ರೈತರ ನಿದ್ದೆಗೆಡಿಸಿದ್ದ ಜಾನುವಾರು ಕಳ್ಳರ ಬಂಧನ
ಕಾಳಗಿ.ಅ.2-ಹಲವು ತಿಂಗಳಿಂದ ರೈತರ ಜಾನುವಾರುಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಹಣ ಹಾಗೂ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ಕಲಬುರಗಿ ರಾಮಜೀ ನಗರ ಛೋಟಾ ರೋಜಾ ಖುರೇಷಿ ಮೊಹೊಲ್ಲಾದ ಅಮೀರ ಖುರೇಶಿ (25) ಮತ್ತು ಎಂಎಸ್‍ಕೆ ಮಿಲ್ ಜಿಲಾನಾಬಾದ ಖದೀರ್ ಚೌಕ್‍ನ ನೋಮಾನ ಶೇಖ್ (21) ಬಂಧಿತ ಆರೋಪಿಗಳಾಗಿದ್ದಾರೆ. ಮಂಗಳವಾರ ನಸುಕಿನ ಜಾವ ಜಾನುವಾರ ಆರೋಪಿ ಪತ್ತೆ ಕಾರ್ಯದಲ್ಲಿದಾಗ ತಾಲೂಕಿನ ಚಿಂಚೋಳ್ಳಿ (ಎಚ್ ) ಕ್ರಾಸ್ ಹತ್ತಿರ ನಿಂತಿದ್ದಾಗ ಹೆಬ್ಬಾಳ ಕಡೆಯಿಂದ ಆಗಮಿಸಿದ ಗೂಡ್ಸಬುಲೆರೋ ತಡೆದು ಅದರಲ್ಲಿದ್ದ ವಾಹನ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿ ವಾಹನ ಪರಿಶೀಲಿಸಿದಾಗ ವಾಹನದಲ್ಲಿ 4 ಹಗ್ಗ ಹಾಗೂ ಜಾನುವಾರುಗಳ ಬಾಯಿಗೆ ಹಾಕುವ 4 ಚುಕ್ಕಾ ದೊರೆತಿದ್ದವು. ಆರೋಪಿಗಳಿಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಜಾನುವಾರು ಕಳ್ಕತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 1.ಲಕ್ಷ ಮುದ್ದೆಮಾಲನ್ನು ಹಾಗೂ ಕೃತ್ಯಕ್ಕೆ ಬಳಸಿದ 4.50 ಲಕ್ಷ ರೂ.ಮೌಲ್ಯದ ಮಹೇಂದ್ರ ಪೀಕಪ್ ಬುಲೆರೋ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎರಡು ತಿಂಗಳಿಂದ ತಾಲೂಕಿನ ಹಲವೆಡೆ ಮನೆ ಮುಂದೆ ಕಟ್ಟಲಾಗಿದ್ದ ಜಾನುವಾರುಗಳ ಕಳ್ಳತನ ಹೆಚ್ಚಾಗಿತ್ತು. ಇದು ಪೆÇಲೀಸರಿಗೂ ದೊಡ್ಡ ತಲೆನೋವಾಗಿತ್ತು.
ಈ ಸಂಬಂಧ ಹೆಚ್ಚುವರಿ ಎಸ್.ಪಿ.ಶ್ರೀನಿಧಿ, ಶಹಾಬಾದ ಉಪ ವಿಭಾಗದ ಡಿಎಸ್‍ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಶಹಾಬಾದ ಪಿಐ ನಟರಾಜ ಲಾಡೆ, ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ ಅವರ ಮಾರ್ಗದರ್ಶನದಲ್ಲಿ ಕಾಳಗಿ ಪಿಎಸ್‍ಐ ತಿಮ್ಮಯ್ಯ, ಶಹಾಬಾದ ಪಿಎಸ್‍ಐ ಶಾಮರಾವ, ವಾಡಿ ಪಿಎಸ್‍ಐ ತಿರುಮಲೇಶ, ವಾಡಿ ಹಾಗೂ ಕಾಳಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಶಿವಪ್ಪ, ಮಂಜುನಾಥ, ಮಂಜು, ದೊಡ್ಡಪ್ಪ, ರಮನಯ್ಯ, ರವಿ, ಆರೀಫ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಜಾನುವಾರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು.
ಜಾನುವಾರುಗಳನ್ನು ಕಳ್ಳತನ ಮಾಡಿ ಬೀದರ್ ಜಿಲ್ಲೆಯ ಚಿಟಗುಪ್ಪಾ, ಬಸವಕಲ್ಯಾಣ, ಮತ್ತು ಭಾಲ್ಕಿಗೆ ತೆಗೆದುಕೊಂಡು ಹೋಗಿ ಜಾನುವಾರು ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಜಾನುವಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಕಾಳಗಿ ಪೊಲೀಸ್ ಠಾಣೆಯಲ್ಲಿ 4 ಮತ್ತು ವಾಡಿ ಪೊಲೀಸ್ ಠಾಣೆಯಲ್ಲಿ 2 ಸೇರಿ ಒಟ್ಟು 6 ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ತನಿಖೆ ವೇಳೆ ಬಯಲಿಗೆ ಬಂದಿದೆ ಎಂದು ತಿಳಿಸಿದರು.
ಕಳ್ಳತನವಾಗಿರೋ ಉಳಿದ ಜಾನುವಾರುಗಳ ಪತ್ತೆ ಹಚ್ಚಿ ಸಂಬಂಧಿಸಿದರವರಿಗೆ ಮರಳಿಸೋದಾಗಿ ಹೇಳಿದರು.
ಜಾನುವಾರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.