ಮುಂದಿನ ವರ್ಷದಿಂದ ಬಿಪಿಇಡಿ ಪ್ರಾರಂಭಕ್ರೀಡಾ ವಿವಿಯಾಗಿ ಅಭಿವೃದ್ಧಿ: ಮುನಿರಾಜು
* ಯುವಜನೋತ್ಸವಕ್ಕೆ ಚಾಲನೆ
* 21 ವಿವಿಗಳು ಭಾಗಿ
* ಐದು ದಿನಗಳ ಶಿಬಿರ
* ವಿವಿಧ ಸ್ಪರ್ಧಿಗಳು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಆ28: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗು ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ಹಮ್ಮಿಕೊಂಡಿರುವ  ಈ ಸಾಲಿನ ರಾಜ್ಯ ಮಟ್ಟದ ಯುವ ಜನೋತ್ಸವಕ್ಕೆ ನಿನ್ನೆ ಸಂಜೆ ಚಾಲನೆ ದೊರೆತಿದೆ.
ಭಾವೈಕ್ಯತೆ, ಸಾಮರಸ್ಯ ತುಂಬುವ ನಿಟ್ಟಿನಲ್ಲಿ. ಸಹಕಾರ ಸೌಹಾರ್ಧತೆಯ ಪರಿಕಲ್ಪನೆಯಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ರಾಜ್ಯ ಎನ್.ಎಸ್.ಎಸ್ ಅಧಿಕಾರಿ
ಡಾ.ಪ್ರತಾಪ್ ಲಿಂಗಯ್ಯ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು. ಯುವಜನೋತ್ಸವಗಳಿಂದ ಬಲಿಷ್ಟ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ದೇಹದ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಮುಖ್ಯ, ಇವರೆಡೂ ಇದ್ದಾಗ ಸಾಮಾಜಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ರಾಜ್ಯದಲ್ಲಿ ಆರುವರೆ ಲಕ್ಷ ವಿದ್ಯಾರ್ಥಿಗಳು ಎನ್ ಎಸ್ ಎಸ್ ಮೂಲಕ ಸೇವೆ ಮಾಡುತ್ತಿದ್ದಾರೆ.  ಇಂತಹ ಶಿಬಿರಗಳಲ್ಲಿ ಪಾಲ್ಗೊಂಡರೆ ವಿಭಿನ್ನ ಸಂಸ್ಕೃತಿ  ಕಲಿಯುವುದರ ಜೊತೆಗೆ ಅಸೂಯೆ, ಅಹಂಕಾರ, ಅಸಮಾನತೆನೆ, ಭೇದಭಾವ ದೂರಾಗಲಿದೆಂದರು.
ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಎಂ.ಮುನಿರಾಜ್ ಅಧ್ಯಕ್ಷತೆವಹಿಸಿ ಮಾತನಾಡಿ, ಇಂದಿನ ಯುವ ಜನತೆಗೆ ಪಠ್ಯದಲ್ಲಿ ಎನ್.ಎಸ್.ಎಸ್ ಮತ್ತು ಯೋಗ ಅವಶ್ಯಕವಾಗಿ ಬೇಕಿದೆ.  ಇದರ ಮೂಲಕ  ವಿದ್ಯಾರ್ಥಿಗಳ ಮಾನಸಿಕ ಸ್ಥಿಮಿತತೆಗೆ ಸಹಕಾರಿಯಾಗಲಿದೆಂದ ಅವರು ವಿವಿಯಲ್ಲಿ ಎಂಪಿಇಡಿ ಕೋರ್ಸ್ ವಿದ್ಯಾರ್ಥಿಗಳ ಕಾರ್ಯವೈಖರಿ ಬಗ್ಗೆ ಅರಿತಿರುವೆ. ಅದರಿಂದ ಸ್ಒಊರ್ಥಿ ಪಡೆದಿರುವ ನಾನು ಬರುವ ವರ್ಷ ಈ ಕ್ಯಾಂಪಸ್ ನಲ್ಲಿ ಬಿಪಿಇಡಿ ಕೋರ್ಸ್ ಆರಂಭಿಸಲು ನಿರ್ಧರಿಸಿದೆಂದು ತಿಳಿಸಿದರು.
ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಅಕಾಡೆಮಿ  ಅರಂಭಿಸುವ ಚಿಂತನೆ ಇದೆ ಇದರ ಮೂಲಕ ಈ ವಿವಿಯನ್ನು ಒಂದು ಕ್ರೀಡಾ ವಿವಿಯಂತೆ ಅಭಿವೃದ್ದಿ ಪಡಿಸಲು ಚಿಂತನೆ ಇದೆ. ದೇಶದಲ್ಲಿಯೇ ಉತ್ತಮ ವಿವಿಯನ್ನಾಗಿ ಮಾಡಲು  ಬರುವ ಆರು ತಿಂಗಳಲ್ಲಿ ನೀಲ ನಕ್ಷೆ ಸಿದ್ದಪಡಿಸಲಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು
ವಿವಿಯ ಪ್ರತಿ ಒಬ್ಬ ವಿದ್ಯಾರ್ಥಿ ಎರೆಡು ಗಿಡ ನೆಡಲು ಕುಲೊತಿಗಳು ಸೂಚಿಸಿದರು.
ವಿವಿಯ ಕುಲಸಚಿವ ಎಸ್.ಎನ್.ರುದ್ರೇಶ್ ಮಾತನಾಡಿ, ನಮ್ಮ ವಿವಿ ಹಚ್ಚ ಹಸಿರಿನಿಂದ ಕಂಗೊಳಿಸಲು ಈ ಎನ್.ಎಸ್.ಎಸ್.ವಿದ್ಯಾರ್ಥಿಗಳ ಸೇವೆ ಮುಖ್ಯವಾಗಿದೆ. ವಿವಿಯಲ್ಲಿ 3700 ವಿದ್ಯಾರ್ಥಿಗಳಿದ್ದರೂ ಇಲ್ಲಿ ರ‌್ಯಾಗಿಂಗ್ ಇಲ್ಲ. ರಾಜ್ಯಪಾಲರು ಮತ್ತು ಕೆ.ಕೆ.ಆರ್.ಡಿ.ಬಿಯಿಂದ ಒಂದಿಷ್ಟು ಅನುದಾನ ದೊರೆತಿದೆ. ಇದರಿಂದ ವಿವಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಶಿಬಿರದ ನೆನಪಿಗಾಗಿ ಒಂದು ಉದ್ಯಾನವನ ಹೊಸದಾಗಿ ರಚಿಸಿಸೋಣ ಎಂದರು.
ನಿಕಟಪೂರ್ವ  ಕುಲಪತಿ  ಪ್ರೊ.ತಿಪ್ಪೆರುದ್ರಪ್ಪ ಮಾತನಾಡಿ ಎನ್.ಎಸ್.ಎಸ್ ಪಠ್ಯದ ಒಂದು ಭಾಗವಾಗಬೇಕು ಎಂದರು. ಎನ್.ಎಸ್.ಎಸ್.ಸಂಯೋಜನಾಧಿಕಾರಿ
ಡಾ.ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಐದು ದಿನಗಳ ಈ ಯುವಜನೋತ್ಸವದಲ್ಲಿ ರಾಜ್ಯದ 21ವಿಶ್ವ ವಿದ್ಯಾಲಯಗಳಿಂದ  200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿದ್ದಾರೆ. 
ಚರ್ಚಾ, ಚಿತ್ರಕಲೆ, ಪ್ರಬಂಧ, ಸಂಗೀತ, ನೃತ್ಯ,ಹಾಡುಗಾರಿಕೆ, ರಸಪ್ರಶ್ನೆ, ವಸ್ತುಪ್ರದರ್ಶನ, ಪ್ರಹಸನ ಮೊದಲಾದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ‌ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಯುವಜನೋತ್ಸವದಲ್ಲಿ ಪಾಲ್ಗೊಂಡಿರುವ ಯುವಜನೋತ್ಸವದಲ್ಲಿ ಪಾಲ್ಗೊಂಡಿರುವ ಬೆಂಗಳೂರಿನ ಪ್ರಜ್ಞ, ವಿದ್ಯಾ, ಮಂಗಳೂರಿನ ಸುಜಯ್ ಶೆಟ್ಟಿ, ಬಾಗಲಕೋಟೆಯ ಸೌಮ್ಯ ಅವರು
ಸಂಜೆವಾಣಿಯೊಂದಿಗೆ ಮಾತನಾಡಿ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾವು ಕೇವಲ‌ ಪಠ್ಯಕ್ಕೆ  ಸೀಮಿತರಾಗದೆ ವಿಭಿನ್ನ ಸಂಸ್ಕೃತಿಯ ಕಲಿಕೆ ಜೊತೆಗೆ ನಮ್ಮ ಪ್ರತಿಭೆ ಪ್ರದರ್ಶನ ಮಾಡಲಿದೆಂದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ನಡೆದ ಜನಪದ ಕಲಾ ತಂಡಗಳ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಕುಸಚಿವ ರುದ್ರೇಶ್ ಅವರು ಡೊಳ್ಳು ಬಾರಿಸಿದರೆ. ಕುಲಪತಿ ಮುನಿರಾಜು ಅವರು ತಾಳ ಹಾಕಿ ವಿದ್ಯಾರ್ಥಿಗಳನ್ನು ಹುರಿದಮಬಿಸಿದರು.