ಭಾರತೀಯ ಸಂಸ್ಕೃತಿ ಉತ್ಸವ- ೭ ಸ್ವಾಗತ
ರಾಯಚೂರು.ಆ೨೮: ಕಲ್ಯಾಣ ಕರ್ನಾಟಕ ವಿಕಾಸಪತ ಪರಮಪೂಜ್ಯ ಶ್ರೀ ಸದಾಶಿವ ಸ್ವಾಮಿಗಳ ನೇತೃತ್ವದಲ್ಲಿ ಕಲ್ಯಾಣ ರಥವನ್ನು ಬಸವೇಶ್ವರ ವೃತ್ತದಲ್ಲಿ ವಿಕಾಸ ಅಕಾಡೆಮಿಯ ಸಂಚಾಲಕವರು ಕಲ್ಯಾಣ ರಥವನ್ನು ಬರಮಾಡಿಕೊಂಡು ಮೆರವಣಿಗೆಯ ಮೂಲಕ ಕಿಲ್ಲೆಬ್ರಹ್ಮಠಕ್ಕೆ ತರಲಾಯಿತು.
ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಕಿಲ್ಲೆಬ್ರಹ್ನ್ ಮಠ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಕೊತ್ತಲ ಬಸವೇಶ್ವರ ಸಮಿತಿಯವತಿಯಿಂದ ೨೨ ರಿಂದ ಪ್ರಾರಂಭವಾದ ಕಲ್ಯಾಣ ರಥವನ್ನು ಮುಂದಿನ ತಿಂಗಳು ೧೧ನೇ ತಾರೀಖಿನವರೆಗೂ ಎಲ್ಲಾ ತಾಲೂಕುಗಳಿಗೂ ಹೋಗಿ ಜಾಗೃತಿಯನ್ನು ಮೂಡಿಸುವಂತಹ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯವಾದದ್ದು ಎಂದರು.
ಇಂತಹ ಕಾರ್ಯಗಳು ನಿರಂತರವಾಗಿರಲಿ ಎಂದು ಆಶೀರ್ವಚನವನ್ನು ಮಾಡಿದರು. ಕಲ್ಯಾಣ ರಥದ ನೇತೃತ್ವವನ್ನು ವಹಿಸಿಕೊಂಡಿರುವ ಸದಾಶಿವ ಸ್ವಾಮಿಗಳು ಮಾತನಾಡುತ್ತಾ ಇಡೀ ಕಾರ್ಯಕ್ರಮದ ಸ್ವರೂಪ ಭಾರತೀಯ ಸಂಸ್ಕೃತಿಯ ಸ್ವರೂಪದ ವಿರಾಟ ದರ್ಶನ, ೧೯೭೪ ರಿಂದ ಇಲ್ಲಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಅಭಿವೃದ್ಧಿಯನ್ನು ಮಾಡಲಾಗುತ್ತಾ ಬಂದಿದೆ ಎಂದು ಹೇಳಿದರು.
ಹಿರಿಯ ನ್ಯಾಯವಾದಿಗಳು ಮತ್ತು ವಿಕಾಸ ಅಕಾಡೆಮಿಯ ವಿಭಾಗ್ಯ ಸಂಚಾಲಕರಾದ ಎನ್ ಶಂಕ್ರಪ್ಪ ಅವರು ಮಾತನಾಡಿ, ಬಸವರಾಜ್ ಪಾಟೀಲ್ ಸೇಡಂ ಅವರು ಕಾಯಕಲ್ಪ ಮಾಡುತ್ತಿದ್ದಾರೆ. ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿಸಿದವರು ಬಸವರಾಜ ಪಾಟೀಲ್ ಸೇಡಂ ಅವರ ಪಾತ್ರ ಅನನ್ಯವಾದುದು ಎಂದು ನುಡಿದರು. ಕಾರ್ಯಕ್ರಮದ ಪ್ರಸ್ತಾವಿಕ ಮಾತನಾಡಿದ ಡಾ. ಶರಣಬಸವ ಪಾಟಿಲ್ ಜೋಳದ ಹೆಡಿಗೆ ಅವರು ಕಲ್ಯಾಣ ರಥ ನಮ್ಮ ರಾಯಚೂರಿಗೆ ಬಂದಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ, ಇದರಲ್ಲಿ ಭಾಗವಹಿಸಿದ್ದು ನಮ್ಮ ಭಾಗ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ನಂದಾಪುರ ಶ್ರೀನಿವಾಸ್, ರವೀಂದ್ರ, ಚೆನ್ನಪ್ಪ ಬೂದ್ನಾಳ್, ಶಿವಕುಮಾರ್, ರಾಜಶೇಖರ್ ಎಂ ಜಿ ಮಾರುತಿ, ಹಾಗೂ ಹಲವಾರು ಭಕ್ತಾದಿಗಳು ಇದ್ದರು.