿತಿಗಳನ್ನು ನೀಡದೇ ತಮ್ಮ ವ್ಯಕಿತ್ವ ಮತ್ತು ಘನತೆಗೆ ತಕ್ಕಂತೆ ನಡೆದುಕೊಳ್ಳಿ ಎಂದÀು ಶಿವಕುಮಾರ್ ವ್ಯಂಗ್ಯವಾಡಿದರು..
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ತಾ.ಪಂ. ಮಾಜಿ ಸದಸ್ಯ ನಲ್ಲೂರು ಸೋಮೇಶ್ವರ್, ಮುಖಂಡರಾದ ಚನ್ನಂಜಯ್ಯ, ಸಿದ್ದಯ್ಯನಪುರ ಗೋವಿಂದರಾಜು, ನಾಗವಳ್ಳಿ ನಾಗಯ್ಯ, ಸೋಮಣ್ಣ, ಹೆಬ್ಬಸೂರು ರಂಗಸ್ವಾಮಿ ಇತರರು ಇದ್ದರು.