ಗಜಲ್ ಸಮ್ಮೇಳನದಲ್ಲಿ ಡಾ.ಶಿಲಾಸೂ ಗಜಲ್ ವಾಚನ
ಕಲಬುರಗಿ,ಆ.28-ಕರ್ನಾಟಕ ಗಜಲ್ ಅಕಾಡೆಮಿ ವತಿಯಿಂದ ಈಚೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದ ಶಾಂತರಸ ವೇದಿಕೆಯಲ್ಲಿ ಜರುಗಿದ ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದ 3ನೇ “ಗಜಲ್” ಗೋಷ್ಠಿಯಲ್ಲಿ ಕವಿ ಡಾ.ಶಿವಕುಮಾರ. ಲಾ. ಸೂರ್ಯವಂಶ ಅವರು ತಮ್ಮ “ಗಜಲ್” ವಾಚನ ಮಾಡಿದರು.
3ನೇ ಗಜಲ್ ವಾಚನ ಗೋಷ್ಠಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್ ಚಾಲನೆ ನೀಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಅಧ್ಯಕ್ಷತೆ ವಹಿಸಿದ್ದರು.
ಗಜಲ್ ವಾಚನ ಮಾಡಿದ ಡಾ.ಶಿಲಾಸೂ ಅವರಿಗೆ ಮುಖ್ಯ ವೇದಿಕೆಯಲ್ಲಿ ಪುಸ್ತಕಗಳನ್ನು ನೀಡಿ ಅಭಿನಂದಿಸಲಾಯಿತು.
ಕರ್ನಾಟಕ ಗಜಲ್ ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ, ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್, ಸಮ್ಮೇಳನದ ಸಂಚಾಲಕ ಅಬ್ದುಲ್ ಹೈ. ತೋರಣಗಲ್ಲು ಮತ್ತಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲಬುರಗಿಯಲ್ಲಿ ಜರುಗಿದ ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನ ಐತಿಹಾಸಿಕ ದಾಖಲೆಯಾಗಿದೆ ಎಂದು ಸಮ್ಮೇಳನಾಧ್ಯಕ್ಷೆ ಪ್ರಭಾವತಿ. ಎಸ್. ದೇಸಾಯಿ ಹರ್ಷ ವ್ಯಕ್ತಪಡಿಸಿದರು.