ಹಳ್ಳದ ಭೀಮೇಶ್ವರ ಜಾತ್ರೆ
ವಾಡಿ,ಆ 28: ಇಲ್ಲಿಗೆ ಸಮೀಪದ ಸುಲಹಳ್ಳಿ ಗ್ರಾಮದ ಹಳ್ಳದ ಭೀಮೇಶ್ವರ ಜಾತ್ರೆ ವಿಜೃಂಭಣೆಯಿಂದ ನಡೆಯಿತು.ಗ್ರಾಮದ ಪ್ರಮುಖ ಬೀದಿಯಲ್ಲಿ ಭಾರಿ ಪಲ್ಲಕ್ಕಿ ಮೆರವಣಿಗೆ ಮುಖಾಂತರ ಹಳ್ಳದ ಬಲಭೀಮೇಶ್ವರ ದೇವಾಲಯದವರೆಗೆ ಭವ್ಯ ಮೆರವಣಿಗೆ ಬಾಜಾ ಭಜಂತ್ರಿ ಭಜನೆ ಡೋಲು ಹಲಗಿ ವಾದ್ಯ ಮೇಳದೊಂದಿಗೆ ಯುವಕರು ನರ್ತಿಸಿದರು. ಮಹಿಳೆಯರು ಕುಂಭ ಆರ್ತಿ ಹಾಡುತ್ತಾ ಪಲ್ಲಕ್ಕಿ ಮೆರವಣಿಗೆಗೆ ಮೆರುಗು ತಂದರು ಜಾತ್ರೆಯಲ್ಲಿ ನೂರಾರು ಭಕ್ತಾದಿಗಳು ಬಲಭೀಮೇಶ್ವರ ದೇವರ ದರ್ಶನ ಪಡೆದು ಪಾವನ ರಾದರು
ಶಿವರಾಜ್ ಗೌಡ ಮಾಲಿ ಪಾಟೀಲ್,ಸಿದ್ದರಾಮಪ್ಪ ಗೌಡ ಪೆÇಲೀಸ್ ಪಾಟೀಲ್,ಸಿದ್ದಣ್ಣ ಪಂಚಾಳ, ಶರಣಪ್ಪ,ಶ್ರೀಮಂತ,ಸಿದ್ದಣ್ಣ ಘತ್ತರಗಿ,ಅರವಿಂದ್ ಪಾಟೀಲ,ಶ್ರೀಶೈಲ್ ಸಾಹು,ಸಿದ್ದು ಅಲ್ಲೂರ್,ಅಂಬರೀಷ್ ಸ್ವಾಮಿ,
ಸಿದ್ದಯ್ಯ ಸ್ವಾಮಿ,ಭೀಮರಾಯ ಸುಬೇದಾರ್,ರವಿ ಕದ್ರಗಿ,ರವಿ ಗುತ್ತೆದಾರ,
ಭೀಮರಾಯ ಕುಂಬಾರ್,ಸುರೇಶ್ ಗುತ್ತೇದಾರ್,ರಾಮಚಂದ್ರ ತಳವಾರ್ ಮತ್ತು ಇತರರು ಪಾಲ್ಗೊಂಡರು