ಕಾನೂನು ಗೌರವಿಸುವವರಿಗೆ ನಾವು ಗೌರವಿಸುತ್ತೇವೆ:ಸಿಪಿಐ ತುಳಸಿಗೇರಿ
ತಾಳಿಕೋಟೆ:ಆ.೨೯: ಯಾವುದೇ ಹಬ್ಬ ಹರಿದಿನಗಳಾಗಲಿ ಆಯಾ ಕೋಮುಗಳಿಗೆ ಸಂಬAದಿತವಾಗಿದ್ದರೂ ಅವುಗಳ ಒಳ್ಳೆಯ ನೀತಿ ಪಾಠಗಳನ್ನು ಕಲಿಸುತ್ತಾ ಸಾಗಿಬಂದಿವೆ ಆ ಹಬ್ಬಗಳಂತೆ ನಡೆ ನುಡಿಗಳಿಂದ ಅವುಗಳ ಆದರ್ಶಗಳನ್ನು ಪಾಲನೆ ಮಾಡುತ್ತಾ ಸಾಗಿದರೆ ಅದಕ್ಕೆ ಮಹತ್ವದ ಬೆಲೆ ಬರುತ್ತದೆ ಎಂದು ಮುದ್ದೇಬಿಹಾಳ ಸರ್ಕಲ್ ಪೊಲೀಸ್ ಇನ್ಸಪೇಕ್ಟರ್‌ರಾದ ಅಧಿಕಾರಿ ಮಲ್ಲಿಕಾರ್ಜುನ ತುಳಸಿಗೇರಿ ಅವರು ಹೇಳಿದರು.
ಬುಧವಾರರಂದು ಗಣೇಶೋತ್ಸವ ಆಚರಣೆ ಕುರಿತು ಹಾಗೂ ಈದ್ ಮೀಲಾದ್ ಆಚರಣೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾದ ಶಾಂತಿ ಸಮಿತಿಯ ಸದಸ್ಯರ ಹಾಗೂ ಗಣೇಶೋತ್ಸವ ಮಂಡಳಿಯ ಸದಸ್ಯರ ಮತ್ತು ಈದ್ ಮೀಲಾದ್ ಸದಸ್ಯರನ್ನುದ್ದೇಶಿಸಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಹಬ್ಬಗಳಲ್ಲಿ ಪ್ರೀತಿ ಸಡಗರ ಬಾಂದವ್ಯಗಳು ಒಂದುಗೂಡಿ ಸಂಭ್ರಮದ ವಾತಾವರಣ ನಿರ್ಮಾಣವಾಗಬೇಕೆಂದರು. ಇಂತಹ ಮಹತ್ವದ ಹಬ್ಬಗಳನ್ನು ನೋಡಲು ಅವುಗಳ ಆಚರಣೆ ಕುರಿತು ಅರೀತುಕೊಳ್ಳಲು ಸುಶಿಕ್ಷೀತ ಹಾಗೂ ವಿದ್ಯಾವಂತ ಜನತೆ ಆಗಮಿಸುತ್ತಿರುವದು ವಿಶೇಷ ಅಂತಹ ಸಮಯದಲ್ಲಿ ಯಾವುದೇ ತರಹದ ಉದ್ದಟತನದ ಘಟನೆಗಳು ಜರುಗಿದರೆ ಒಳ್ಳೆಯ ವಿದ್ಯಾವಂತರೂ ಸಹ ತೊಂದರೆಯನ್ನು ಅನುಬವಿಸಬೇಕಾಗುತ್ತದೆ ಎಂದರು. ಆಯಾ ಹಬ್ಬಗಳ ಸಂಬAದಿಸಿದ ಗುಂಪಿನ ವಾತಾವರಣ ವಿಕ್ಷೀಸಲು ಬಂದAತಹ ಸುಶಿಕ್ಷೀತರೂ ಸಹ ಪಾಲಾಗಬೇಕಾಗುತ್ತದೆ ಇದರಿಂದ ಪೊಲೀಸ್ ಇಲಾಖೆ ತನ್ನಕಾರ್ಯ ಕೈಕೊಳ್ಳಬೇಕಾಗುತ್ತದೆ ಎಂದರು. ಒಳ್ಳೆಯ ಜನರು ಕೆಟ್ಟ ವರ್ತನೆಗೆ ಒಳಗಾಗಬಾರದೆಂದು ತಿಳಿ ಹೇಳಿದ ಅಧಿಕಾರಿ ತುಳಸಿಗೇರಿ ಅವರು ಗಣೇಶೋತ್ಸವ ಮಂಡಳಿಯವರಿಗೆ ಭರಣಾ ಮಾಡಿಕೊಡಲು ಫಾರ್ಮ ನೀಡಲಾಗುತ್ತದೆ ಅದನ್ನು ಭರಣಾ ಮಾಡಿಕೊಡಿ ಅದರಲ್ಲಿ ತಾವು ನೀಡಿದ ಮಾರ್ಗಸೂಚಿಯಂತೆ ಆಚರಣೆ ಕಾರ್ಯಕ್ಕೆ ಮುಂದಾಗಬೇಕು ಬದಲಾವಣೆ ಯಾಗಬಾರದೆಂದು ಹೇಳಿದ ಅವರು ಯಾರು ಕಾನೂನನ್ನು ಗೌರವಿಸುತ್ತಾರೆ ಅವರನ್ನು ನಾವು ಗೌರವಿಸುತ್ತೇವೆಂದರು.
ಇನ್ನೋರ್ವ ಪಿಎಸ್‌ಐ ರಾಮನಗೌಡ ಸಂಕನಾಳ ಅವರು ಮಾತನಾಡಿ ಗಣೇಶೋತ್ಸವ ಮಂಡಳಿಯವರು ಆ ಪ್ರತಿಷ್ಠಾಪನಾ ಸ್ಥಳಗಳನ್ನು ನಮೂದಿಸಿ ಜನತೆಗೆ ಹೋಗಿ ಬರಲು ಅಡೆತಡೆ ಆಗದಂತೆ ಹಾಗೂ ಕೆಲವೆಡೆ ವಾಹನ ಸಂಚಾರಕ್ಕೂ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಆಯಾ ಪ್ರತಿಷ್ಠಾಪನಾ ಸ್ಥಳಕ್ಕೆ ಸಂಬAದಿಸಿ ಸ್ವಯಂ ಸೇವಕರನ್ನು ನೇಮಿಸಬೇಕು ೫ ದಿನಗಳು ಹಾಗೂ ೭ ದಿನಗಳು ಮತ್ತು ೯ ದಿನಗಳವರೆಗೆ ಪ್ರತಿಷ್ಠಾಪಿಸುವಂತಹ ಸಂಬAದಿತ ಮಂಡಳಿಯವರು ವ್ಯವಸ್ಥಿತವಾಗಿ ತಿಳುವಳಿಕೆ ನೀಡಿ ಆ ದಿನಗಳ ತಕ್ಕಂತೆ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಾದರಿಯ ಕಾರ್ಯಕ್ರಮವಾಗಿ ನಿರ್ಮಾಣವಾಗುವಂತೆ ಮಾಡಬೇಕೆಂದರು. ಡಿಜೆ ಇನ್ನೀತರ ಕೆಲವು ಅರ್ಥವಿಲ್ಲದ ಕಾರ್ಯಗಳಿಗೆ ಕರ್ಚು ವೆಚ್ಚ ಮಾಡದೇ ಪ್ರಕೃತಿ ಅನುಗುಣವಾಗಿ ಮಣ್ಣಿನ ಗಣಪತಿಗಳನ್ನು ಕೂಡ್ರಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸುವಂತಹ, ಪ್ರಶಸ್ತಿ ಪತ್ರ ನೀಡುವಂತಹ ಕಾರ್ಯ ಮಾಡಿ ಎಂದು ವಿವಿಧ ರೀತಿಯ ಸಲಹೆ ನೀಡಿದ ಅಧಿಕಾರಿಗಳು ಈ ಹಿಂದಿನAತೆ ಎಲ್ಲ ಗಜಾನನ ಮಂಡಳಿಯವರು ಸಹಕಾರದ ಮನೋಭಾವನೆಯಿಂದ ನಡೆದುಕೊಂಡು ಒಂದು ಒಳ್ಳೆಯ ಮಾದರಿಯ ಆಚರಣೆಯನ್ನು ತಾವು ಮಾಡಿದಲ್ಲಿ ಆಯಾ ಸಂಬAದಿತ ಬಡಾವಣೆಯ ಗಜಾನನ ಮಂಡಳಿಯವರಿಗೆ ನಾನೇ ಸ್ವತಃ ಸನ್ಮಾನಿಸಿ ಗೌರವಿಸುತ್ತೇನೆಂದರು.
ಇನ್ನೋರ್ವ ಅಪರಾಧ ವಿಭಾಗ ಪಿಎಸ್‌ಐ ಆರ್.ಎಸ್.ಭಂಗಿ ಅವರು ಮಾತನಾಡಿ ಗಣೇಶ ಹಬ್ಬ ಆಚರಿಸುವ ಸಮಯದಲ್ಲಿ ಆಯಾ ಬಡಾವಣೆಗಳ ಮಂಡಳಿಯವರು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಸರ್ಕಾರದಿಂದ ತಮಗೆ ಆಗಮಿಸಿದ ನಿಯಮಗಳನ್ನು ಸಮಿತಿಯವರು ಕೈಗೊಳ್ಳಬೇಕಾದಂತವುಗಳನ್ನು ಓದಿ ಹೇಳಿದರಲ್ಲದೇ ಪರವಾನಿಗೆಯೊಂದಿಗೆ ವಿದ್ಯುತ್ ಸರಬರಾಜು ಮಾಡಿಕೊಳ್ಳಬೇಕು, ಡಿಜೆ ಅಂತವುಗಳನ್ನು ನಿಷೇದಿಸಲಾಗಿದೆ, ವಿಸರ್ಜನೆ ಸಮಯದಲ್ಲಿ ಯಾವುದೇ ತಂಟೆ ತಕರಾರುಗಳು ಬರದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರ ಹೊರಡಿಸಿದ ನಿಯಮಗಳ ಕುರಿತು ಓದಿ ಹೇಳಿದ ಅವರು ಬೆಳಿಗ್ಗೆ ೬ ಗಂಟೆಯಿAದ ರಾತ್ರಿ ೧೦ ಗಂಟೆಯವರೆಗೆ ವಿಸರ್ಜನೆ ಕಾರ್ಯ ಮುಗಿಸಬೇಕೆಂಬ ನಿರ್ಣಯವನ್ನು ನಿರ್ದರಿಸಿದ್ದನ್ನು ಉಪಸ್ಥಿತ ಸಮಿತಿಯವರಿಗೆ ತಿಳಿಸಿದರು.
ಪುರಸಭೆ ಸಿಬ್ಬಂದಿಯವರು ಹಾಗೂ ಹೆಸ್ಕಾಂ ಸಂಬAದಿತ ಸಿಬ್ಬಂದಿಯವರು ಮಾತನಾಡಿ ಈ ಹಿಂದಿನಿAದ ಕೈಕೊಂಡು ಬರಲಾಗುತ್ತಿರುವ ಕಾರ್ಯಗಳಂತೆ ಇನ್ನೂಮುಂದೆಯೂ ಕೈಕೊಂಡು ಈ ಎರಡು ಹಬ್ಬಗಳ ಆಚರಣೆಗೆ ಅನುವು ಮಾಡಿಕೊಡಲಾಗುವುದೆಂದರು.
ಇದೇ ಸಮಯದಲ್ಲಿ ಗಣ್ಯರಾದ ಬಿ.ಎಸ್.ಪಾಟೀಲ(ಯಾಳಗಿ) ಹಾಗೂ ರಜಾಕ ಮನಗೂಳಿ, ಜೈಭೀಮ ಮುತ್ತಗಿ ಅವರು ಮಾತನಾಡಿ ತಾಳಿಕೋಟೆ ಪಟ್ಟಣವು ಶಾಂತಿ ಕಾಪಾಡತಕ್ಕಂತಹ ಪಟ್ಟಣವಾಗಿದೆ ಈ ಹಿಂದೆ ಕಾರಣಾಂತರದಿAದ ವ್ಯಾಪಾರ ವೈಹಿವಾಟಕ್ಕೆ ತೊಂದರೆಯಾಗಿತ್ತು ಭಾರತೀಯ ಸಂಸ್ಕೃತಿಯ ಯಾವುದೇ ಹಬ್ಬವಾಗಿದ್ದರೂ ಅದಕ್ಕೆ ವಿಶೇಷ ಸಹಕಾರ ಕೊಡುವ ಕಾರ್ಯ ಮಾಡಬೇಕೆಂದರು. ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಶಾಂತಿ ಎಂಬುದು ಇದ್ದೇ ಇರುತ್ತದೆ ಎಂದು ಈದ್ ಮೀಲಾದ್ ಹಬ್ಬ ಎಂಬುದು ಮುಸ್ಲಿಂರ ಹಬ್ಬಗಳಲ್ಲಿ ಮಹತ್ವದ ಹಬ್ಬ ಇದಾಗಿದೆ ಇದು ಮಹ್ಮದ ಪೈಗಂಬರ ಅವರು ಹುಟ್ಟಿದ ಹಬ್ಬ ಆದರ್ಶ ಪಾಲನೆ ಮಾಡುವಂತಹ ಹಬ್ಬವಾಗಿದೆ ಕಾರಣ ಎಲ್ಲ ಹಬ್ಬಗಳನ್ನು ಈಹಿಂದಿನಿAದ ಆಚರಿಸುತ್ತಾ ಬಂದAತೆ ಆಚರಿಸೋಣವೆಂದು ಸಲಹೆ ನೀಡಿದರು.
ಈ ಸಮಯದಲ್ಲಿ ಸಿದ್ದನಗೌಡ ಪಾಟೀಲ, ಪ್ರಭುಗೌಡ ಮದರಕಲ್ಲ, ಸಿಕಂದರ ವಠಾರ, ಕಾಶಿನಾಥ ಮುರಾಳ, ಕುಮಾರಗೌಡ ಪಾಟೀಲ, ಅಬುಬಕರ ಲಾಹೋರಿ, ನಿಂಗಪ್ಪ ಕುಂಟೋಜಿ, ಕೆ.ಯು.ಬಿಳವಾರ, ಎಂ.ಎಫ್.ರAಗನಪೇಠ, ಎಸ್.ಎಂ.ಸಾರವಾಡ, ಎಂ.ಜಿ.ಪಾಟೀಲ, ಮಂಜು ಶೆಟ್ಟಿ, ರಜಾಕ ಮನಗೂಳಿ, ಯಲ್ಲೇಶ ದಾಯಪುಲೆ, ಡಿ.ವ್ಹಿ.ಪಾಟೀಲ, ಸಂಬಾಜಿ ವಾಡಕರ, ಎಂ.ಎಸ್.ಸರಶೆಟ್ಟಿ, ಆನಂದ ಹಜೇರಿ, ಮೊದಲಾದವರು ಉಪಸ್ಥಿತರಿದ್ದರು.
ಪೊಲೀಸ್ ಸಿಬ್ಬಂದಿ ಸಿದ್ದನಗೌಡ ದೊಡಮನಿ ನಿರೂಪಿಸಿ ವಂದಿಸಿದರು.