ಜಿಲ್ಲಾ ವೀರಶೈವ ಲಿಂಗಾಯತ ಸಮಾಜ: ಸ್ಪರ್ದಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ನಾಳೆ ಚಾಲನೆ
ಕಲಬುರಗಿ,ಆ.೨೮- ಸಮಾಜದ ಅರ್ವತೋಮುಖ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ ಹೀಗಾಗಿ ಕಲಬುರಗಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜವು ಈ ಬಾರಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಪ್ರತಿಭಾನ್ವಿತರಿಗೆ ವೇದಿಕೆಯಾಗಿ ಹಾಗೂ ಅವರು, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಡುವ ಮಹತ್ತರವಾದ ಹೆಜ್ಜೆಯನ್ನು ಇಡಲು ಸಮಾಜ ಮುಂದಾಗಿದೆ.
ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ನೂತನವಾಗಿ ನಗರದ ರಿಂಗ್ ರೋಡ ಮುಖ್ಯ ರಸ್ತೆಯಲ್ಲಿರುವ ಜಾಗೃತಿ ಕಾಲೋನಿಯ ಪ್ರೌಢ ದೇವರಾಯ ಪಿ.ಯು. ಕಾಲೇಜಿನ ನಾಲ್ಕನೇ ಮಹಡಿಯಲ್ಲಿ “ಅಲ್ಲಮಪ್ರಭು ಸ್ಪರ್ದಾತ್ಮಕ ಪರೀಕ್ಷಾ ತರಬೇತಿ ಕೇಂದ್ರ” ಪ್ರಾರಂಭಿಸಲಾಗಿದ್ದು, ಇದರ ಉದ್ಘಾಟನೆ ನಾಳೆ ದಿನಾಂಕ : ೨೯-೦೮-೨೦೨೪ ರಂದು ಬೆಳಿಗ್ಗೆ : ೧೦-೦೦ ಗಂಟೆಗೆ ನಡೆಯಲಿದೆ.
ನಾಳಿನ ಭವಿಷ್ಯದೆಡೆ ನಮ್ಮ ನಡೆ ಎಂಬ ಘೋಷವ್ಯಾಕ್ಯದಡಿ ಇಲ್ಲಿನ ಮೂರು ಕೋಣೆಗಳ ಐತಿಹಾಸಿಕ ತರಬೇತಿ ಕೇಂದ್ರದ ಉದ್ಘಾಟನೆ ಹಾಗೂ ಶ್ರಾವಣ ಮಾಸದ ಪವಿತ್ರ ಪೂಜಾ ಸಮಾರಂಭ ನಾಳೆ ನೆರವೇರಲಿದೆ ಎಂದು ಶರಣಬಸವೇಶ್ವರ ವಿದ್ಯಾವರ್ದಕ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ದೇಶಮುಖ ಮತ್ತು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷರಾದ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಳೆಯ ಈ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ಹಿರಿಯರು ಸಹೋದರ ಸಹೋದರಿಯರು ಭಾಗವಹಿಸುವಂತೆ ಮನವಿ ಮಡಿದರು.
ದೆÃಶದಲ್ಲಿ ಕಾಡುತ್ತಿರುವ ಹಲವಾರು ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆ ಮುಖ್ಯವಾದದ್ದು, ವಿಶ್ವದ ಎಲ್ಲಾ ದೇಶಗಳಿಗಿಂತ ಯುವಶಕ್ತಿ ಹೊಂದಿರುವ ಏಕೈಕ ದೇಶ ಭಾರತ. ಎಲ್ಲಾ ಯುವಕರು ಬದುಕು ಕಂಡಕೊಳ್ಳಲು ದಾರಿಹುಡುಕುತ್ತಿದ್ದಾರೆ. ನಾವು ಈಗ ಸ್ಪರ್ದಾತ್ಮಕ ಯುಗದಲ್ಲಿದ್ದೇವೆ ಹೀಗಾಗಿ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವುದು ನಮ್ಮ ಉದ್ಧೇಶವಾಗಿದೆ ಎಂದರು.
ಈ ತರಬೇತಿ ಕೇಂದ್ರದಲ್ಲಿ ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ನಡೆಸುವ ಶ್ರೇಣಿ ೧ ಮತ್ತು ಶ್ರೇಣಿ ೨ ಪರಿಕ್ಷೇಯ ತರಬೇತಿ, ಸಾಮಾನ್ಯ ಜ್ಞಾನ, ಸಾಮಾನ್ಯ ಇಂಗ್ಲೀಷ್, ಸಾಮಾನ್ಯ ಕನ್ನಡ, ಕನ್ನಡ ವ್ಯಾಕರಣ, ತಾರ್ಕಿಕ ಗಣಿತ, ಭೂಗೋಳ ಶಾಸ್ತ್ರ, ಸಮಾಜ ಶಾಸ್ತ್ರ, ರಾಜಕಿಯ ಶಾಸ್ತ್ರ, ಅರ್ಥ ಶಾಸ್ತ್ರ, ಮಾನವ ಶಾಸ್ತ್ರ ಕುರಿತಂತೆ ವಿಧ್ಯಾರ್ಥಿ/ ವಿಧ್ಯಾರ್ಥಿನಿಯರನ್ನು ಪರಿಕ್ಷೆಗಾಗಿ ಸನ್ನದ್ದ ಗೋಳಿಸುವುದು ಇದರ ಉದ್ದೇಶವಾಗಿದೆ.ನಾವು ಈಗ ಆರಂಭಿಸುತ್ತಿರುವ |ಅಲ್ಲಮ ಪ್ರಭು ಪರಿಕ್ಷಾ ತರಬೇತಿ ಕೇಂದ್ರದ ಮುಖ್ಯ ಗುರಿ ಶೈಕ್ಷಣಿಕ ಕ್ರಾಂತಿಯ ಭಾಗವಾಗಿದೆ.
ವಿಶೇಷವಾಗಿ ಈ ಭಾಗದಲ್ಲಿ ಉನ್ನತ ಅಂಕಗಳನ್ನು ಪಡೆದಂತಹ ೩೦ ವಿಧ್ಯಾರ್ಥಿನಿಯರಿಗಾಗಿ ಊಟ, ವಸತಿ ಹಾಗೂ ಓದಲು ಲೈಬ್ರರಿ ಫೀ ಸೇರಿದಂತೆ ಬರೀ ತಿಂಗಳಿಗೆ ರೂ. ೨೫೦೦/- ಮಾತ್ರ ನಿಗದಿ ಮಾಡಲಾಗಿದೆ ಇದರ ಲಾಭ ಕಲ್ಯಾಣ ಕರ್ನಾಟಕದ ವಿಧ್ಯಾರ್ಥಿನಿಯರು ಪಡೆದುಕೊಳ್ಳಬೇಕೆಂದು ಅವರು ಕೋರಿದ್ದಾರೆ. ಒಂದು ಬ್ಯಾಚಿನಲ್ಲಿ ಒಟ್ಟು ೮೦ ವಿಧ್ಯಾರ್ಥಿಗಳು ಸೇರಲು ಅವಕಾಶವಿರುತ್ತದೆ.
ಸಮಾಜದ ಹಿರಿಯರಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ಎಂ.ಎನ್.ಪಾಟೀಲ, ಡಾ.ಕೆ.ಎಸ್.ಪಾಟೀಲ, ಡಾ.ಟಿ.ಗುರುಬಸಪ್ಪ, ಡಾ.ಶ್ರೀಶೈಲ ಗೂಳಿ, ಯೋಗೇಶ ಎಂಬಿ, ಸಂಜೀವ ಕುಮಾರ ತಿರಲಾಪುರ, ಎಂಎನ್ ಪಾಟೀಲ ಸೇರಿದಂತೆ ಜಿಲ್ಲಾ ವೀರಶೈವ ಸಮಾಜ ಟ್ರಸ್ಟ್ ಪ್ರಮುಖರು ಪಾಲ್ಗೊಂಡಿದ್ದರು.