ಸಂಭ್ರಮ ಸಡಗರದ ಕೃಷ್ಣ ಜನ್ಮಾಷ್ಟಮಿ ಆಚರಣೆ
ಬೀದರ:ಆ.28: ಕೆಪಿ ವಿದ್ಯಾ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಡಗರ ಸಂಭ್ರಮದಿಂದ ವಿದ್ಯಾರ್ಥಿನಿಯರಿಂದ ದಹಿ ಹಂಡಿ ಒಡೆಯುವ ಮೂಲಕ ಸಂಸ್ಥೆಯ ಅಧ್ಯಕ್ಷರಾದ ಬಾಬು ವಾಲಿಯವರು ಗೋಮಾತೆಗೆ ಪೂಜೆ ಮಾಡುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.
ಶ್ರೀ ಕೃಷ್ಣನ ಲೀಲೆಗಳು ಮಾನವನ ಜೀವನಕ್ಕೆ ನಿರ್ದಿಷ್ಟ ದಾರಿ ತೋರುವ ದೀಪಗಳಾಗಿ ಇವತ್ತಿಗೂ ಪ್ರತಿಯೊಬ್ಬರ ಜೀವನದಲ್ಲಿ ನಿತ್ಯ ಬದುಕಿಗೆ ದಾರಿ ದೀಪವಾಗಿವೆ. ಕೃಷ್ಣನನ ಬಾಲ್ಯ ಯವನದಿಂದ ಮಹಾ ಭಾರತ ಭಗವತ ಗೀತೆಯ ಸಾರದವರೆಗೆ ನಿತ್ಯ ಸತ್ಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಬಾಬು ವಾಲಿ ಜನ್ಮಾಷ್ಠಮಿಯ ಶುಭಾಶಯ ಕೋರಿ ಗೋ ಮಾತೆಗೆ ಪೂಜೆ ನೆರವೇರಿಸಿದರು.
ವಿದ್ಯಾರ್ಥಿನಿಯರು ದಹಿ ಹಂಡಿ ಒಡೆಯುವ ಕಾರ್ಯಕ್ರಮದಲ್ಲಿ ಭಾಗಿವಹಿಸಿ ದಹಿ ಹಂಡಿ ಒಡೆದರು.
ಶಾಲಾ ಮಕ್ಕಳು ಕೃಷ್ಣ ರಾಧೆಯ ಉಡುಪುಗಳಲ್ಲಿ ಮಿಂಚಿ ಕುಣಿದು ಕುಪ್ಪಳಿಸಿದರು. ಮಕ್ಕಳಿಂದ ಸಂಸ್ಕøತ ಕಾರ್ಯಕ್ರಮಗಳು ಜರುಗಿದವು.
ಈ ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ವಿಜಯಕುಮಾರ ಪಾಟೀಲ ಯರನಳ್ಳಿ, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಸಂಭ್ರಮಿಸಿದರು.