ಸೂರ್ಯಕಾಂತಿ ಖರೀದಿ ಕೇಂದ್ರ.ಸದ್ಬಳಕೆಗೆ ಡಿಸಿ ಸಲಹೆ
ರಾಯಚೂರು,ಆ.೨೮: ಜಿಲ್ಲೆಯಲ್ಲಿ ೨೦೨೪-೨೫ನೇಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿಎಫ್.ಎ.ಕ್ಯೂ. ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈಸೌಲಭ್ಯವನ್ನು ರೈತರು ಸದುಪ್ರಯೋಗಪಡೆದುಕೊಳ್ಳಬೇಕೆಂದು ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ ಕೆ.ಅವರು ತಿಳಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಸೂರ್ಯಕಾಂತಿಉತ್ಪನ್ನವನ್ನು ಪ್ರತಿ ಎಕರಿಗೆ ೩ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದಗರಿಷ್ಠ ೧೫ ಕ್ವಿಂಟಾಲ್ ಎಫ್.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್‌ಗೆರೂ.೭,೨೮೦ರಂತೆ ಬೆಂಬಲ ಯೋಜನೆಯಡಿಯಲ್ಲಿಖರೀದಿಸಲಾಗುವುದು. ಇದೇ ೨೦೨೪ರ ಆ.೨೪ರಿಂದ ರೈತರ ನೊಂದಣಿ ಕಾಲಾವಧಿಯನ್ನು ೪೫ ದಿನಗಳವರೆಗೆ ಹಾಗೂ ಖರೀದಿಅವಧಿಯನ್ನು ೯೦ ದಿನಗಳವರೆಗೆ ನಿಗಧಿಪಡಿಸಲಾಗಿದೆ.
ರೈತರಿಂದ ಸೂರ್ಯಕಾಂತಿಯನ್ನು ರಾಯಚೂರು ತಾಲೂಕಿನಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಹುಣಸಿಹಾಳಹುಡಾ, ಖರೀದಿಕೇಂದ್ರ ಕಾರ್ಯದರ್ಶಿ ಷಣ್ಮುಖ.ಜಿ ಮೊಬೈಲ್ ನಂಬರ್; ೯೭೪೩೬೯೫೪೬೭,ದೇವದುರ್ಗ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಜಾಲಹಳ್ಳಿ ಖರೀದಿ ಕೇಂದ್ರ ಕಾರ್ಯದರ್ಶಿ ನರಸಿಂಗ ನಾಯಕಮೊಬೈಲ್ ನಂಬರ್; ೭೮೯೯೩೧೨೯೮೯, ಲಿಂಗಸುಗೂರು ತಾಲೂಕಿನ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘ ಮಟ್ಟೂರು ಖರೀದಿ ಕೇಂದ್ರಕಾರ್ಯದರ್ಶಿ ವೀರೇಶ ದೇಸಾಯಿ ಮೊಬೈಲ್ ನಂಬರ್;೯೧೧೩೬೪೯೮೩೬,ಸಿಂಧನೂರು ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಸಂಘ ಜವಳಗೇರಾ ಖರೀದಿ ಕೇಂದ್ರ ಕಾರ್ಯದರ್ಶಿ ದೇವರಾಜಮೊಬೈಲ್ ನಂಬರ್; ೯೯೬೪೧೬೫೫೦೯ ಹಾಗೂ ಎಣ್ಣೆ ಬೀಜ ಬೆಳೆಗಾರರಸಹಕಾರ ಸಂಘ ಹುಡಾ ಖರೀದಿ ಕೇಂದ್ರ ಕಾರ್ಯದರ್ಶಿಚನ್ನನಗೌಡ ಮೊಬೈಲ್ ನಂಬರ್;೯೯೬೪೩೧೫೮೬೮, ಮಾನವಿ ತಾಲೂಕಿನಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ತೋರಣದಿನ್ನಿ ಖರೀದಿಕೇಂದ್ರ ಕಾರ್ಯದರ್ಶಿ ಬಸಯ್ಯ .ಟಿ ಮೊಬೈಲ್ ನಂಬರ್; ೯೯೦೨೩೮೭೩೧೬,ಸಿರವಾರ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಸಿರವಾರ ಖರೀದಿ ಕೇಂದ್ರ ಕಾರ್ಯದರ್ಶಿ ನಿಂಬಯ್ಯ ಸ್ವಾಮಿ ಮೊಬೈಲ್‌ನಂಬರ್; ೯೮೮೦೮೯೧೯೧೯ಗಳಲ್ಲಿ ಖರಿದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರ ಬಾಂಧವರು ಫ್ರೂಟ್ಸ್‌ಐ.ಡಿಯೊಂದಿಗೆ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿನೊಂದಾಯಿಸಿ ಸೂರ್ಯಕಾಂತಿ ಮಾರಾಟ ಮಾಡಿ ಸರ್ಕಾರದ ಯೋಜನೆಯ ಸದುಪಯೋಗ ಪರಿಡಿಸಕೊಳ್ಳಲು ಜಿಲ್ಲೆಯರೈತ ಬಾಂಧವರಲ್ಲಿ ಕೋರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.