ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಹಿಂಪಡೆಯಲು ಆಗ್ರಹಗೊಂಡ ಸಮಾಜ ಮುಖಂಡರಿAದ ಬೃಹತ್ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹುಮನಾಬಾದ್:ಆ.೨೯:ಮೂಡಾ ಹಗರಣಕ್ಕೆ ಸಂಬಧಿಸಿದತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಹಿಂಪಡೆಯುವAತೆ ಆಗ್ರಹಿಸಿ, ಪಟ್ಟಣದ ತಹಸೀಲ್ ಕಚೇರಿಯಲ್ಲಿ ಬುಧವಾರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗ, ಗೊಂಡ ಸಮಾಜ, ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ವಿವಿಧ ಜನಪರ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಕೆಲ ಪ್ರತಿಭಟನಾಕಾರರು ಮಾತನಾಡಿ,ಪ್ರತಿಭಟನಾ ಸಮಿತಿ ಅಧ್ಯಕ್ಷ ಶಿವರಾಜ ಚೀನಕೇರಿ೪ ದಶಕದಿಂದ ಕಪ್ಪು ಚುಕ್ಕೆ ಇಲ್ಲದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ, ಪರಿಶುದ್ಧ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರನ್ನು ತಲೆಬುಡವಿಲ್ಲದ ಮುಡಾ ಹಗರಣ ನೆಪದಲ್ಲಿ ಅಧಿಕಾರದಿಂದಗೆಳಗಿಳಿಸುವ ಹುನ್ನಾರ ಬಿಜೆಪಿ ನಡೆಸುತಿದ್ದು ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.ಚುನಾವಣಾ ಪೂರ್ವದಲ್ಲಿ ಪ್ರನಾಳಿಕೆಯಲ್ಲಿ ಕೊಟ್ಟ ಭರವಸೆಈಡೇರಿಸುತ್ತಿರುವುದನ್ನು ಸಹಿಸಲು ಆಗದಿರುವುದರಿಂದ ಬಿಜೆಪಿಗರು ಇಂಥ ಕುತಂತ್ರಕ್ಕೆ ಕೈಹಾಕುತಿದ್ದಾರೆ. ಆದರೇ ಅದರಲ್ಲಿ ಯಾವುದೇ ಕಾರಣಕ್ಕೂ ಯಶಸ್ಸು ಸಿಗುವುದಿಲ್ಲವೆಂದು ಭವಿಷ್ಯ ನುಡಿದರು.
ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಿಂದ ಶಿವಾಜಿ ವೃತ್ತ, ಬಸವೇಶ್ವರ ವೃತ್ತ, ಬಾಲಾಜಿ ಮಂದಿರ, ಸರ್ದಾರ್ ವಲ್ಲಭಭಾಯಿ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಎಪಿಎಂಪಿ ಗೇಟ್, ರಾಮಚಂದ್ರ ವೀರಪ್ಪ ಆರ್ಯ ವೃತ್ತದ ಮಾರ್ಗವಾಗಿ ತಹಸೀಲ್ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ನಡೆಸಿ ರಾಷ್ಟçಪತಿ ಹೆಸರಿಗೆ ಬರೆದ ಮನವಿ ಪತ್ರ ತಹಸೀಲ್ದಾರ್‌ಗೆ ಸಲ್ಲಿಸಿದರು.
ಮಲ್ಲಿಕಾರ್ಜುನ, ಪವನಗೊಂಡ, ನಿತಿನ ಬಿರಾದಾರ, ಪವನ ಮದಕಟ್ಟಿ, ರಾಜಶೇಖರರೆಡ್ಡಿ, ಆಕಾಶ ಪವಿತ್ರ, ಅಶೋಕ ಸೊಂಡೆ, ಪರಮೇಶ್ವರ ಪಾಟೀಲ್, ದೇವಿಂದ್ರಪ್ಪ ಪೋಲಾ, ಪಾಂಡುರAಗ ಖಂಡಗೊAಡ, ಸೋಮು ಡಾಂಗೆ, ಆನಂದ ಖಂಡಗೊAಡ, ಅನೀಲ ದೊಡ್ಡಿ ,ಮತ್ತಿತರರು ಮಾತನಾಡಿದರು. ಪ್ರತಿಭಟನೆಯಲ್ಲಿ ಸಾವಿರಾರು ಅಧಿಕ ಜನರು ಭಾಗವಹಿಸಿ,
ಗೊಂಡ ಸಮಾಜ ಹಾಗೂ ವಿವಿಧ ಸಂಘಟನೆಗಳಿAದ ನಡೆದ ಈ ಪ್ರತಿಭಟನೆಯಲ್ಲಿ ೪೦೦ಕ್ಕೂ ಅಧಿಕ ಕುರಿಗಳ ಹಿಂಡಿನೊAದಿಗೆ ಮಾರ್ಗದುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಾಗೂ ರಾಜ್ಯಪಾಲ ಥಾವರಚಂದ್ ಗೆಹಲೋತ್ ವಿರುದ್ಧ ಘೋಷಣೆಗಳನ್ನು ಹಾಕಿದರು.
ಈ ಸಂದರ್ಭದಲ್ಲಿ ಶಿವರಾಜ ಚೀನಕೇರಿ, ಪಾಂಡುರAಗ ಖಂಡಗೊAಡ, ಬ್ಯಾಂಕ್‌ರೆಡ್ಡಿ, ಅಶೋಕ ಸೊಂಡೆ, ತಾನಾಜಿ ಪಾಟೀಲ್, ಪವನ ಗೊಂಡ, ಉಮೇಶ ಕಲ್ಲೂರ್, ಅನಿಲ್ ದೊಡ್ಡಿ, ಆನಂದ ಖಂಡಗೊAಡ, ಬಸು ಹಿಲಾಲಪೂರ್, ಆಕಾಶ ಪವಿತ್ರ, ಶಿವರಾಜ ಫುಲ್ಲೆ, ಮಲ್ಲಿಕಾರ್ಜುನ್ ಮೋಳಕೇರಾ, ಅಶೋಕ ಸುಲ್ತಾನಬಾದ್, ಪಂಡಿತ ಬಾವಗೆ, ಪರಮೇಶ್ವರ ಪಾಟೀಲ್, ಗುಂಡಪ್ಪ ಹಣಮಂತವಾಡಿ, ವಿಠಲ್ ಬೇನ್ ಚಿಂಚೋಳಿ, ಮಾಣ ಕ ಬೆಳಕೇರಾ, ದೇವೇಂದ್ರಪ್ಪ ಪೋಲಾ, ವೀರೇಶ್, ಅರುಣ್, ಸೇರಿದಂತೆ ಕುರುಬ ಸಮಾಜದ ಅನೇಕ ಮುಖಂಡರು ಇದ್ದರು ,