ಸಪ್ತಸಾಗರದ ಶಾರದಾ ಪ್ರೌಢ ಶಾಲೆಯ ಬಾಲಕಿಯರ ಥ್ರೋಬಾಲ್ ತಂಡ ಪ್ರಥಮ
ಅಥಣಿ : ಆ.28:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಥಣಿ ಹಾಗೂ ಶೇಗುಣಸಿ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ, 2024-25 ನೇ ಶೈಕ್ಷಣಿಕ ವರ್ಷದ ದರೂರ ವಲಯ ಮಟ್ಟದ ಹೆಣ್ಣು ಮಕ್ಕಳ ಕ್ರೀಡಾಕೂಟ ಶೇಗುಣಸಿ ಪ್ರೌಢಶಾಲೆಯಲ್ಲಿ ಜರುಗಿದವು.
ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕ್ರೀಡಾಕೂಟದಲ್ಲಿ ಭಾಗವಹಿಸಿ ಥ್ರೋಬಾಲ್ ಗುಂಪು ಆಟದಲ್ಲಿ ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿ, ಪ್ರೌಢ ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಸುರೇಶ ಸವದಿಯವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ ಹಳ್ಳೂರ ಇವರು ಅತ್ಯುತ್ತಮವಾದ ತರಬೇತಿ ನೀಡಿದ್ದರು. ಶಿಕ್ಷಕಿ ಲಕ್ಷ್ಮೀ ಪರೀಟ ಇವರು ತಂಡದ ವ್ಯವಸ್ಥಾಪಕಿಯರಾಗಿದ್ದರು.
ವಿಜೇತ ತಂಡಕ್ಕೆ ಹಾಗೂ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ಹಾಗೂ ಗೆಲುವು ಸಾಧಿಸಲು ಶ್ರಮಿಸಿದ ಎಲ್ಲ ಸಿಬ್ಬಂದಿಯವರಗೆ, ಸಮಸ್ತ ಪಾಲಕ ಬಂಧುಗಳು, ಗ್ರಾಮಸ್ಥರು, ಶಾರದಾ ಹಿರಿಯ ವಿದ್ಯಾರ್ಥಿ/ನಿಯರು, ಸಂಸ್ಥೆಯ ಆಡಳಿತ ಮಂಡಳಿಯ ಪರವಾಗಿ ಸಂಸ್ಥೆಯ ಸಂಸ್ಥಾಪಕ ಡಿ.ಬಿ.ನದಾಫ. ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಮುಕುಂದ ತೀರ್ಥ. ಹಾಗೂ ಎಲ್ಲ ಶಿಕ್ಷಕ/ಶಿಕ್ಷಕಿಯರು ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.