ಶಿವಾನುಭವ ಮಂಟಪ ಸಾಹಿತ್ಯ, ಸಾಂಸ್ಕøತಿಕ, ಧಾರ್ಮಿಕ ವೇದಿಕೆ
ಕಲಬುರಗಿ:ಆ.28:ಅಖಿಲ ಭಾರತ ಶಿವಾನುಭವ ಮಂಟಪ ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ವೇದಿಕೆಯಾಗಿದೆ ಎಂದು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪೆÇ್ರ.ವೆಂಕಣ್ಣ ಡೊಣ್ಣೆಗೌಡರ್ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕೃತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಬುಧವಾರ ಅಖಿಲ ಭಾರತ ಶಿವಾನುಭವ ಮಂಟಪ ಎಂಬ ವಿಷಯ ಕುರಿತು ಮಾತನಾಡಿದರು.
ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಆರಂಭಿಸಿದಂತೆ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಅಖಿಲ ಭಾರತ ಅನುಭವ ಮಂಟಪವನ್ನು ಗುರು-ಲಿಂಗ-ಜಂಗಮರ ಸೇವೆ ಮಾಡುವ ಉದ್ದೇಶದಿಂದ 1963 ರಲ್ಲಿ ಆರಂಭಿಸಿದರು. ನಂತರ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಸಮಾಜದಲ್ಲಿ ಕಂಟಕಗಳನ್ನು ದೂರಮಾಡಲು, ಹಿಂದುಳಿದವರನ್ನು ಮುಂದೆ ತರಲು, ಈ ಭಾಗವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯಲು ಅಖಿಲ ಭಾರತ ಶಿವಾನುಭವ ಮಂಟಪವನ್ನು ವೇದಿಕೆಯಾಗಿ ರೂಪಗೊಳಿಸಿದರು. ಈ ವೇದಿಕೆ ಮೇಲೆ ಸಾಹಿತ್ಯ, ಚಿಂತನಗೋಷ್ಠಿಗಳು, ಶರಣರ ಪುರಾಣ, ಉಪನ್ಯಾಸಗಳು , ಧಾರ್ಮಿಕ ಕಾರ್ಯಕ್ರಮಗಳು, ನಾಟಕಗಳು, ಯಕ್ಷಗಾನ ಹೀಗೆ ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ 61 ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಇಲ್ಲಿ ನಡೆದ ಉಪನ್ಯಾಸಗಳನ್ನು ಗ್ರಂಥಗಳ ರೂಪದಲ್ಲಿ ಹೊರತರಲಾಗಿದೆ. ಇμÉ್ಟೀ ಅಲ್ಲದೆ ಗೀಗಿ ಪದಗಳು, ಭಜನೆಗಳು, ತತ್ವಪದಗಳು, ಚಿತ್ರಪರ್ದನಗಳು ಈ ವೇದಿಕೆ ಮೇಲೆ ಜರುಗುತ್ತವೆ. ಪೂಜ್ಯ ಡಾ.ಅಪ್ಪ ಅವರ ವಿಚಾರವೆನೆಂದರೆ ಈ ಭಾಗದ ಜನರು ವೇದಿಕೆ ಮೇಲೆ ನಿಂತು ಮಾತನಾಡುವುದಕ್ಕೆ ಕಲಿಯಬೇಕು. ಇದರಿಂದ ಅವರ ಪಾಂಡಿತ್ಯ ಬೆಳೆಯುವುದಲ್ಲದೆ ಅವರು ಎಲ್ಲಿ ಬೇಕಾದರೂ ಮಾತನಾಡುವುದಕ್ಕೆ ಧೈರ್ಯ ಒದಗುತ್ತದೆ ಎನ್ನುವದಾಗಿದೆ. ಶರಣರ ತತ್ವಗಳನ್ನು ಪ್ರಚಾರ, ಪ್ರಸಾರ ಮಾಡುವುದು, ಸಂಗೀತವನ್ನು ಜನರಿಗೆ ಮುಟ್ಟಿಸುವುದು ಅಲ್ಲದೆ ಪುರಾಣ ನಡೆಸುವುದರಿಂದ ಶರಣರ ಜೀವನ ಚರಿತ್ರೆ ತಿಳಿಯುತ್ತದೆ. ಈ ವೇದಿಕೆ ಅಡಿಯಲ್ಲಿ ಜಾನದಾಸೋಹ ರತ್ನ ಪತ್ರಿಕೆಯು ಹೊರಬರುತ್ತದೆ. 1996 ರಲ್ಲಿ ಈ ಪತ್ರಿಕೆ ಆರಂಭ ಮಾಡಲಾಗಿದೆ. ಸ್ವಾತಂತ್ರ್ಯ, ಸಹೋದರತ್ವ, ಕಾಯಕ ದಾಸೋಹ ಈ ಪತ್ರಿಕೆಯ ಉದ್ದೇಶವಾಗಿದೆ. ಅಲ್ಲದೆ ಈ ವೇದಿಕೆಯಿಂದ ಪುರಾಣ ಪ್ರವಚನ ಪ್ರಶಸ್ತಿ ಮತ್ತು ದಾಸೋಹ ಜ್ಞಾನ ರತ್ನ ಎಂಬ ಶ್ರೇಷ್ಠ ಪ್ರಶಸ್ತಿಯನ್ನು ಪೂಜ್ಯರು ನೀಡುತ್ತಾರೆ. ಎರಡು ವರ್ಷಗಳಿಗೊಮ್ಮೆ ನೀಡುವ ಈ ಪ್ರಶಸ್ತಿಯು 7 ಲಕ್ಷ ರೂ. ಬಹುಮಾನ ಹೊಂದಿದೆ ಎಂದು ಹೇಳಿದರು.