ಅವ್ಯವಸ್ಥೆಯ ಆಗರ ಜಿಡಗಾ-ಮೋಘಾ ರಸ್ತೆಯಲ್ಲಿ ಸಂಚಾರಕ್ಕೆ ಪರದಾಟ
ಆಳಂದ:ಆ.28: ಆಳಂದ ಪಟ್ಟಣದಿಂದ 15 ಕಿ.ಮೀ ಅಂತರದ ಆರಂಭಗೊಳ್ಳುವ ಜಿಡಗಾ ಮಾದನಹಿಪ್ಪರಗಾ ಮಾರ್ಗ ಮಧ್ಯದ ರಸ್ತೆಯ ಪ್ರತ್ಯೇಕ ಎರಡು ಕಡೆ ರಸ್ತೆಯ ಅವ್ಯವಸ್ಥಿಯಿಂದಾಗಿ ಜೀವ ಭಯದಲ್ಲಿ ವಾಹನ ಸವಾರು ಸಂಚರಿಸುವಂತಾಗಿದೆ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.
ವಾಗ್ದರಿ-ರಿಬ್ಬನಪಲ್ಲಿ ಹೆದ್ದಾರಿಯ ಮಾರ್ಗದÀ ಜಿಡಗಾ ಕ್ರಾಸ್‍ನಿಂದ ಸಾಗುವ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವ ಮಾದನಹಿಪ್ಪರಗಾ ಗ್ರಾಮ ಸಂಪರ್ಕ ರಸ್ತೆಯ ಅಲ್ಲಲ್ಲಿನ ತೆಗ್ಗು ದಿನ್ನೆಗಳಿಂದ ಕೂಡಿದ್ದು ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಸಂಚಕಾರವಾಗಿ ಸವಾರರು ಪರದಾಡುವಂತಾಗಿದೆ.
ಈ ಮಾರ್ಗ ಮಧ್ಯದÀ ಜಿಡಗಾ ಮತ್ತು ಜಮಗಾ ಗ್ರಾಮದಿಂದ 2 ಕಿ.ಮೀ ಅಂತರದ ಮೋಘಾ ಬಿ. ಗ್ರಾಮದವರೆಗೆ ಸಾಗುವ ರಸ್ತೆಗೆ ಅತ್ತಿ ಹೆಚ್ಚಿನ ತೆಗ್ಗುದಿನೆಗಳಿಂದಾಗಿ ಮಳೆ ನೀರು ನಿಂತು ದ್ವಿಚಕ್ರವಾನ, ಜೀಪ್, ಬಸ್ ಲಾರಿಗಳ ಸಂಚಾರಕ್ಕೆ ತೊಂದರೆ ಎದುರಾಗಿದೆ ಎಂದು ಮೋಘಾ ಗ್ರಾಮದ ಶ್ರೀಮಂತ ನಡಗೇರಿ ಅವರು ಅಳಲು ತೋಡಿಕೊಂಡಿದ್ದಾರೆ.
ಮತ್ತೊಂದಡೆಯ ಜಿಡಗಾ ಗ್ರಾಮದ ಕಮಾನಿನ ಮುಂಭಾಗದಿಂದ ಮಾದನಹಿಪ್ಪರಗಾ ಮಾರ್ಗಕ್ಕೆ ಸಾಗುವ ರಸ್ತೆಯ ಸೇತುವೆಯ ಬಳಿಯೂ ಹದಗೇಟ್ಟ ರಸ್ತೆಯಿಂದಾಗಿ ಸಂಚಾರ ದುಸ್ಥಿತರವಾಗಿ ಮಾರ್ಪಟ್ಟಿದೆ. ರಸ್ತೆಯ ಈ ಅವ್ಯವಸ್ಥೆಯಿಂದಾಗಿ ದ್ವಿಚಕ್ರವಾಹನಗಳುÀ ಜಾರಿಬಿದ್ದು ಸವಾರರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಕೂಡಲೇ ಸಂಬಂಧಿತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆಯ ತೆಗ್ಗು ದಿನ್ಯಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಶ್ರೀಮಂತ ನಡಗೇರಿ ಅವರು ಒತ್ತಾಯಿಸಿದ್ದಾರೆ.