ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಅಭಿಯಾನ
ಕಲಬುರಗಿ,ಅ.2-ಮಹಾತ್ಮ ಗಾಂಧಿ ನರೇಗಾ ಯೋಜನೆಯ 2025-26 ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನವನ್ನು ಕಮಲಾಪುರ ತಾಲೂಕಿನ ಓಕಳಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು.
ಕಾರ್ಮಿಕ ಆಯವ್ಯಯ ಸಂಬಂಧಪಟ್ಟಂತೆ ಮನೆ, ಮನೆ ಭೇಟಿ ನೀಡಿ ಸಾರ್ವಜನಿಕ ಮಾಹಿತಿ ನೀಡಲಾಯಿತು. ಪಂಚಾಯತ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಏಕೀಕೃತ ಸಹಾಯವಾಣಿ 8277506000 ಬಗ್ಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಮೋಹನ ದಾಸ ಸರ ಮತ್ತು ಬಿಎಫ್‍ಟಿ ಶರಣು ಹಾಗೂ ಕಾಯಕ ಮಿತ್ರ ಮಹಾನಂದ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.