ಕೋಲಾರದ ಅಭಿವೃದ್ದಿಗೆ 120 ಕೋಟಿ ರೂ.
ಕೋಲಾರ,ಆ,೨೯- ಬಿ.ಎಂ.ಮುಬಾರಕ್ ಅವರನ್ನು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೇವು ಅದರೆ ಅವರು ಚುನಾವಣೆ ಸಂದರ್ಭದಲ್ಲಿ ಮಾಡಿದ್ದೇನು ? ಚುನಾವಣೆಗೆ ಇನ್ನು ಒಂದು ವಾರ ಇರುವಾಗ ಜೆ.ಡಿ.ಎಸ್. ಪಕ್ಷವನ್ನು ಕುಮಾರಸ್ವಾಮಿ ಸಮ್ಮುಖದಲ್ಲಿ ಸೇರ್ಪಡೆಯಾಗಿ ಕಾಂಗ್ರೇಸ್ ಪಕ್ಷಕ್ಕೆ ವಂಚಿಸಿದರು,
ಆಗಲೇ ಅವರನ್ನು ಕಾಂಗ್ರೇಸ್ ಪಕ್ಷದಿಂದ ಅಮಾನತ್ತು ಪಡೆಸಲಾಗಿತ್ತು.ಅವರನ್ನು ಅಮಾನತ್ತು ಪಡೆಸಿದ್ದರೂ ಸಹ ಕಾಂಗ್ರೇಸ್ ಪಕ್ಷದಿಂದ ಗೆದ್ದ ಹಿನ್ನಲೆಯಲ್ಲಿ ವಿಪ್ ಜಾರಿ ಮಾಡಬಹುದಾಗಿದೆ. ಇದು ಕಾಂಗ್ರೇಸ್ ಬೈಲಾದಲ್ಲಿದೆ, ಹಾಗಾಗಿ ಅವರಿಗೆ ವಿಪ್ ಜಾರಿ ಮಾಡಿದ್ದೇವು, ಅವರನ್ನು ಅಮಾನತ್ತು ಪಡೆಸಿರುವುದಕ್ಕೂ ವಿಪ್ ಜಾರಿ ಮಾಡಿರುವುದಕ್ಕೂ ಸಂಬಂಧವಿಲ್ಲ. ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಸ್ವಷ್ಟ ಪಡೆಸಿದರು.
ನಗರಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹಾಜರಾದ ನಂತರ ಮಾದ್ಯಮದವ ರೊಂದಿಗೆ ಅವರು ಮಾತನಾಡಿ ಕಾಂಗ್ರೇಸ್ ಪಕ್ಷದಲ್ಲಿ ೧೨ ಸದಸ್ಯರ ಪೈಕಿ ಅವರನ್ನು ಹೊರತು ಪಡೆಸಿ ಉಳಿದ ೧೧ ಸದಸ್ಯರನ್ನು ಹಾಗೂ ಶಾಸಕರ ಗೆಸ್ಟ್ ಹೌಸ್‌ನಲ್ಲಿ ಸಭೆ ಕರೆದಿದ್ದೇವು. ನಸ್ಸೀರ್ ಆಹಮದ್, ಶಾಸಕರಾದ ಕೊತ್ತೊರು ಮಂಜುನಾಥ್, ನನ್ನ ಮೇಲಿನ ಹಾಗೂ ಕಾಂಗ್ರೇಸ್ ಪಕ್ಷದಲ್ಲಿನ ಅಭಿಮಾನದ ಹಾಗೂ ವಿಶ್ವಾಸ ಮೇರೆಗೆ ೨೧ ಮಂದಿ ಸದಸ್ಯರ ಸಂಖ್ಯ ಬಲವನ್ನು ಹೊಂದಿದ್ದೇವು. ಪುಡ್ ಅಶ್ವಥ್ ಅವರನ್ನು ಹೊರತು ಪಡೆಸಿ ಉಳಿದವರೆಲ್ಲಾರೂ ಹಾಜರಾಗಿದ್ದರು ಎಂದು ಹೇಳಿದರು,
ಇಷ್ಟು ದಿನಗಳಿಂದ ಅವರು ಕೋಳಿ ಕೊಗಿದರೇನೆ ಬೆಳಕಾಗುವುದು ಎಂಬಂತೆ ತಿಳಿದಿದ್ದರು.ನಾನು ಏನು ಮಾಡಿದರೂ ನಡೆಯುತ್ತೇ, ನಾನು ಹೇಳಿದಂತೆಯೇ ನಡೆಯುತ್ತೇ, ನಾನು ಹೇಳಿದವರೇ ಅಧ್ಯಕ್ಷರು, ಉಪಾಧ್ಯಕ್ಷರು ಅಗುತ್ತಾರೆ ಅಥಾವ ನಾನು ಏನು ಬೇಕಾದರೂ ಅಗಬಹುದೆಂಬ ಭಾವನೆ ಹೊಂದಿದ್ದರು ಅದರೆ ಇಂದು ಏನಾಯಿತು ? ಎಂದು ಪ್ರಶ್ನಿಸಿದರು,
ಈ ಸಂದರ್ಭದಲ್ಲಿ ಶಾಸಕರಾದ ಕೊತ್ತೂರು ಮಂಜುನಾಥ್,ನೊತನ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ನಗರಸಭೆ ಸದಸ್ಯರಾದ ಅಪ್ಸರ್, ಅಂಬರೀಷ್. ಶಂಕರ್, ಪ್ರವೀಣ್ ಗೌಡ, ರಾಕೇಶ್ ಗೌಡ, ಗ್ಯಾರೆಂಟಿ ಅನುಷ್ಟನಾ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಮೈಲಂಡಹಳ್ಳಿ ಮುರಳಿ, ಸೀಸಂದ್ರ ಗೋಪಾಲಗೌಡ, ಕನ್ನಡ ಸಂಘದ ಅಧ್ಯಕ್ಷ ತ್ಯಾಗರಾಜ್, ಮುಖಂಡರಾದ ಅಮರ್, ಬಾಲು, ಜೆ.ಕೆ.ಜಯರಾಮ್. ಕುರಿಗಳ ರಮೇಶ್, ಜಗದೀಶ್,ಚಂದ್ರಮೌಳಿ. ಮುಂತಾದವರು ಹಾಜರಿದ್ದರು,