ವೀರಶೈವ ಮಹಾಸಭೆಗೆ ಶಂಕರ ಬಿದರಿ ಹೊಸ ರಾಜ್ಯಾಧ್ಯಕ್ಷ
(ಸಂಜೆವಾಣಿ ವಾರ್ತೆ)
ಬೆಂಗಳೂರು:ಅ,28- ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯಾಧ್ಯಕ್ಷರಾಗಿ ಮಾಜಿ ಪೊಲೀಸ್ ಅಧಿಕಾರಿ ಶಂಕರ ಬಿದರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಹಾಸಭೆಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ರಾಜ್ಯ ಘಟಕಗಳ ಅಧ್ಯಕ್ಷರು, ಕಾರ್ಯ ನಿರ್ವಾಹಕ ಸಮಿತಿ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿತ್ತು.
ರಾಜ್ಯದಿಂದ 30, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ತಲಾ 5 ಸದಸ್ಯರಂತೆ ಕೇಂದ್ರ ಕಾರ್ಯಕಾರಿ ಸಮಿತಿಯ 55 ಸದಸ್ಯರು ಮತ್ತು ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ರಾಜ್ಯಗಳ ಅಧ್ಯಕ್ಷರುಅವಿರೋಧವಾಗಿ ಆಯ್ಕೆಯಾಗಿದ್ದಾರೆ.
 ರಾಜ್ಯದ ಕಾರ್ಯನಿರ್ವಾಹಕ ಸಮಿತಿಯ 27 ಸಾಮಾನ್ಯ ಸದಸ್ಯ ಸ್ಥಾನಕ್ಕೆ ಮಾತ್ರ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಚುನಾವಣೆ ನಡೆದಿದ್ದು ಮಹಾ ಸಭೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಚಿವ ಈಶ್ವರ ಖಂಡ್ರೆ ಮತ್ತು ಶಂಕರ ಬಿದರಿ ನೇತೃತ್ವದ ತಂಡದ ಎಲ್ಲ 27 ಅಭ್ಯರ್ಥಿಗಳೂ ಜಯಗಳಿಸಿದ್ದಾರೆ.
ಬಳ್ಳಾರಿಗರು:
ವೀರಶೈವ ಮಹಾಸಭಾದ ಆಡಳಿತ ಮಂಡಳಿಯಲ್ಲಿರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ  ನಾಲ್ವರು ಇದ್ದಾರೆ
ಆಂದ್ರ ಪ್ರದೇಶದ ಅಧ್ಯಕ್ಷರಾಗಿ ದಂಡಿನ ಶಿವಾನಂದ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಕೋರಿ ವಿರೂಪಾಕ್ಷಪ್ಪ ಮತ್ತು ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಅಂಗಡಿ ಶಂಕ್ರಪ್ಪ, ಕರೀಗೌಡ ಆಯ್ಕೆಯಾಗಿದ್ದಾರೆ.