ಸಿ.ಎಂ. ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ವಾಪಸ್ ಗೆ ಆಗ್ರಹ
ಬೀದರ್:ಆ.28: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನಗೆ ನೀಡಿರುವ ಅನುಮತಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲೆಯ ಗೊಂಡ (ಕುರುಬ) ಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಬೊಮ್ಮಗೊಂಡೇಶ್ವರ ವೃತ್ತದ ಬಳಿ ಸೇರಿದ ಕಾರ್ಯಕರ್ತರು, ಅಲ್ಲಿಂದ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದರು.
ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷ???ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರ ಕ್ರಮ ಸಂವಿಧಾನ ವಿರೋಧಿಯಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗ ಪಡೆಸಿಕೊಂಡು ಕರ್ನಾಟಕ ಸರ್ಕಾರವನ್ನು ಬೀಳಿಸುವ ಕುತಂತ್ರ ನಡೆಸುತ್ತಿದೆ. ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಜನಪರ ಯೋಜನೆಗಳೊಂದಿಗೆ ಕರ್ನಾಟಕದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಕಾರಣ, ಸರ್ಕಾರದ ವಿರುದ್ಧ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಾಂವಿಧಾನಿಕ ಹುದ್ದೆಯಲ್ಲಿ ಇರುವ ರಾಜ್ಯಪಾಲರು ಕೇಂದ್ರದ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನಗೆ ಅನುಮತಿ ಕೊಟ್ಟಿರುವುದು ರಾಜಕೀಯ ಪ್ರೇರಿತವಾಗಿದೆ. ರಾಷ್ಟ್ರಪತಿ ಅವರು ಕೂಡಲೇ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನಗೆ ನೀಡಿರುವ ಅನುಮತಿಯನ್ನು ಹಿಂಪಡೆಯಲು ರಾಜ್ಯಪಾಲರಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ, ಮುಖಂಡರಾದ ಮಾಳಪ್ಪ ಅಡಸಾರೆ, ಚಂದ್ರಕಾಂತ ಮೇತ್ರೆ, ನರಸಿಂಗ್ ಚಂದಾಪುರೆ, ಭೀಮಸಿಂಗ್ ಮಲ್ಕಾಪುರ, ಎಂ.ಎಸ್. ಕಟಗಿ, ಪಿ.ಎಸ್. ಇಟಕಂಪಳ್ಳಿ, ರಘುನಾಥ ಭೂರೆ, ಬಾಬುರಾವ್ ಸಂಗೋಳಗಿ, ರಮೇಶ ಜನವಾಡ, ವಿಠ್ಠಲ ರಾಜಗೀರಾ, ಹಣಮಂತ ಪಂಚಭಾಯಿ, ನಾಗೇಶ ಜಾನಕನೋರ, ಪಂಡಿತ ಬಾವಗಿ, ಬಸವರಾಜ ಕುತ್ತಾಬಾದ್, ಬಸವರಾಜ ಬಾವಗಿ, ಮಾರುತಿ ಗಾದಗಿ, ಪಂಢರಿ ಢೋಣೆ, ಅನಿಲ್ ಹೂಗೇರಿ, ಸಂಗಮೇಶ ಏಣಕೂರೆ, ಸುನೀಲ್ ಚಿಲ್ಲರ್ಗಿ, ಘಾಳೆಪ್ಪ ಅಂತಿ, ಮಲ್ಲಿಕಾರ್ಜುನ ಸೊಂಡೆ, ದೇವೇಂದ್ರ ಘೋಡಂಪಳ್ಳಿ, ಅನಿಲ್ ಚಿಲ್ಲರ್ಗಿ, ಬಾಬು ಸಂಗನಳ್ಳಿ, ಎಂ.ಪಿ. ವೈಜಿನಾಥ, ವಿಜಯಕುಮಾರ ಬ್ಯಾಲಹಳ್ಳಿ, ಸಿದ್ದು ಬಾವಗಿ, ಸಿದ್ದಗೊಂಡ ಸಿದ್ದೇಶ್ವರ, ಮಲ್ಲಿಕಾರ್ಜುನ ಸಾತೋಳಿ, ಕಲ್ಲಪ್ಪ ಯರನಳ್ಳಿ, ಅಂಬರೀಷ್ ಮಲ್ಲೇಶಿ, ಪರಮೇಶ ಕೊಳ್ಳೆ, ಬಾಲಾಜಿ ಜಬಾಡೆ, ಶಾಂತಮ್ಮ ಡೊಣಗಾಪುರೆ, ದಿಗಂಬರ ಮಾಸಿಮಾಡ, ಪಂಡಿತ ಢೋಣೆ, ಸಿದ್ದು ಗಾದಗಿ, ಶ್ರೀಕಾಂತ ಗೋರನಳ್ಳಿ, ಗೋವಿಂದ ದುರ್ಗೆ, ಸಾಯಿನಾಥ ಬಾಳೂರ, ವೀರಶೆಟ್ಟಿ ಗೌಸಪುರ, ಅನಿಲ್ ಬಾಳೂರೆ, ಸಂತೋಷ ಕಮಠಾಣೆ, ಪಂಡಿತ ಫತೇಪುರ, ಶರಣು ಚಿಮಕೋಡ್, ಶ್ರೀನಾಥ ಬಾಜೋಳಗಾ, ವೈಜಿನಾಥ ವಡ್ಡೆ ಮೊದಲಾದವರು ಪಾಲ್ಗೊಂಡಿದ್ದರು.