ನವಲಗುಂದ: ಶಾಂತಿ ಸಭೆ
ನವಲಗುಂದ,ಆ28 : ನಗರದ ತಾಲ್ಲೂಕಾ ಪಂಚಾಯತಿ ಸಭಾಭವನದಲ್ಲಿ ತಾಲೂಕಾ ಆಡಳಿತ ಹಾಗೂ ಪೊಲೀಸ್ ಠಾಣೆಯ ವತಿಯಿಂದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರುಗಿತು
ಈ ವೇಳೆ ಸಿಪಿಐ ರವಿ ಕಪ್ಪತ್ತನವರ ಮಾತನಾಡಿ ಹಬ್ಬದ ಆಚರಣೆಗಳು ಕಾನೂನಿನ ಚೌಕಟ್ಟಿನಲ್ಲಿ ಇರಬೇಕು. ಡಿಜೆ ಹಚ್ಚಬಾರದು,ಯಾವುದೇ ಗದ್ದಲ ಗಲಭೆಗೆ ಅವಕಾಶವಿರುವದಿಲ್ಲ. ನಮ್ಮ ನವಲಗುಂದ ಠಾಣೆ ಜನಸ್ನೇಹಿ ಠಾಣೆಯಾಗಿದ್ದು, ಸಾರ್ವಜನಿಕರ ಸಹಕಾರವೂ ಬಹು ಮುಖ್ಯವಾಗಿದೆ ಎಂದರು.

ಪಿಎಸ್‍ಐ ಜನಾರ್ಧನ ಬಿ ಮಾತನಾಡಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತ ರೀತಿಯಿಂದ ಆಚರಣೆ ಮಾಡಿ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಸಹಕಾರ ನೀಡಿ ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ಸಭೆಯಲ್ಲಿ ಸೇರಿದ್ದ ಮುಖಂಡರುಗಳಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಧೀರ ಸಾಹುಕಾರ, ಬಿ ಎಸ್ ಪಾಟೀಲ್, ಜಗದೀಶ್ ಹೂಗಾರ, ಸಾವಿತ್ರಿ ಮುಪ್ಪಯ್ಯನವರ ಹಾಗೂ ಸರ್ವ ಧರ್ಮಗಳ ಮುಖಂಡರು ಹೆಸ್ಕಾಂ ಅಧಿಕಾರಿಗಳು ಗಜಾನನ ಮಂಡಳಿಯವರು ಸೇರಿದಂತೆ ನಗರದ ಎಲ್ಲ ಗಣೇಶ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.