ಅಕ್ಷರ ಕಲಿಸಿದ ಗುರುವಿಗೆ ತುಲಾಭಾರ ಮಾಡಿದ ನಿವೃತ್ತ ಶಿಕ್ಷಕ
ಚಿತ್ತಾಪುರ,ಅ.2 : ಶಿಕ್ಷಕ ದೇವಪ್ಪ ನಂದೂರಕರ್ ತಮ್ಮ ಸೇವಾ ನಿವೃತ್ತಿ ಸಮಾರಂಭದಲ್ಲಿ ತಮಗೆ ಅಕ್ಷರ ಕಲಿಸಿದ ಪ್ರಾಥಮಿಕ ಶಾಲೆ ಗುರುವಿಗೆ ಫಲಗಳಿಂದ ತುಲಾಭಾರ ಮಾಡಿದ್ದು ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕರ್ತವ್ಯ ಮನುಷ್ಯನಿಗೆ ಸಂತಸ , ಉತ್ಸಾಹ, ಸ್ಪೂರ್ತಿ ನೀಡಬಲ್ಲದು ಎಂಬ ವಾಕ್ಯ ಅರಿತ ಶಿಕ್ಷಕ ದೇವಪ್ಪನಂದೂರಕರ್ ಅವರು ತಮ್ಮಕರ್ತವ್ಯ ಅವಧಿಯಲ್ಲಿ ಸತ್ಕಾರ್ಯ ಸದ್ವಿಚಾರ ದಕ್ಷತೆ ಹಾಗೂ ಸಮಯನಿಷ್ಠೆ ಅಳವಡಿಸಿಕೊಂಡು ತಾವು ಕರ್ತವ್ಯ ನಿರ್ವಹಿಸುವ ಚಿತ್ತಾಪುರ ಬಸವನಗರ ಶಾಲೆಗೆ ದಾನಿಗಳಿಂದ 23 ಗುಂಟಾ ಜಮೀನು ಒದಗಿಸಿ ಅದೊಂದು ಆರ್ದಶ ಮಾದರಿಶಾಲೆಯನ್ನಾಗಿ ಮಾಡಿ ಊರವರು ಮತ್ತು ಅಧಿಕಾರಿಗಳಿಂದ ಮೆಚ್ಚುಗೆ ಪಡೆದಿದ್ದಾರೆ