ಸ್ಪೀಡ್ ಬ್ರೇಕರ್ ಅಳವಡಿಸಲು ಜೈಕನ್ನಡಿಗರ ಸೇನೆ ಮನವಿ
ಕಲಬುರಗಿ,ಆ.28- ನಗರದ ಪ್ರಮುಖ ಮುಖ್ಯ ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್ ನಿರ್ಮಿಸುವಂತೆ ಜೈಕನ್ನಡಿಗರ ಸೇನೆ ನಗರ ಪೊಲೀಸ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ನಗರದ ಮುಖ್ಯ ರಸ್ತೆಗಳಾದ ಗಂಜ ರಸ್ತೆ, ಹುಮನಾಬಾದ ರಿಂಗ್ ರಸ್ತೆ, ಸುಲ್ತಾನಪೂರ ರಿಂಗ್ ರಸ್ತೆ, ಆಳಂದ ಚೆಕ್ ಪೆÇೀಸ್ಟ್ ರಿಂಗ್ ರಸ್ತೆ, ಬಸ್ ನಿಲ್ದಾಣ ರಸ್ತೆ, ತಿಮ್ಮಾಪೂರಿ ಸರ್ಕಲ್, ಅನ್ನಪೂರ್ಣ ಕ್ರಾಸ್ ರಸ್ತೆ, ಜಗತ್ ವೃತ್ತ ಸುಪರ ಮಾರ್ಕೆಟ್ ರಸ್ತೆ, ಸರಕಾರಿ ಆಸ್ಪತ್ರೆ ರಸ್ತೆ, ಖರ್ಗೆ ರಿಂಗ್ ರಸ್ತೆ, ನಾಗನಹಳ್ಳಿ ರಿಂಗ್ ರಸ್ತೆ, ರಾಮಮಂದಿರ ರಿಂಗ್ ರಸ್ತೆ ಸೇರಿದಂತೆ ಪ್ರಮುಖ ಮುಖ್ಯ ರಸ್ತೆಗಳಲ್ಲಿ ಭಾರಿ ಪ್ರಮಾಣದ ಮತ್ತು ಲಘು ವಾಹನಗಳು ಓಡಾಡುತ್ತಿರುತ್ತವೆ, ವಾಹನಗಳ ಅತೀ ಹೆಚ್ಚಿನ ವೇಗವನ್ನು ನಿಯಂತ್ರಿಸಲು ಇಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸುವುದರಿಂದ ರಸ್ತೆ ಅಪಘಾತ ತಡೆಯಲು ಕ್ರಮ ಕೈಗೊಳ್ಳುವಂತೆ ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು, ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಜೈಕನ್ನಡಿಗರ ಸೇನೆಯ ಮುಖಂಡರಾದ ರಾಮಾ ಪೂಜಾರಿ, ಹುಸೇನ, ನವೀನಕುಮಾರ ದುಮ್ಮನಸೂರ, ಅನೀಲ ತಳವಾರ, ಮಲ್ಲು ಆಲಗೂಡ, ಪ್ರಕಾಶ, ಗೌತಮ ಗೋರೆ, ಶಿವಪ್ರಕಾಶ ಕುಸ್ತಿ, ರೋಹನ ಇದ್ದರು.