ಕರ್ನಾಟಕ ಅಹಿಂದ ಜನ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ತಿಮ್ಮಪ್ಪ  ನೇಮಕ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,28 ಕರ್ನಾಟಕ ಅಹಿಂದ ಜನ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರನ್ನಾಗಿ ಇಲ್ಲಿನ ಬಿ.ಗೋನಾಳ್ ನ ಎಮ್. ತಿಮ್ಮಪ್ಪ  ಅವರನ್ನು ನೇಮಕ ಮಾಡಲಾಗಿದೆ.
ಅಹಿಂದ ಜನ ಸಂಘದ ಸಂಸ್ಥಾಪಕರು‌ ಮತ್ತು ರಾಜ್ಯದ ಅಧ್ಯಕ್ಷರಾಗಿರುವ ಅಯ್ಯಪ್ಪಗೌಡ ಅವರು ತಿಮ್ಮಪ್ಪ ಅವರನ್ನು ನೇಮಕ ಮಾಡಿ. ಅಹಿಂದ ಸಮುದಾಯದ ಜನರು   ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಶ್ರೇಯೋಭಿವೃದ್ದಿ ಹೊಂದಲು ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರಮಿಸಿ ಎಂದು ಹೇಳಿದ್ದಾರೆ.
ತಮ್ಮ‌ನೇಮಕದ ಬಗ್ಗೆ ಹರ್ಷವ್ಯಕ್ತಪಡಿಸಿರುವ ತಿಮ್ಮಪ್ಪ ಅವರು ಅಹಿಂದ ಸಮುದಾಯದ ಜಬರ ಸಹಕಾರದಿಂದ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ‌ ಮಾಡಲಿದೆ ಎಂದಿದ್ದಾರೆ.