ಹಿಂದೂ ಧರ್ಮದ ಪ್ರಮುಖ ಹಬ್ಬ ಜನ್ಮಾಷ್ಟಮಿ
ಇಂಡಿ : ಆ.28: ಜನ್ಮಾಷ್ಟಮಿ, ಅಥವಾ ಗೋಕುಲಾಷ್ಟಮಿ, ಹಿಂದು ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದು. ನಗರದ ಹೊರವಲಯ ವಿಜಯಪುರ ರಸ್ತೆಯಲ್ಲಿ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಮಕ್ಕಳು ಕೃಷ್ಣ ಹಾಗೂ ರಾಧಾ ಳ ವೇಷ ಧರಿಸಿದ ಪುಟಾಣಿ ಗಳು ಕಂಡು ಎಲ್ಲರ ದ್ರಿಷ್ಟಿ ಅವರತ್ತ ಸೆಳೆಯುವಂತಿತ್ತು.
ಈ ಹಬ್ಬವು ದ್ವಾಪರಯುಗದಲ್ಲಿ ದೇವಕಿ ಮತ್ತು ವಸುದೇವನ ಮಗನಾದ ಕೃಷ್ಣನು ಜನಿಸಿದ ದಿನವೆಂದು ನಂಬಲಾಗಿದೆ. ಮಥುರಾದ ಪ್ರಭು ಕೃಷ್ಣನ ಪಿತಾಮಹನಾದ ಉಗ್ರಸೇನನ ರಾಜ್ಯವನ್ನು ಕಂಸನ ಚಾಚು ಹಿಡಿದು ಕಂಸನು ಬಾಧಿಸುತ್ತಿದ್ದನು. ಭೂಮಿಯ ಮೇಲೆ ಅನ್ಯಾಯ, ಅಧರ್ಮ ಹೆಚ್ಚಾದಾಗ, ಭಗವಾನ್ ವಿಷ್ಣುನು ಕೃಷ್ಣನ ರೂಪದಲ್ಲಿ ಅವತಾರ ಪಡೆದನು. ಕಂಸನ ಪಾಪದ ಅಂತಿಮವನ್ನು ಮಾಡಲು ಕೃಷ್ಣನು ಜನ್ಮ ತಾಳಿದವನು.
ಕೃಷ್ಣನು ಜನಿಸಿದ ದಿನದಂದು, ಅವನಿಗೆ ಪಾಪಗಳ ವಿರುದ್ಧದ ಒಬ್ಬ ಪ್ರಭಾವಿ ನಾಯಕನಾಗಿದ್ದು, ಧರ್ಮವನ್ನು ರಕ್ಷಿಸಲು, ಗೀತೆಯನ್ನು ಬೋಧಿಸುವುದರೊಂದಿಗೆ ಮಾನವೀಯತೆ, ಪ್ರೀತಿಯ ಧರ್ಮವನ್ನು ಹರಡುವ ಕಾರ್ಯವನ್ನು ಮುನ್ನಡೆಸಿದನು.
ಈ ಹಬ್ಬದ ದಿನಗಳಲ್ಲಿ ಭಕ್ತರು ಉಪವಾಸ ಮಾಡುತ್ತಾರೆ, ಕೃಷ್ಣನನ್ನು ಪೂಜಿಸುತ್ತಾರೆ, ದೇವರ ಭಜನೆಗಳನ್ನೂ ಹಾಡುತ್ತಾರೆ, ಮತ್ತು ವಿವಿಧ ರಂಗೋಲಿ, ದೋಳೋತ್ಸವ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.
ಜಗತ್ತಿನಾದ್ಯಂತ, ಕೃಷ್ಣನ ಜನ್ಮಾಷ್ಟಮಿಯು ಭಕ್ತಿಯಿಂದ ಆಚರಿಸಲಾಗುತ್ತದೆ, ಶ್ರೀಕೃಷ್ಣನ ತತ್ವವನ್ನು ನಂಬಿಕೊಂಡು ಜೀವನದ ಪಾಪಗಳ ನಿರಂತರ ಶುದ್ಧೀಕರಣಕ್ಕಾಗಿ ಈ ಹಬ್ಬವು ಆಚರಿಸುತ್ತಾರೆ.