ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಕ್ಕೆ ಮನವಿ
ಬೆಂಗಳೂರು.ಆ೨೮:ಅರಕೇರಾ ತಾಲ್ಲೂಕಿನ ದೊಡ್ಡ ಗ್ರಾಮವಾಗಿರುವ ಆಲ್ಕೋಡ ಗ್ರಾಮಕ್ಕೆಮಂಜೂರಾದ ಪ್ರಾಥಮಿಕ ಆರೋಗ್ಯ ಕೇಂದ್ರ ಶೀಘ್ರವಾಗಿ ಆರಂಭಿಸಬೇಕುಎಂದು ಗ್ರಾಮ ಪಂಚಾಯತ ಅಧ್ಯಕ್ಷರಾದ ಮಹೇಶನಾಯಕ ಜಿಲ್ಲಾ ಆರೋಗ್ಯ ಕುಟಂಬ ಕಲ್ಯಾಣಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಆಲ್ಕೋಡ ಉಪಕೇಂದ್ರ ಗಲಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆಸೇರ್ಪಡೆಮಾಡಿರುವುದು ಇದು ಅವೈಜ್ಞಾನಿಕವಾಗಿದೆ. ಗಲಗ ಪ್ರಾಥಮಿಕಆರೋಗ್ಯ ಕೇಂದ್ರಕ್ಕೆ ೬೦-೭೦ ಸಾವಿರ ಜನಸಂಖ್ಯೆ ಹೊಂದಿದ್ದು ಇಷ್ಟು ಜನಸಂಖ್ಯೆಯಲ್ಲಿ ಆರೋಗ್ಯ ಸೇವೆಗಳನ್ನು ಕೊಡುವುದು ಹೇಗೆ ಸಾಧ್ಯವಾಗುತ್ತದೆ.ಸರಕಾರ ನಿಯಮದ ಪ್ರಕಾರ ೧೦ ಸಾವಿರಕ್ಕೊಂದು ಪ್ರಾಥಮಿಕ ಆರೋಗ್ಯಕೇಂದ್ರ ಇರಬೇಕು ಎಂಬ ನಿಯಮವಿದೆ ೫ಸಾವಿರಕ್ಕೊಂದು ಉಪಕೇಂದ್ರಇರಬೇಕು ಎಂದು ನಿಯಮವಿದೆ. ಈ ಭಾಗದ ಹಿಂದುಳಿದ ಬಡ ಜನತೆ ಇದ್ದಾರೆ ಏನಾದರೂ ಆರೋಗ್ಯ ಸಮಸ್ಯೆ ಆದರೆ ೧೫ರಿಂದ ೨೦ ಕಿ.ಮೀ ದೂರ ಇರುವಅರಕೇರಾ ಗಲಗ ಆಸ್ಪತ್ರೆಗೆ ಹೋಗಬೇಕಾಗುತ್ತದೆ ಯಾವುದೇ ವಾಹನ ಸೌಲಭ್ಯಗಳು ಕೂಡಾ ಇರುವುದಿಲ್ಲ ಇದರಿಂದ ಅನೇಕ ಬಡ ಜನರಿಗೆ ತುಂಬಾತೊಂದರೆ ಅನುಭವಿಸುತ್ತಿದ್ದು ಜನರ ಪ್ರಾಣವನ್ನೆ ಕಲೆದುಕೊಂಡಿದ್ದಾರೆ.
ಈ ಭಾಗದಲ್ಲಿ ಅನೇಕ ಸಾಂಕ್ರಾಮಿಕ ರೋಗಗಳಿಂಮದ ಬಳಲುತ್ತಿದ್ದಕಾಲರ,ಮಲೇರಿಯಾ,ಜಿಕನ್ ಗುನ್ಯಾ ಡೆಂಗ್ಯೂ ಪ್ರಕರಗಳು ಜಾಸ್ತಿ ಕಂಡುಬರುವ ಪ್ರಯುಕ್ತ ಈ ಜನರಿಗೆ ಆರೋಗ್ಯ ಸೇವೆಯನ್ನು ನೀಡುವದುಕಷ್ಟಸಾದ್ಯ ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ ಹಾಗೂ ಗರ್ಭಿಣಿತಾಯಿಂದರಿಗೂ ತುಂಬಾ ತೊಂದರೆ ಅನುಭವಿಸಿಸುತ್ತಿದ್ದಾರೆ,ಈಭಾಗದಲ್ಲಿ ಆಲ್ಕೋಡ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಸರಕಾರದಿಂದ ಅನುಮತಿ ಮಂಜುರಾತಿ ಸಿಕ್ಕಿರುವದರಿಂದ ಕೂಡಲೇ ಸಾರ್ವಜನಿಕರಆರೋಗ್ಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಸರಕಾರಿ ಆರ್ಯವೇದ ಆಸ್ಪತ್ರೆಯಲ್ಲಿಸಾಕಷ್ಟು ಸ್ಥಳ ಅವಕಾಶ ಇರುವ ಪ್ರಯುಕ್ತ ಯಾವುದೇ ಸರ್ವೆ ಅದು ಇದುನೆಪವನ್ನು ಹೇಳದೆ ಕೆಲವು ಸಿಬ್ಬಂದಿಗಳನ್ನು ವೈದ್ಯರುಗಳನ್ನು ನಿಯೋಜಿಸಿಜನರ ಭಾವನೆಗಳಿಗೆ ಸ್ಪಂದಿಸಿ ಕೂಡಲೇ ತಾತ್ಕಾಲಿಕವಾಗಿ ಒಂದು ತಿಂಗಳ ಒಳಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ಈ ಮೂಲಕ ಮನವಿಮಾಡಿದ್ದಾರೆ.