ಅಪಘಾತ : ಮಹಿಳೆ ಸಾವು- ಐವರು ಗಂಭೀರ
ಹುಬ್ಬಳ್ಳಿ, ಆ 28: ಟಾಟಾ ಏಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಕಲಘಟಗಿ ರಸ್ತೆಯ ತಡಸ್ ಕ್ರಾಸ್ ಬಳಿ ಇಂದು ಬೆಳ್ಳಿಗೆ ನಡೆದಿದೆ.
ಕಲಘಟಗಿ ಕಡೆಯಿಂದ ಗಾರ್ಮೆಂಟ್ ಕೆಲಸಕ್ಕೆ ಮಹಿಳೆಯರನ್ನು ಕರೆದುಕೊಂಡು ಹೊರಟಿದ್ದ ಟಾಟಾ ಏಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಐವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಮಹಿಳೆ ಹಾಗೂ ಗಂಭೀರವಾಗಿ ಗಾಯಗೊಂಡವರ ಮಾಹಿತಿ ತಿಳಿದುಬರಬೇಕಿದೆ.