ಕೃಷ್ಣ ಜನ್ಮಾಷ್ಠಮಿ ಮಕ್ಕಳಲ್ಲಿ ದೇವರನ್ನು ಕಾಣುವ ವಿಶೇಷ ಆಚರಣೆ:ಶಂಭುಲಿಂಗ ಶಾಸ್ತ್ರಿ
ಕಲಬುರಗಿ:ಆ.28:ಕೃಷ್ಣನೆಂದರೆ ಉತ್ಸಾಹ, ನವೋಲ್ಲಾಸ ದೈವಿಕ ಬೆಳಕು ಕೃಷ್ಣನೆಂದರೆ ಒಬ್ಬ ವ್ಯಕ್ತಿ ಅಲ್ಲ ಅದೊಂದು ದೊಡ್ಡ ಶಕ್ತಿ ಅಧರ್ಮ ಹೋಗಲಾಡಿಸಲು ಜನ್ಮ ತಾಳಿದ ವಿಶಿಷ್ಟ ಶಕ್ತಿ ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆದರೆ ಮಾತ್ರ ಜಯ ಸಾಧ್ಯ ಎಂಬ ತತ್ವವನ್ನೇ ಸಾರಿದರೆ ಶ್ರೀಕೃಷ್ಣ ಎಂದು ಪುರಾಣ ಪ್ರವಚನಕಾರರಾದ ಶಂಭುಲಿಂಗ ಶಾಸ್ತ್ರಿ ಮಾತನಾಡಿದರು.
ಕು. ಶ್ರದ್ಧಾ, ಸಾತ್ವಿಕ, ಪ್ರಾಪ್ತಿ, ಗುರುರಾಜ, ಕೀರ್ತನಾ, ಪ್ರಣವೀರ, ಮೀನಾಕ್ಷಿ, ಹೀಗೆ ಅನೇಕ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷ ಧರಿಸಿ ನೃತ್ಯ ಮಾಡಿ ಸಂಭ್ರಮಿಸಿದರು.
ಈ ಸಮಾರಂಭದಲ್ಲಿ ಭಾಗವಹಿಸಿದ ಮಕ್ಕಳಿಗೆ ವಿದ್ಯಾನಗರ ವೆಲ್‍ಫೇರ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ ಹಾಗು ಪದಾಧಿಕಾರಿಗಳಾದ ಗುರುಲಿಂಗಯ್ಯ ಮಠಪತಿ, ವಿಶ್ವನಾಥ ರಟಕಲ್, ಕಾಶಿನಾಥ ಚಿನ್ಮಳ್ಳಿ, ಸುಭಾಷ ಮಂಠಾಳೆ, ಬಸವಂತರಾವ ಜಾಬಶೆಟ್ಟಿ, ನಾಗರಾಜ ಹೆಬ್ಬಾಳ, ಶಾಂತಯ್ಯ ಬೀದಿಮನಿ, ನಾಗಭೂಷಣ ಹಿಂದೊಡ್ಡಿ, ಇವರೆಲ್ಲರು ಮಕ್ಕಳಿಗೆ ಪುಸ್ತಕ ನೀಡಿ ಆಶೀವರ್ದಿಸಿದರು.
ಕಲಾವಿದರಾದ ಶಿವಕುಮಾರ ಹಿರೇಮಠ, ಸಿದ್ದಣ್ಣ ದೇಸಾಯಿ ಕಲ್ಲೂರ ಶ್ರೀಕೃಷ್ಣನ ಮಹಿಮೆ ಕುರಿತು ಸಂಗೀತ ಸೇವೆ ನೀಡಿ ಭಕ್ತರ ಮನಸೆಳೆದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗು ಪಾಲಕರಿಗು ಪುರಾಣಕ್ಕೆ ಬಂದ ಎಲ್ಲ ಭಕ್ತರಿಗು ಶ್ರೀಮತಿ ರೇಣುಕಾ ತರುಣಶೇಖರ ಬಿರಾದಾರ ದಂಪತಿಗಳಿಂದ ಪ್ರಸಾದ ವ್ಯವಸ್ಥೆ ಮಾಡಿ ಭಕ್ತಿ ಸೇವೆ ಸಲ್ಲಿಸಿದ್ದಾರೆಂದು ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.