ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್‌ಗೆ ಅಭಿನಂದನೆ
ಬೆಂಗಳೂರು,ಆ೨೮:ನೂತನವಾಗಿ ಆಯ್ಕೆಯಾದ ಕರ್ನಾಟಕ ರಾಜ್ಯ ಪೋಟೊಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅವರನ್ನು ಅಸೋಸಿಯೇಷನ್ ಪದಾಧಿಕಾರಿಗಳು ಅಭಿನಂದಿಸಿದರು.
ಕರ್ನಾಟಕ ರಾಜ್ಯ ಪೋಟೊಜರ್ನಲಿಸ್ಟ್ ಅಸೋಸಿಯೇಷನ್ ರಾಜ್ಯಧ್ಯಕ್ಷ ನಂದನಗೌಡ, ಗೌರವ ಅಧ್ಯಕ್ಷ ಎಸ್. ವಿಶ್ವೇಶ್ವರಪ್ಪ, ಉಪಾಧ್ಯಕ್ಷರುಗಳಾದ ಅರುಣ ಕುಮಾರ ಕುಲಕರ್ಣಿ ಮತ್ತು ಸಂಗಮೇಶ ಬಡಿಗೇರ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ, ಕಾರ್ಯದರ್ಶಿ ಸುರೇಶ್, ಸಂಘಟನಾ ಕಾರ್ಯದರ್ಶಿ ಸತೀಶ್ ಮುರಾಳ, ಖಜಾಂಚಿ ಸಂತೋಷ ಸಾಗರ, ಸದಸ್ಯರುಗಳಾದ ಪಿಕೆ.ಬಡಿಗೇರ, ಮಂಜುನಾಥ ಎನ್., ರಾಜು ರಿತ್ತಿ, ಲಕ್ಷ್ಮಿ ನಾರಾಯಣ್ ಯಾದವ, ಕಿರಣ ಬಾಕಳೆ, ರವಿಕುಮಾರ್ ಉಪಸ್ಥಿತರಿದ್ದರು.