ಪಾರದರ್ಶಕವಾಗಿ ಕ್ರೀಡಾಕೂಟ ನಡೆಸಿ
ಚಿಟಗುಪ್ಪ:ಆ.28:ಪಾರದರ್ಶಕವಾಗಿ ಕ್ರೀಡಾಕೂಟ ನಡೆಸಿ ಯಾವುದೇ ತಾರತಮ್ಯ ಮಾಡದೆ ಅರ್ಹ ಮಕ್ಕಳಿಗೆ ವಿಜೇತರಂದು ಘೋಷಿಸಿ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪ ಜಮಾದಾರ ನುಡಿದರು
ತಾಲೂಕಿನ ಇಟಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಎರಡು ದಿನಗಳ ಹೋಬಳಿ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಚಿಟಗುಪ್ಪ ಹೋಬಳಿಯ ಸುಮಾರು 18 ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕಬಡ್ಡಿ, ಖೋಖೋ, ದೂರದ ಓಟ, ಶಾಟ್ ಪುಟ್ ವಾಲಿ ಬಾಲ್ ಸೇರಿದಂತೆ ಇತರ ಆಟಗಳನ್ನು ಆಡಿಸಲಾಯಿತು.
ಶಾಲೆಯ ಮುಖ್ಯ ಗುರು ವೆಂಕಟ್ ರೆಡ್ಡಿ,ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕ ಕಾಶಿನಾಥ್ ಬೋರಾಳೆ, ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದಅಧ್ಯಕ್ಷ ಪ್ರಮೀಳಾ ರೆಡ್ಡಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕಾಶಿನಾಥ್ ಮಂಗಲಗಿ, ಎಸ್ ಸಿ ಎಸ್ ಟಿ ಶಿಕ್ಷಕರ ಸಂಘದ ಅಧ್ಯಕ್ಷ ಪಂಡಿತ್ ಕಲ್ಯಾಣಿ,ದೈಹಿಕ ಶಿಕ್ಷಕರಾದ ಸಂತೋಷ್,ಸಿ ಅರ್ ಪಿ ರಾಮಚಂದ್ರ, ಶಿವಕುಮಾರ್ ಪಾಟೀಲ್,ಎಸ್ ಡಿ ಎಮ್ ಸಿ ಅಧ್ಯಕ್ಷ ಪ್ರಕಾಶ, ಸತ್ಯನಾರಾಯಣ ಮಾಳ ಸೇರಿದಂತೆ ದೈಹಿಕ ಶಿಕ್ಷಕರು ಶಿಕ್ಷಕರು ಶಾಲಾ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.