ವಿಜೃಂಭಣೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
ಚನ್ನಮ್ಮನ ಕಿತ್ತೂರು,ಆ.28:28 ಪಟ್ಟಣದ ಸೋಮವಾರ ಪೇಟೆಯ ನಾಮದೇವ ಸಿಂಪಿ ಸಮಾಜದ ಹರಿ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭಜನೆ ಕೀರ್ತನ ತಾಳ ಮೃಂಗದ ನಾದದೊಂದಿಗೆ. ರಾಜು ಕುಂಬಾರ್ ಖಾನಾಪುರ ಇವರಿಂದ ಕೀರ್ತನೆ ನೆರವೇರಿತು.
ನಂತರ ಮಹಿಳೆಯರು ಶ್ರೀ ಕೃಷ್ಣನ ತೊಟ್ಟಿಲ ತೂಗುವುದರ ಮೂಲಕ ವಿಜ್ರಂಭಣೆಯಿಂದ ಶ್ರೀ ಕೃಷ್ಣನ್ನು ಪಲ್ಲಕ್ಕಿಯಲ್ಲಿ ಇಟ್ಟು ಭಜನೆ ತಾಳ ಮೃಂಗದ ನಾದದೊಂದಿಗೆ ಪಟ್ಟಣದ ಬೆಲ್ಲದ, ನೇಕಾರ, ಕುಂಬಾರ ಓಣಿಗಳ ಹಾಗೂ ಪಟ್ಟಣ ಪಂಚಾಯತ ರಸ್ತೆಯ ಮೂಲಕ ಹರಿ ಮಂದಿರಕ್ಕೆ ಮೆವರಿಣಿಗೆ ಆಗಮಿಸಿತು. ಅಣ್ಣ ಪ್ರಸಾದದ ಕಾರ್ಯಕ್ರಮ ನೆರವೇರಿತು.
ಶ್ರೀ ನಾಮದೇವ್ ಸಿಂಪಿ ಸಮಾಜದ ಅಧ್ಯಕ್ಷ .ಉಪಾಧ್ಯಕ್ಷ .ಸರ್ವ ಸದಸ್ಯರು ಹಾಗೂ ಸಮಾಜ ಬಾಂಧವರು, ಸಾರ್ವಜನಿಕರಿದ್ದರು.