ನವಿಲುತೀರ್ಥ ಡ್ಯಾಂನಿಂದ ನೀರು ಬಿಡುಗಡೆ
ಮುನವಳ್ಳಿ,ಆ.28: ನವಿಲುತೀರ್ಥ ಡ್ಯಾಂ ಇಗಾಗಲೆ ಭರ್ತಿಹಂತದಲ್ಲಿದ್ದು ಒಳ ಹರಿವು 10000 ಕ್ಯೂಸೆಕ್ ನೀರು ಹರಿದು ಬರುತ್ತಿರುವ ಕಾರಣ ಮಂಗಳವಾರ ಸಂಜೆ 10000 ಕ್ಯೊಸೆಕ್ ನೀರು ಬಿಟ್ಟಿದ್ದು ಇನ್ನು ಹಂತ ಹಂತವಾಗಿ 5000 ಕ್ಯೂಸೆಕ್ ನೀರನ್ನು ಆಣೆ ಕಟ್ಟಿನಿಂದ ಬಿಡುವವರಿದ್ದು ಮುನವಳ್ಳಿ ಹಳೆ ಸೇತುವೆ ಜಾಲವೃತ್ತವಾಗಿ ರಸ್ತೆ ಸಂಚಾರ ಬಂದ ಆಗಿದೆ. ಮಲಫ್ರಭಾ ನದಿ ದಂಡೆಯಲ್ಲಿ ಇರುವ ಜನರು ತಮ್ಮ ತಮ್ಮ ಜನ ಜಾನುವಾರುಗಳ ಮುಂಜಾಗ್ರತೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ನವಿಲುತಿರ್ಥ ಅಧಿಕಾರಿ ಕೆ.ಬಿ.ಸಜ್ಜನಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿರುವರು.