ಜಾನಪದ ಕನ್ನಡ ಸಾಹಿತ್ಯದ ತಾಯಿಯ ಬೇರು ಆಗಿದೆ:ಜ್ಯೋತಿಲಿರ್ಂಗ
ತಾಳಿಕೋಟೆ : ಅ.2: ಕನ್ನಡ ಭಾಷೆಗೆ ಮತ್ತು ಕನ್ನಡ ಸಾಹಿತ್ಯಕ್ಕೆ ಶಕ್ತಿ ತುಂಬಿರುವಂತಹದ್ದು ಜಾನಪದ ಸಾಹಿತ್ಯವಾಗಿದೆ ಹೀಗಾಗಿ ಕನ್ನಡದ ತಾಯಿಯ ಮೂಲ ಬೇರು ಜಾನಪದ ಸಾಹಿತ್ಯವಾಗಿದೆ ಎಂದು ಬೆಂಗಳೂರ ಸಿಪಿಐ ಜ್ಯೋತಿಲಿರ್ಂಗ ಹೊನ್ನಾಕಟ್ಟಿ ಅವರು ಹೇಳಿದರು.
ಮಂಗಳವಾರರಂದು ಪಟ್ಟಣದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ತಾಳಿಕೋಟೆ ನೇತೃತ್ವದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-50 ರ ಅಂಗವಾಗಿ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ನಡೆದ ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿ 3 ರ ಜಾನಪದ ಚಿಂತನ ಗೋಷ್ಠಿಯನ್ನು ತಬಲಾ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಹೆಣ್ಣು ಮಕ್ಕಳಲ್ಲಿರತಕ್ಕಂತಹ ಸಂಸ್ಕಾರ ಗಂಡು ಮಕ್ಕಳಲ್ಲಿ ಅಷ್ಟು ಬರಲು ಸಾದ್ಯವಿಲ್ಲಾ ಜನಪದದಲ್ಲಿ ಬಗೆದಷ್ಟು ವಜ್ರಕ್ಕಿಂತಲೂ ಕಠಿಣವಾದ ಸಿಹಿ ಆನಂದ ಸಿಗುತ್ತದೆ ನಾವು ಕಲಿತ ವಿದ್ಯೆಯೊಂದಿಗೆ ಸಂಸ್ಕಾರ ಎಂಬುದು ಇರದಿದ್ದರೆ ಕಲಿತ ವಿದ್ಯೆ ಎಲ್ಲಾ ಮಣ್ಣುಪಾಲು ಆಗಲಿದೆ ಸಂಸ್ಕಾರವೆಂಬುದು ಎಲ್ಲರಲ್ಲಿ ತುಂಬುವಂತಹ ಕಾರ್ಯ ತಾಯಿಯಾದವಳು ಮಾಡುತ್ತಾಳೆ ಈ ಸಂಸ್ಕಾರ ಪ್ರತಿಯೊಬ್ಬರ ಬಧುಕಿನ ಬದ್ರಬುನಾದಿಯಾಗಿದೆ ನಮಗೆ ಸಂಸ್ಕಾರ ಕೊಟ್ಟಿರುವದೇ ಜನಪದ ಸಾಹಿತ್ಯವಾಗಿದೆ ಇಂತಹ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವದರೊಂದಿಗೆ ಕನ್ನಡ ಸಾಹಿತ್ಯಕ್ಕೆ ನಮ್ಮಿಂದಲೂ ಶಕ್ತಿ ತುಂಬುವಂತಹ ಕಾರ್ಯ ಮಾಡೋಣ ಎಂದು ಗರತಿಯಾಗಿ ಬಾಳು ನೀನು ಗಂಡನೂರಾಗ, ತಾಯಿ ಸೇವೆ ಮಾಡೋ ಜನ್ಮಕ ಜನ್ಮ ಮಾಡಿಕೋ ಸಾರ್ಥಕ, ಮರಿಬ್ಯಾಡ ತಂಗಿ ತವರೂರ ಹೋಗಾಗ ಹಾಕಬ್ಯಾಡ ಕಣ್ಣೀರ, ಎಂಬ ಜನಪದ ಹಾಡುಗಳನ್ನು ಹಾಡಿ ಜನಮನ ರಂಜಿಸಿದರು. ಇನ್ನೋರ್ವ ಜಾನಪದ ಕಲಾವಿದರಾದ ಬಸವನ ಬಾಗೇವಾಡಿಯ ಶಿವಾನಂದ ಮಂಗಾನವರ ಅವರುಸಣ್ಣವನಲ್ಲೋ ಪುಣ್ಯವಂತ ಕಣ್ಣು ತೆರೆದು ನೋಡೋ ವಕ್ಕಲಿಗ, ಜಾನಪದ ಹಾಡಿನ ಮೂಲಕ ಕನ್ನಡ ಉಳಿಸಿ ಬೆಳೆಸುವಲ್ಲಿ ಜಾನಪದ ಸಾಹಿತ್ಯದ ಪಾತ್ರ ಕುರಿತು ವಿವರಿಸಿದರು.
ಇನ್ನೋರ್ವ ಹೊನ್ನುಟಗಿಯ ಮೆಹತಾಬ ಕಾಗವಾಡ ಅವರು ಯಾಕೆ ಚಿಂತೆ ಮಾಡತೀದ ಎಲೆ ಮನವೇ ನಿನಗ ಯಾಕಾರ ಸುಖಃವಿಲ್ಲಾ ಎಲೆ ಮನವೇ'' ಎಂಬ ಜಾನಪದ ಗೀತೆಯನ್ನು ಹಾಡಿದರು. ಇನ್ನೋರ್ವ ದೇವರ ಹಿಪ್ಪರಗಿಯ ರಾವತ್ ತಳಕೇರಿ ಅವರು ಮಾತನಾಡಿ ಇಂದು ತಾಳಿಕೋಟೆಯಲ್ಲಿ ನಡೆದ ಪ್ರಥಮ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವು ರಕ್ಕಸಗಿ ತಂಗಡಗಿಯ ಯುದ್ದವನ್ನು ನೆನಪಿಸಿದಂತಾಗಿದೆ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಕೂಡಾ ನಾನು ಇಷ್ಟು ವೈಭವ ಕಂಡಿರಲಿಲ್ಲಾ ಅಂತಹ ವೈಭವದೊಂದಿಗೆ ಸಮ್ಮೇಳನವನ್ನು ನಡೆಸಿದ ಕಸಾಪ ಜಿಲ್ಲಾ ಅಧ್ಯಕ್ಷ ಹಾಸಿಂಫೀರಾ ವಾಲಿಕಾರ ಹಾಗೂ ತಾಲೂಕಾ ಅಧ್ಯಕ್ಷ ಆರ್.ಎಲ್.ಕೊಪ್ಪದ ಅವರನ್ನು ಅಭಿನಂದಿಸುತ್ತೇನೆಂದ ಅವರು ಮೂಕ ನಾಗಬೇಕು ಜಗದೊಳು ಜ್ಯಾತ್ಯಾಗಿರಬೇಕು ಎಂಬ ಮತ್ತು ಪುಂಡಿ ಪಲ್ಲೆ ಚಟ್ನಿ ರೊಟ್ಟಿ ಎಂಬ ಜನಪದ ಗೀತೆಗಳನ್ನು ಹಾಡಿ ಜನಮನ ರಂಜಿಸಿದರು. ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿಗಳಾದ ಶ್ರೀಮತಿ ಶಿವಲೀಲಾ ಮುರಾಳ ಅವರು ಜನಪದ ಜೀವನದಲ್ಲಿ ಗರತಿ ಎಂಬ ವಿಷಯದ ಮೇಲೆ ಮಾತನಾಡಿದ ಅವರು ಇಂದಿನ ಜನಪದ ಗೀತೆಗಳಿಂದ ನಮ್ಮ ಮಕ್ಕಳು ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ ಅಂತಹ ಮಕ್ಕಳನ್ನು ಸರಿದಾರಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ತಾಯಂದಿರರ ಮೇಲಿದೆ ಕನ್ನಡ ಸಾಹಿತ್ಯಕ್ಕೆ ಜನಪ ಬೇರು ಅತ್ಯವಶ್ಯವಾಗಿದೆ ಎಂದುಎಲ್ಲಿ ಕಾಣ ಎಲ್ಲಿ ಕಾಣೇನೋ ಇಂತಹ ಕನ್ನಡ ಸಾಹಿತ್ಯ ಸಮ್ಮೇಳನವನ್ನು” ಹಾಗೂ ಮೂಡಲ ಸಿಮೇಗೆ ಹೋಗಿ ಬಾರಯ್ಯಾ ಮಳೆಯಪ್ಪ ಮಳೆರಾಯ ಕರೆಯುತಾರೋ ನಿನ್ನಾ ಕರೆಯುತ್ತಾರೋ'' ಎಂಬ ಜನಪದ ಗೀತೆಯನ್ನು ಹಾಡುವ ಮೂಲಕ ಈ ದೇಶದ ಬೆನ್ನೇಲು ರೈತನನ್ನು ಉಳಿಸಿ ಬೆಳೆಸಿದರೆ ದೇಶಕ್ಕೆ ಉತ್ತಮ ಭವಿಷ್ಯವಿದೆ ಎಂದರು. ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿದ ಕನ್ನಡ ಜನಪದ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಸಿದ್ದನಗೌಡ ಕಾಶಿನಕುಂಟಿ ಅವರು ಗ್ರಾಮೀಣರ ಜಾನಪದ ಸಾಹಿತ್ಯ ವಿಷಯ ಕುರಿತು ಮಾತನಾಡಿದ ಅವರು 12ನೇ ಶತಮಾನದಲ್ಲಿ ವಚನ ಸಾಹಿತ್ಯ ಬೆಳಕಿಗೆ ಬಂದರೆ ದಾಸ ಸಾಹಿತ್ಯ, ಕವಿ ವಾಣಿ, ಜನಪದ, ಕನ್ನಡ ಸಾಹಿತ್ಯಕ್ಕೆ ಶಕ್ತಿ ತುಂಬಿವೆ ಎಂದರೆ ತಪ್ಪಾಗಲಾರದು ಜನಪದ ಸಾಹಿತ್ಯವನ್ನು ಗ್ರಾಮೀಣ ತಾಯಂದಿರರು, ಹಾಗೂ ಹಿರಿಯರು ಕುಟ್ಟುವಾಗ, ಬೀಸುವಾಗ, ತಾಯಿ ಲಾಲಿ ಹಾಡು ಹಾಡುವಾಗ, ಹಂತಿ ಪದ ಹಾಡುವಾಗ ಬರುವ ಹಾಡು ಜನಪದ ಸಾಹಿತ್ಯ ವಿಸ್ತಾರವಾಗಲು ಕಾರಣವಾಗಿದೆ ಇಂದಿನ ಕಂಪ್ಯೂಟರ್‍ಕರಣ ಜನಪದ ಸಾಹಿತ್ಯವನ್ನು ಮರೆಮಾಚಲು ಹೊರಟಿದೆ ಇದು ಅತ್ಯಂತ ಕಳವಳಕಾರಿಯಾಗಿದೆ ಎಂದ ಅವರುಅಳಬ್ಯಾಡ ನನ ಕಂದ ಹಾಲು ಮಾರಿ ಬರತೀನಿ” ಎಂಬ ಜನಪದ ಗೀತೆಯೊಂದಿಗೆ ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಜನಪದ ಸಾಹಿತ್ಯದ ಕೊಡುಗೆ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಶೋಕ ಹಂಚಲಿ ಅವರು ಮಾತನಾಡಿದರು.
ವೇದಿಕೆಯ ಮೇಲೆ ಪರಶುರಾಮ ಹಂಚಾಟೆ, ಶಿವಾನಂದ ಹೂಗಾರ, ಶಿವು ಚೌದರಿ, ಆರ್.ವ್ಹಿ.ಜಾಲವಾದಿ, ಎಂ.ಎಚ್.ಹಂದ್ರಾಳ, ಅಶೋಕ ಬಳಗಾನೂರ, ಶ್ರೀನಿವಾಸ ಸೋನಾರ, ವಿರುಪಾಕ್ಷಯ್ಯ ಗಣಾಚಾರಿ, ಮುತ್ತು ಜಾಗೀರದಾರ, ಬಿ.ಎಸ್.ಇಸಾಂಪೂರ ಮೊದಲಾದವರು ಇದ್ದರು.