ಶಾಂತಿ ಸಭೆ
ಚನ್ನಮ್ಮನ ಕಿತ್ತೂರು,ಆ28: ಪಟ್ಟಣ ಗುರುವಾರ ಪೇಟೆ ಶ್ರೀ ವೀರಭದ್ರೇಶ್ವರ ಕಲ್ಯಾಣಮಂಟಪದಲ್ಲಿ ಗಣೇಶ ಚತುರ್ದಶಿ ಹಬ್ಬದ ಅಂಗವಾಗಿ ಪೋಲಿಸ್ ಇಲಾಖೆಯಿಂದ ಶಾಂತಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಕಿತ್ತೂರು ಪೂಲಿಸ್ ಠಾಣೆ ಸಿಪಿಐ ಶಿವಾನಂದ ಗುಡಗನಟ್ಟಿ ಮಾತನಾಡಿ ಬರುವ ಗಣೇಶ ಹಬ್ಬವನ್ನು ಎಲ್ಲರೂ ಜೊತೆಗೂಡಿ ವಿಜೃಂಭಣೆಯಿಂದ ಕಾನೂನು ಅಡಿಯಲ್ಲಿ ಆಚರಿಸೋಣ ಕಾನೂನು ಉಲ್ಲಂಘಣೆ ಮಾಡಿದವರಿಗೆ ಯಾವುದೇ ಮೂಲಾಜಿಲ್ಲದೇ ಕ್ರಮ ಜರುಗಿಸಲಾಗುವುದು. ಕಾನೂನು ಉಲ್ಲಂಘಣೆಯಾದರೇ ನೀವೇ ಹೊಣೆಗಾರರೆಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.
ಎಲ್ಲ ಇಲಾಖೆಯವರಿಂದ ನಿಮಗೆಲ್ಲರಿಗೂ ಒಂದೇ ದಿನದಂದು ಪರವಾನಗಿ ವ್ಯವಸ್ಥೆ ಮಾಡಲಾಗುವುದು. ನಿಗದಿಪಡಿಸಿದ ಸಮಯದಲ್ಲಿ ಎಲ್ಲ ಮಂಡಳಿಯವರು ಗಣೇಶನನ್ನು ಕೂಡ್ರಿಸುವುದು. ಮತ್ತು ವಿಸರ್ಜಿಸುವುದು ಒಂದೇ ಮಾರ್ಗದಡಿ ಸಾಗಬೇಕು. ಮಾರ್ಗ ಬದಲಾಯಿಸಬಾರದು.
ವಿಸರ್ಜನೆ ಪೂರ್ವದಲ್ಲಿಯೇ ಆರ್ಶೀವಾದ ಮತ್ತು ಸವಾಲ್ ಮಾಡುವ ವಸ್ತುಗಳನ್ನು ಇನ್ನಿತರ ಕಾರ್ಯಕ್ರಮಗಳನ್ನು ರಾತ್ರಿ 10 ಗಂಟೆಯೊಳಗಾಗಿ ಮುಕ್ತಾಯಗೊಳಿಸಬೇಕು. ಪತ್ರಿಕೆಗಳಲ್ಲಿ ಮುದ್ರಿತವಾದ ವಿಷಯಗಳು ಅಧೀಕೃತವಾಗಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ವಿಷಯಗಳನ್ನು ಆಲಿಸಬೇಡಿ ಅವು ಅಧೀಕೃತವಿರುವುದಿಲ್ಲವೆಂದು ತಿಳಿಸಿದರು.
ಪಿಎಸ್‍ಐ ಪ್ರವೀಣ ಗಂಗೋಳ ಮಾತನಾಡಿ ಗಣಪತಿ ಕೂಡ್ರಿಸಲು ಮಂಡಳಿಯವರು ಸಂಬಂಧಪಟ್ಟ ಎಲ್ಲ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಡಾಲ್ಬಿ ಹಚ್ಚಲು ಪರವಾನಗಿಯಿಲ್ಲ. ಸ್ಪೀಕರ ಹಚ್ಚಲು ಬೆಳಿಗ್ಗೆ 5 ರಿಂದ ರಾತ್ರಿ 9ರವರೆಗೆ ಮಾತ್ರ. ಸ್ಪೀಕರಿನಲ್ಲಿ ಜೂಜಾಟ ಸೇರಿದಂತೆ ಆಶ್ಲೀಲ ಹಾಡುಗಳನ್ನು ಹಚ್ಚಬಾರದು ಅಂತಹದ್ದೇನಾದರು ಕಂಡುಬಂದರೆ ನಿರ್ಧಾಕ್ಷಣೆಯಿಂದ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.
ಹೇಸ್ಕಾಂ ಸಹಾಯಕ ಎಸ್‍ಓ ಶ್ರೀಶೈಲ ಸವದತ್ತಿ ಮಾತನಾಡಿದರು.
ಈ ವೇಳೆ ತಹಶೀಲ್ದಾರ ರವೀಂದ್ರ ಹಾದಿಮನಿ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ, ಪಿಎಸ್‍ಐ ಸುಮಾ ಗೋರಬಾಳ, ಬಸವರಾಜ ಕೋಲಕಾರ, ಸೋಮಶೇಖರ ತೇಗೂರ, ಶಿವು ಹಿರೇಮಠ, ದಿನೇಶ ಒಳಸಂಗ, ಬಸು ಸಂಗೋಳ್ಳಿ, ಅಬ್ದುಲ್ ಸತ್ತಾರ್, ಸೇರಿದಂತೆ ಸಾರ್ವಜನಿಕರು ಸಲಹೆ ನೀಡಿದರು. ಅಪರಾಧ ವಿಭಾಗ ಪಿಎಸ್‍ಐ ಪ್ರವೀಣ ಕೋಟಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.