ರಾಮ್‌ಗಿರಿ ಸ್ವಾಮೀಜಿ ಹೇಳಿಕೆಗೆ ಖಂಡನೆ, ಪ್ರತಿಭಟನೆ
ಕೋಲಾರ,ಆ,೨೯-ಮಹಾರಾಷ್ಟ್ರದ ರಾಮ್‌ಗಿರಿ ಸ್ವಾಮಿಜಿ ಪ್ರವಾದಿ ಮಹ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ನಗರ ಹೊರ ವಲಯದ ಟಮಕ ಸಮೀಪದ ಜಿಲ್ಲಾ ಆಡಳಿತ ಕಚೇರಿ ಎದುರು ಮುಸ್ಲಿಂ ಸಂಘಟನೆಗಳು ಪ್ರತಿಭಟಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು,
ನಗರದ ಅಂಜುಮನ್ ಇಸ್ಲಾಮಿಯಾ ಸಂಘಟನೆ ಹಾಗೂ ಕೆಲ ಮುಸ್ಲಿಂ ಸಂಘಟನೆಗಳು ಸ್ವಾಮೀಜಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು, ಪ್ರವಾದಿ ಮಹ್ಮದ್ ಪೈಗಂಬರ್ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದ ಮುಸ್ಲಿಂ ಸಮುದಾಯ ಸ್ವಾಮೀಜಿಯನ್ನ ಬಂಧಿಸುವಂತೆ ಒತ್ತಾಯ ಮಾಡಿ ಘೋಷಣೆಗಳನ್ನು ಕೊಗಿದರು,
ಪ್ರತಿಭಟನೆಯಲ್ಲಿ ಅಂಜುಮಾನ್ ಇಸ್ಲಾಮಿಯ ಅಧ್ಯಕ್ಷ ಜಮೀರ್ ಆಹಮದ್ ನೇತ್ರತ್ವದಲ್ಲಿ ನಗರದ ವಿವಿಧ ಆಲ್ಪಸಂಖ್ಯಾತ ಸಂಘಟನೆಗಳ ನೂರಾರು ಯುವಕರು ಭಾಗವಹಿಸಿ, ಜಿಲ್ಲಾ ಆಡಳಿತ ಕಚೇರಿಯ ಮುಂದೆ ಪ್ರತಿಭಟಸಿದ ಬಳಿಕ ಅಪರ ಜಿಲ್ಲಾಧಿಕಾರಿ ಮಂಗಳರಿಗೆ ಮನವಿಪತ್ರ ಸಲ್ಲಿಸಿದರು.