ಮೊಸರು ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಚಡಚಣ ತಂಡಕ್ಕೆ ಜಯ
ಚಡಚಣ,ಆ.28-ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ವರ್ಷವು ಸಹು ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಮೊಸರು ಗಡಿಗೆ ಒಡೆಯಲು ಚಡಚಣ, ವಿಜಯಪುರ ಮತ್ತು ಹತ್ತಳ್ಳಿ ತಂಡ ಪ್ರಯತ್ನ ಪಟ್ಟರು. ಆದರೆ, ಚಡಚಣ ತಂಡ ಜಯ ಸಾಧಿಸಿ 21000 ಬಹುಮಾನ ಪಡೆಯಿತು.
ಜಯ ಸಾಧಿಸಿದ ತಂಡಕ್ಕೆ ಖಲೀಲ್ ಕಾಂಬಳೆ 5,000 ಮತ್ತು ರಾಜು ಕೋಳಿ 2000 ಸಾವಿರ ಬಹುಮಾನ ನೀಡಿದರು. ಕಾರ್ಯಕ್ರಮದಲ್ಲಿ ಸುಮಾರು 2000 ಜನ ಸೇರಿದ್ದರು.
ಕಾರ್ಯಕ್ರಮ ರುವಾರಿ ಅಶೋಕ್ ಪಾಟೀಲ್, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಸು ಸಾಹುಕಾರ ಬಿರಾದರ್, ವಿಠಲ ಅಂಜೂಟಿಗಿ, ಚೇತನ್ ಮಠ, ಪಂ.ಸದಸ್ಯರಾದ ಚೇತನ್ ನಿರಾಳೆ, ಚಂದು ಕಲ್ಮನಿ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.