ಇತಿಹಾಸ ತಿಳಿಸುವಲ್ಲಿ ಛಾಯಾಚಿತ್ರಗಳ ಪಾತ್ರ ಮಹತ್ವದ್ದು; ಡಾ.ಅವಿನಾಶ ಜಾಧವ
ಚಿಂಚೋಳಿ, ಆ.28- ನಮ್ಮ ಐತಿಹಾಸಿಕ ಘಟನೆಗಳನ್ನು, ದಂತಕಥೆಗಳನ್ನು ತಿಳಿಸುವಲ್ಲಿ ಛಾಯಾ ಚಿತ್ರಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ ಎಂದು ಶಾಸಕ ಅವಿನಾಶ ಜಾಧವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಚಿಂಚೋಳಿಯ ಚಂದಾಪುರ ಪಟ್ಟಣದ ಬಂಜಾರ ಭವನದಲ್ಲಿ ತಾಲ್ಲೂಕಾ ಛಾಯಾಗ್ರಹಕರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ 185 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಾವೆಲ್ಲರೂ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ದೇಶಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸಾಧಕರ ಗುರುತನ್ನು ಹಿಡಿಯಬೇಕಾದರೆ ಅದು ಛಾಯಾಚಿತ್ರಗಳಿಂದ ಮಾತ್ರ ಸಾಧ್ಯ.
ಛಾಯಾಚಿತ್ರಗಳಿಲ್ಲದಿದ್ದರೆ ಅವರ ರೂಪಗಳ ಬಗ್ಗೆ ಕಲ್ಪನೆಯೂ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸಾಮಾನ್ಯವಾಗಿ ನಮಗೆಲ್ಲರಿಗೂ ದಿನನಿತ್ಯ ಕಣ್ಣಿಗೆ ಹತ್ತಾರು ದೃಶ್ಯಗಳು ಕಾಣಸಿಗುತ್ತವೆ ಆದರೇ, ಅವುಗಳು ನಮಗೆ ವಿಶೇಷ ಎನಿಸುವುದಿಲ್ಲ.ಆದರೇ ಅದೇ ದೃಶ್ಯಗಳನ್ನು ಒಬ್ಬ ಛಾಯಾಗ್ರಾಹಕ ವಿಶೇಷವಾಗಿ ನೋಡಿ ಅದನ್ನು ವಿಶೇಷವಾಗಿ ಸೆರೆ ಹಿಡಿದು ಅದಕ್ಕೊಂದು ಜೀವವನ್ನು ತುಂಬುತ್ತಾನೆ. ಇಂತಹ ಕೆಲಸಕ್ಕಾಗಿ ತುಂಬಾ ಶ್ರದ್ಧೆ ಮತ್ತು ತಾಳ್ಮೆಯ ಅವಶ್ಯಕತೆಯಿದ್ದು ಇದನ್ನು ಎಲ್ಲರಿಂದ ಮಾಡಲು ಸಾಧ್ಯವಿಲ್ಲ ಇದಕ್ಕಾಗಿ ಛಾಯಾಗ್ರಹಣದ ಬಗ್ಗೆ ವಿಶೇಷವಾದ ಆಸಕ್ತಿ ಮತ್ತು ಒಲವಿರಬೇಕಾಗುತ್ತದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಛಾಯಾಗ್ರಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಗಾರಂಪಳ್ಳಿ ಮಾತನಾಡಿ,ಎಲ್.ಜೆ.ಎಂ ಡಾಗೈರ್ ಅವರನ್ನು ಪ್ರತಿಯೊಬ್ಬರು ನೆನಯಲೇಬೇಕು ಏಕೆಂದರೆ ಅವರು ಛಾಯಾಗ್ರಾಹಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಎಂದರು.ಮುಂಬರುವ ದಿನಗಳಲ್ಲಿ ತಾಲ್ಲೂಕಿನಲ್ಲಿ ಛಾಯಾಗ್ರಾಹಕರ ಸಂಘದ ಹೆಸರಿನಲ್ಲಿ ಒಂದು ನಿವೇಶನ ಮಂಜೂರು ಮಾಡಿ ವಿವಿಧ ಸಭೆ ಸಮಾರಂಭಗಳನ್ನು ಮಾಡಲು ಭವನ ನಿರ್ಮಿಸಿ ಕೊಡಬೇಕು ಎಂದು ಶಾಸಕರಿಗೆ ಮನವಿಯನ್ನು ಮಾಡಿದರು.ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ಕೂಡ ಆಯೋಜಿಸಿದ್ದು ಹಲವಾರು ದಾನಿಗಳು ರಕ್ತವನ್ನು ಕೂಡ ದಾನ ಮಾಡಿದರು.ಈ ಸಂದರ್ಭದಲ್ಲಿ ಗೋಪಾಲರಾವ ಕಟ್ಟಿಮನಿ,ಗೌತಮ ಬೊಮ್ಮನಹಳ್ಳಿ ರಾಹುಲ್ ಸಂಜೀವನ ಯಾಕಾಪುರ್,ಶರಣು ಪಾಟೀಲ್ ಮೊತಕಪಳ್ಳಿ,ಎ ಎಮ್ ಮುರುಳಿ,ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ ದುಗ್ಗನ,ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಶಿವಬಸಯ್ಯ ಮಠ ಸ್ವಾಗತಿಸಿದರು,ರಮೇಶ ಭೂತಪುರ ನಿರೂಪಿಸಿದರು,ಬಸರೆಡ್ಡಿ ಮಕಾಶಿ ವಂದಿಸಿದರು