ಮತಾಂತರ ಸಂಸ್ಕøತಿ ಇನ್ನು ಜೀವಂತವಾಗಿರುವದು ಕಳವಳಕಾರಿ ವಿಷಯ:ಕೃಷ್ಣಾ ಜೊಷಿ
ಚಿತ್ತಾಪುರ:ಆ.28:ದೇಶಕ್ಕೆ ಸ್ವಾತಂತ್ರ್ಯ ಸಿಕ್ಕೂ 70 ವರ್ಷಗಳು ಕಳೆದರೂ ದೇಶದಲ್ಲಿ ಇನ್ನು ಕೂಡಾ ಮತಾಂತರ ಸಂಸ್ಕøತಿ ಜೀವಂತವಾಗಿರುವದು ಕಳವಳಕಾರಿ ವಿಷಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ವಿಚಾರ ಪ್ರಮುಖ ಕೃಷ್ಣ ಜೋಷಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ವಿಶ್ವ ಹಿಂದು ಪರಿಷದ್ ಚಿತ್ತಾಪುರ ಪ್ರಖಂಡ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಶ್ವಹಿಂದೂ ಪರಿಷತ್ ಷಷ್ಟಿಪೂರ್ತಿ ಮಹೊತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಕ್ರೀಶ್ಚಿಯನ್ ಮತ್ತು ಮುಸ್ಲಿಂ ಸೇರಿದಂತೆ ಕೆಲವು ಸಮುದಾಯಗಳು ಹಿಂದೂ ಧರ್ಮದವರನ್ನು ಮತಾಂತರ ಮಾಡುವ ದೊಡ್ಡ ಜಾಲವೇ ನಡೆದಿದೆ ಇದನ್ನು ತಡೆಗಟ್ಟಲು ವಿಶ್ವಹಿಂದೂ ಪರಿಷತ್ ಬಜರಂಗ ದಳವು ನಿರಂತರವಾಗಿ ಹೊರಾಟಗಳನ್ನು ಮಾಡುತ್ತಾ ಬರುತ್ತಿದ್ದು ಅಲ್ಲದೇ ಮತಾಂತರ ತಡೆಯುವ ಹಾಗೂ ಮತಾಂತರಗೊಂಡವರನ್ನು ವಾಪಸ್ಸು ಹಿಂದೂ ಧರ್ಮಕ್ಕೆ ತರುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಕ್ಕೆ ತೆರಳಿ ಹಿಂದೂ ಸಮಜವನ್ನು ಜಾಗೃತಿ ಗೊಳಿಸಲು ಕಾರ್ಯ ನಿರಂತರವಾಗಿ ಮಾಡಬೇಕಿದೆ ಇದಕ್ಕೆ ಕೈಜೊಡಿಸಲು ಪ್ರತಿಯೊಬ್ಬರು ನಾವೆಲ್ಲ ಹಿಂದೂ ನಾವೇಲ್ಲ ಒಂದು ಎನ್ನುವ ಘೊಷಣೆಯೊಂದಿಗೆ ಹಿಂದೂ ಸಂಸ್ಕøತಿ ಸಂಸ್ಕಾರಗಳನ್ನು ನಾವು ನಮ್ಮ ಮನೆಯಲ್ಲಿ ಅಳವಡಿಕೊಳ್ಳಬೇಕು ಎಂದರು.
ಓರಿಯಂಟ್ ಸಿಮೆಂಟ್ ಕಂಪನಿಯ ಸಹಾಯಕ ಉಪಾಧ್ಯಕ್ಷ ಸಾಜೀಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತ ದೇಶವು ವೈವಿಧ್ಯಮಯ ಸಾಂಸ್ಕøತಿಕ ಮತ್ತು ಸಂಪ್ರದಾಯಿಕ ಉಪಸ್ಥಿತಿಯನ್ನು ಹೋದಿದೆ. ಅಲ್ಲದೇ ಕಲೆ, ವಾಸ್ತುಶಿಲ್ಪ ಸೇರಿದಂತೆ ವೈವಿದ್ಯತೆಯಿಂದ ಕೂಡಿದ ಸಮೃದ್ದವಾದ ದೇಶವಾಗಿದ್ದು ಇಲ್ಲಿನ ಪ್ರತಿಯೊಬ್ಬರು ಗುರು ಹಿರಿಯರನ್ನು ಗೌರವಿಸುವ ಸಂಸ್ಕøತಿ ಸಂಸ್ಕಾರಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಸುಲೇಪೇಠದ ವಿಶ್ವಕರ್ಮ ಏಕದಂಡ ಮಠದ ದೊಡ್ಡೇಂದ್ರ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು. ಶ್ರೀಮತಿ ರಮಾಬಾಯಿ ಅಂಬೇಡ್ಕರ್ ಟ್ರಸ್ಟ್ ಕಾರ್ಯದರ್ಶಿ ಶಿವಕುಮಾರ ಘಾವರಿಯಾ ಮಾತನಾಡಿದರು.
ಶ್ರೀ ಅವಧೂತ ನಾಗಲಿಂಗ ಶರಣರು, ಬಲವಂತರೆಡ್ಡಿ, ಶ್ರೀನಿವಾಸ ಹಳ್ಳಿ, ರೇಣುಕಾ ಬಿರಾದಾರ ವೇದಿಕೆಯಲ್ಲಿದ್ದರು.
ಅಂಬರೀಶ ಸುಲೇಗಾಂವ ಸ್ವಾಗತಿಸಿದರು. ಸಂತೊಷ ನಿರೂಪಿಸಿದರು. ಚಂದ್ರಕಾಂತ ದೊಡ್ಮನಿ ನಿರೂಪಿಸಿದರು.
ವಿಶ್ವಹಿಂದೂ ಪರಿಷತ್, ಬಜರಂಗದಳ, ಹಾಗೂ ಪಟ್ಟಣದ ಪ್ರಮುಖರು ಮಾತೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.