ಯಾರಿಗೆ ಪುರಸಭೆ ಗದ್ದುಗೆ ..?ಸೆ.೩ಕ್ಕೆ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದ ಚುನಾವಣೆ ಫಿಕ್ಸ್ತೆರೆಮರೆಯಲ್ಲಿ ಹೆಚ್ಚಿದ ತೀವ್ರ ಕಸರತ್ತು
(ರೇವಣಸಿದ್ದಯ್ಯ ಮಠ)
ಕೆಂಭಾವಿ:ಆ.೨೯: ಪಟ್ಟಣದ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಎರಡು ಪಕ್ಷಗಳಲ್ಲಿ ಅಧಿಕಾರದ ಗುದ್ದುಗೆ ಹಿಡಿಯಲು ತೆರೆ ಮರೆಯಲ್ಲಿ ತೀವ್ರ ಪೈಪೋಟಿ ನಡೆದಿರುವಂತಹದು ನಿಜ,ಸುರಪುರದ ತಹಸೀಲ್ದಾರ ಕೆ.ವಿಜಯಕುಮಾರ ಸೋಮವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು ಇದೇ ಸೆ.೦೩ ಪುರ ಪಿತೃಗಳ ಗದ್ದುಗೆ ಏರುವ ದಿನ ಪ್ರಕಟಿಸಿದ್ದಾರೆ, ಒಟ್ಟು ೨೩ ಸದಸ್ಯ ಸ್ಥಾನವಿರುವ ಪುರಸಭೆಯಲ್ಲಿ ಬಿಜೆಪಿಯ ೧೩, ಕಾಂಗ್ರೇಸನ ೦೮ ಮತ್ತು ೦೨ ಪಕ್ಷೇತರ ಸದಸ್ಯರು ಎರಡು ವರ್ಷ ಎಂಟು ತಿಂಗಳುಗಳ ಹಿಂದೆ ಜನಾದೇಶದಿಂದ ಆಯ್ಕೆಯಾಗಿದ್ದರು, ಮ್ಯಾಜಿಕ್ ನಂಬರನಲ್ಲಿ ಪಾಸಾಗಿರುವ ಬಿಜೆಪಿಗೆ ತನ್ನ ಸದಸ್ಯರನ್ನು ಹಿಡಿದಿಟ್ಟುಕೊಂಡು ಅಧಿಕಾರವೇರಲು ಕಸರತ್ತು ನಡೆಸಿದರೆ ಇಬ್ಬರುಪಕ್ಷೇತರ ಸದಸ್ಯರ ಬೆಂಬಲ ಪಡೆದುಕೊಂಡು ಕಾಂಗ್ರೇಸ್ ತನ್ನ ಬಲವನ್ನು ೧೦ ಕ್ಕೆ ಮಾಡಿಕೊಂಡಿದೆ.
೧೩ ಸದಸ್ಯ ಬಲದ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು ಮೊದಲ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾದುಕುಳಿತಿದೆ ಸರ್ಕಾರ ನಿಗದಿ ಪಡಿಸಿದ ಮೀಸಲಾತಿ ಪಟ್ಟಿಯ ಅನ್ವಯ ಈ ಬಾರಿಯ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ( ಬಿಸಿಎ ಪುರುಷ)ಕ್ಕೆ ಮೀಸಲಾಗಿದ್ದರೆ,ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾಗಿದೆ.ಸದ್ಯ ಬಿಜೆಪಿಯ ಚುನಾಯಿತ ಸದಸ್ಯರಲ್ಲಿ ಮೂರು ಜನ ಮಹಿಳೆಯರು ಮತ್ತು ಇಬ್ಬರು ಪುರುಷ ಅಭ್ಯರ್ಥಿಗಳಿದ್ದು ಪ್ರಮುಖವಾಗಿ ಸದ್ಯ ಓರ್ವ ಮಹಿಳಾ ಮತ್ತು ಇಬ್ಬರು ಪುರುಷ ಅಭ್ಯರ್ಥಿಗಳ ಮದ್ಯೆ ತೀವ್ರವಾದ ಹಣಾಹಣಿ ಇದೇ ಆದರೆ ಪಕ್ಷ ಯಾರಿಗೆ ಮಣೆ ಹಾಕುತ್ತದೇ ಎನ್ನುವದು ಕಾದು ನೋಡಬೇಕಾಗಿದೆ, ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಬರುವ ಕೆಂಭಾವಿಯು ಸಚಿವರಿಗೆ ಅತ್ಯಂತ ಮಹತ್ವವಾದ ಪಟ್ಟಣ ಸಚಿವರು ಪಟ್ಟಣಕ್ಕಾಗಿ ಅನೇಕ ಮಹತ್ವ ಪೂರ್ಣವಾದ ಯೋಜನೆಗಳನ್ನು ಕೆಂಭಾವಿಗೆ ತಂದು ಪಟ್ಟಣದ ಅಭಿವೃದ್ಧೀ ಕಾರ್ಯ ಮಾಡಿದ್ದಾರೆ, ಅದರಂತೆ ಬಿಜೆಪಿಯ ಜಿಲ್ಲಾಧ್ಯಕ್ಷರ ತವರಿಗೆ ಸಮೀಪವಿರುವ ಕೆಂಭಾವಿಯು ಪುರಸಭೆಯ ಚುನಾವಣಾ ಸಂದರ್ಭದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರAತೆ ಹಗಲಿರುಳು ಸುತ್ತಾಡಿ ಪಕ್ಷದ ಬಲ ಮ್ಯಾಜಿಕ್ ಸಂಖ್ಯೆಗೆ ತರುವಲ್ಲಿ ಇವರ ಪಾತ್ರ ಮಹತ್ವದಾಗಿದೆ. ಇಬ್ಬರಿಗೂ ಸಹ ಈ ಗದ್ದುಗೆಯ ಸ್ಥಾನ ಅತ್ಯಂತ ಮಹತ್ವ ಪೂರ್ಣವಾಗಿದೆ ,
ಇಬ್ಬರೂ ಪಕ್ಷೇತರರ ಬೆಂಬಲ ಮತ್ತು ಸಂಸದ, ಶಾಸಕರ ಬಲದಿಂದ ಮ್ಯಾಜಿಕ ನಂಬರಿನ ಅರ್ಹತೆ ಪಡೆದಿರುವ ಕಾಂಗ್ರೇಸ್ ಪಕ್ಷಕ್ಕೆ ಕೇವಲ ಒಂದು ಸಂಖ್ಯೆ ಬೇಕಿದ್ದು , ರೇಸಾರ್ಟ ರಾಜಕೀಯ ಪಟ್ಟಣದಲ್ಲು ನೋಡಬೇಕಾಗಯತ್ತಾ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ,
ಸದ್ಯ ಎಲ್ಲೋ ಒಂದು ಕಡೇ ಒಗ್ಗಟ್ಟಿನ ಕೊರತೆ ಎದರುಸಿತ್ತೀರುವ ಬಿಜೆಪಿಗೆ ಅಲ್ಲಿನ ಕೇಲ ಅತೃಪ್ತ ಮನಸ್ಸುಗಳು ಕಾಂಗ್ರೇಸ್ ನಾಯಕರ ಮನೆಯ ಬಾಗಿಲನ್ನು ತಟ್ಟಿಬಂದಿವೆ ಎನ್ನುವ ಮಾತುಗಳು ಕೇಳಿಬರುತಿದ್ದು, ಉಭಯ ಪಕ್ಷಗಳ ತರೆಮರೆಯ ಕಸರತ್ತಿನ ಫಲ ಸೆ.೦೩ರಂದು ದೊರೆಯಲಿದೆ.
ಸದಸ್ಯರ ಬಲಾಬಲ
ಕೆಂಭಾವಿಯ ಪುರಸಭೆ ಒಟ್ಟು ಸದಸ್ಯರ ಸಂಖ್ಯೆ ೨೩
ಬಿಜೆಪಿ-೧೩ ಕಾಂಗ್ರೇಸ್ ೦೮ ಹಾಗೂ ೨ ಪಕ್ಷೇತರ ಸದಸ್ಯರು ಚುನಾಯಿತರಾಗಿದ್ದಾರೆ, ಸದ್ಯದ ಪರಿಸ್ಥಿತಿಯಲ್ಲಿ ಇಬ್ಬರು ಪಕ್ಷೇತರ ಬೆಂಬಲದಿAದ ಕಾಂಗ್ರೇಸ್ ಸದಸ್ಯರ ಸಂಖ್ಯೆ ೧೦ಕ್ಕೆ ಎರಿದೆ.