ಡಿಎಸ್ಪಿ ಬಸವರಾಜ ಯಲಿಗಾರ ಸೇರಿ ಮೂವರಿಗೆ ಕದಂಬ ಸೇವಾ ರತ್ನ ಪ್ರಶಸ್ತಿ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೨೯:ಕರ್ನಾಟಕದ ಕನ್ನಡಪರ ದೀಕ್ಷಾಬದ್ಧ ಸಂಘಟನೆಯಾದ ಕದಂಬ ಸೈನ್ಯ ಹಾಗೂ ಕದಂಬ ಮಯೂರವರ್ಮ ಚಾಲುಕ್ಯ ಇಮ್ಮಡಿ ಪುಲಕೇಶಿ ಮೂರ್ತಿ ಪ್ರತಿಷ್ಠಾಪನ ಹೋರಾಟ ಸಮಿತಿ ಸಂಯುಕ್ತವಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ ಕರುನಾಡ ಉತ್ಸವ ಹಾಗೂ ಕದಂಬ ಹಾಗೂ ಚಾಲುಕ್ಯ ವೈಭವದ ಸಿಹಿ ನೆನಪು ಕಾರ್ಯಕ್ರಮವನ್ನು ಆಯೋಜಿಸಿದ್ದು ಪ್ರತಿವರ್ಷದಂತೆ ಈ ಸಲವು ಕನ್ನಡಪರ ಹೋರಾಟ ಸ್ವಾಭಿಮಾನ ಕನ್ನಡ ಪರ ಸಂಘಟನೆಗಳಿಗೆ ನೆರವು ನೀಡಿದ ಮಹನೀಯರಿಗೆ ಕದಂಬ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. ಈ ವರ್ಷ ವಿಜಯಪುರ ಜಿಲ್ಲೆಯಿಂದ ಡಿಎಸ್ಪಿ ಬಸವರಾಜ ಯಲಿಗಾರ ಸೇರಿ ಮೂವರು ಕದಂಬ ಸೇವಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈ ಸಲವು ನಮ್ಮ ವಿಜಯಪುರ ಜಿಲ್ಲೆಯಿಂದ ಅಪ್ಪಟ ಕನ್ನಡ ಅಭಿಮಾನಿಗಳಾದ ಹಾಗೂ ಕನ್ನಡಪರ ಅನೇಕ ಸಾಹಿತಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದಾ ಕನ್ನಡಿಗರ ಹೆಮ್ಮೆಯಾಗಿ ಸಮಾಜ ಹಾಗೂ ಸಾರ್ವಜನಿಕ ಸೇವೆಗಳನ್ನು ಮಾಡುತ್ತಿರುವ ಡಿಎಸ್ಪಿ ಬಸವರಾಜ ಯಲಿಗಾರ, ವಿಜಯಪುರ ರಾಷ್ಟ್ರೀಯ ಜೈ ಭೀಮದಳದ ರಾಜ್ಯಾಧ್ಯಕ್ಷ, ನ್ಯಾಯವಾದಿ ನಾಗರಾಜ ಲಂಬು ಹಾಗೂ ನಿರ್ಮಾಣ ಸಮಿತಿಯ ಕಾನೂನು ಸಲಹೆಗಾರ ಕೆ.ಎಂ. ಕೂಡಲಗಿ ಅವರನ್ನು ವಿಜಯಪುರ ಜಿಲ್ಲೆಯಿಂದ ಕದಂಬ ಸೇವಾ ರತ್ನ ಪ್ರಶಸ್ತಿಗೆ ಜಿಲ್ಲಾ ಕಮಿಟಿಯು ಆಯ್ಕೆ ಮಾಡಿ ರಾಜ್ಯ ಕಮಿಟಿಗೆ ಕಳಿಸಿದಾಗ ರಾಜ್ಯ ಕಮಿಟಿಯ ರಾಜ್ಯಾಧ್ಯಕ್ಷÀ ಬೇಕ್ರಿ ರಮೇಶ್ ಹಾಗೂ ರಾಜ್ಯ ಕಮಿಟಿಯ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿ ಆಯ್ಕೆ ಮಾಡಿದ್ದಕ್ಕೆ ಜಿಲ್ಲಾ ಕಮಿಟಿಯು ರಾಜ್ಯ ಕಮಿಟಿಗೆ ಧನ್ಯವಾದಗಳು ಸೂಚಿಸುತ್ತದೆ. ಅದರಂತೆ ವಿಜಯಪುರ ಜಿಲ್ಲೆಯಿಂದ ಕದಂಬ ಶಿವರತ್ನ ಪ್ರಶಸ್ತಿಗೆ ಭಾಜನರಾದ ಎಲ್ಲರಿಗೂ ಜಿಲ್ಲಾ ಕಮಿಟಿಯ ಜಿಲ್ಲಾ ಅಧ್ಯಕ್ಷÀ ವಿನಾಯಕ ಸೊಂಡೂರ ಹಾಗೂ ಪದಾಧಿಕಾರಿಗಳು, ಸದಸ್ಯರು ಅಭಿನಂದಿಸಿದ್ದಾರೆ.