ನಾಳೆಯಿಂದ ಶ್ರೀ ರಾಮದರ್ಬಾರ್ ಮಂದಿರದಲ್ಲಿ ನವರಾತ್ರಿ ಉತ್ಸವ
ಬೀದರ,ಅ. 2: ನಗರದ ಜೈ ಶ್ರೀ ರಾಮ ಚಾರಿಟೇಬಲ್ ಏಜ್ಯುಕೇಶನ್ ಸೊಸೈಟಿ ವತಿಯಿಂದ ಜೈ ಭವಾನಿ ಮಾತಾ ಪೂಜೆ ಮತ್ತು ಘಟಸ್ಥಾಪನೆ ಹಾಗೂ ಬನ್ನಿ ಮರದ ಪೂಜೆ ಕಾರ್ಯಕ್ರಮ ವಿದ್ಯಾನಗರ ಬಡಾವಣೆಯ ಶ್ರೀ ರಾಮ ದರ್ಬಾರ ಮಂದಿರದ ಆವರಣದಲ್ಲಿ ಜರುಗಲಿದೆ. ಗುರುವಾರ ಅ. 3 ರಂದು ಘಟಸ್ಥಾಪನೆ. ಪೂಜೆಯ ನಂತರ ಫಲ ಆಹಾರ.
ಅ.4 ರಿಂದ 8 ರವರೆಗೆ ದಿನಾಲು ರಾತ್ರಿ 7.30 ಗಂಟೆಗೆ ಪೂಜೆ ಮತ್ತು ಮಹಾ ಮಂಗಳಾರತಿ ಇರುತ್ತದೆ. ಅ.9ರಂದು ಪೂಜೆ ಮತ್ತು ಮಹಾಮಂಗಳಾರತಿ,ನಂತರ
ಮಹಿಳೆಯರಿಂದ ದಾಂಡಿಯಾ ಕಾರ್ಯಕ್ರಮ ನಡೆಯುವುದು.ಅ.10 ರಂದು ಪೂಜೆ ಮತ್ತು ಮಹಾಮಂಗಳಾರತಿ,ನಂತರ ಮಹಿಳೆಯರಿಂದ ದಾಂಡಿಯಾ ಕಾರ್ಯಕ್ರಮ ನಡೆಯುವುದು, ತದನಂತರ ಭಜನೆ ಮತ್ತು ಜಾಗರಣೆ.ಅ.11 ರಂದು ಬೆಳಿಗ್ಗೆ 9.30 ಗಂಟೆಗೆ ಚಂಡಿ ಹೋಮ-ಹವನ ಯಜ್ಞ ಕಾರ್ಯಕ್ರಮ ನಡೆಯುವುದು.ಮತ್ತು 11 ಗಂಟೆಗೆ ಕನ್ಯಾ ಪೂಜೆ ಜರುಗುವುದು.ನಂತರ ಮಹಾಪ್ರಸಾದ.12ರಂದು ಸಾಯಂಕಾಲ 4 ಗಂಟೆಗೆ ರಾಮ ದರ್ಬಾರ ಮಂದಿರದಿಂದ ಬಾಜ ಭಜಂತ್ರಿಯೊಂದಿಗೆ ಬಡಾವಣೆಯ ವಿವಿಧ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ತೆರಳಿ ಪೂಜೆ ಸಲ್ಲಿಸಿ, ಪುನಃ ಮಂದಿರಕ್ಕೆ ಬಂದು ಸಾಯಂಕಾಲ 6 ಗಂಟೆಗೆ ಬನ್ನಿ ಮರದ ಪೂಜೆ ನಡೆಯುವುದು, ನಂತರ ಬಾಜ-ಭಜಂತ್ರಿಯೊಂದಿಗೆ ದೇವಿಯ ಮೂರ್ತಿಯ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಗುವುದು.ಆದಕಾರಣ ಬಡಾವಣೆಯ ನಿವಾಸಿಗಳು ಕುಟುಂಬ ಸಮೇತ ಬಂದು, ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜೈಶ್ರೀ ರಾಮ ಚಾರಿಟೇಬಲ್ ಏಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಶ್ರೀಕಾಂತ್ ಪಾಟೀಲ್ ತಿಳಿಸಿದ್ದಾರೆ.