ಉತ್ತಮ ಆಹಾರ, ಉತ್ತಮ ಆರೋಗ್ಯ. ಉತ್ತಮ ಆಹಾರ ಜ್ಞಾಪಕ ಶಕ್ತಿ ಹೆಚ್ಚಳ- ಅನುರಾಧ.
ಸಿರವಾರ.ಆ೨೭- ಪಟ್ಟಣದ ಶಾಂತಿನಿಕೇತನ ಶಾಲೆಯಲ್ಲಿ ೫ ನೇ ತರಗತಿಯ ವಿದ್ಯಾರ್ಥಿಗಳು ಉತ್ತಮ ಆಹಾರ ಉತ್ತಮ ಆರೋಗ್ಯ ಎಂಬ ಶೀರ್ಷಿಕೆಯಡಿಯಲ್ಲಿ ಆರೋಗ್ಯಕರ ಬೆಂಕಿಯಿಲ್ಲದ ಆಹಾರ ಪಾಕ ತಯಾರಿಕೆ ವಿಧಾನಗಳು ಮತ್ತು ಹಣ್ಣಿನ ರಸವನ್ನು ಮಹೇಶ್ ಅರಕೇರಿ ಅವರ ಮಾರ್ಗದರ್ಶನದಲ್ಲಿ ತಯಾರಿಸಿದರು. ಶಾಲೆಯ ಪ್ರಾಂಶುಪಾಲೆ ಅನುರಾಧ ಮಾತನಾಡಿ ಮಕ್ಕಳು ಹೊರಗಿನ ಅನಾರೋಗ್ಯಯುತ ಆಹಾರ ಪದಾರ್ಥಗಳನ್ನು ಬಿಟ್ಟು ಉತ್ತಮ ಆಹಾರ ಸೇವಿಸಿ ಉತ್ತಮ ಆರೋಗ್ಯ ಪಡೆಯಬೇಕು ಎಂದು ತಿಳಿ ಸಿದರು. ಮು.ಗು ಬಾಬು ಹಾಗೂ ಎಲ್ಲಾ ಶಿಕ್ಷಕರು ಆಹಾರ ಪದಾರ್ಥಗಳ ರುಚಿ ನೋಡಿ ಮಕ್ಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು