ವಿವಿಧ ಯೋಜನೆಗಳ ಪ್ರಗತಿಗೆ ಅಧಿಕಾರಿಗಳಿಗೆ ಡಿಸಿ ಸೂಚನೆ
ರಾಯಚೂರು,ಆ.೨೮ ಜಿಲ್ಲೆಯ ಮಕ್ಕಳಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನುಜಾರಿಗೆ ತರಲಾಗಿದ್ದು, ಈ ಯೋಜನೆಗಳ ಪ್ರಗತಿ ಸಾಧಿಸಲುಸಂಬಂಧಿಸಿದ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆಸೂಚನೆ ನೀಡಿದರು.ಅವರು ನಗರದಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದಹಮ್ಮಿಕೊಳ್ಳಲಾದ ಕಾರ್ಯಕ್ರಮಗಳು ಹಾಗೂಯೋಜನೆಗಳನ್ನು ಅನು?ನಗೊಳಿಸಲು ಸಂಬಂಧಪಟ್ಟಅಧಿಕಾರಿಗಳು, ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರುಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಯಾವುದೇಯೋಜನೆಯನ್ನು ಅನು?ನಗೊಳಿಸಲು ಇಚ್ಛಾಶಕ್ತಿಅತ್ಯವಶ್ಯಕವಾಗಿದ್ದು, ಇಚ್ಚಾಶಕ್ತಿಯಿಂದ ಕಾರ್ಯನಿರ್ವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆನಿರ್ದೇಶನ ನೀಡಿದರು.
ಇಲಾಖೆಯ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಹಾಗೂ ಅಂಗನವಾಡಿಕಾರ್ಯಕರ್ತೆಯರು ಇಲಾಖೆಯ ಯೋಜನೆಗಳನ್ನುಅನು?ನಗೊಳಿಸಲು ಹಾಗೂ ಕಾರ್ಯಕ್ರಮಗಳಲ್ಲಿತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮರ್ಪಣಾಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಉತ್ತಮ ಫಲಿತಾಂಶದೊರೆಯುತ್ತದೆ ಆ ನಿಟ್ಟಿನಲಿ ಕಾರ್ಯನಿರ್ವಹಿಸಬೇಕು ಎಂದುಹೇಳಿದರು.ಜಿಲ್ಲೆಯಲ್ಲಿ ಒಟ್ಟು ೨೮೫೬ ಅಂಗನವಾಡಿ ಕೇಂದ್ರಗಳು, ೩೨ ಮಿನಿಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ ೨೦೨೪-೨೫ನೇ ಸಾಲಿನಜುಲೈ ಅಂತ್ಯಕ್ಕೆ ೨,೨೪,೬೩೦ ಫಲಾನುಭವಿಗಳು ಸಮಗ್ರ ಶಿಶುಅಭಿವೃದ್ಧಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.
ಅಂಗನವಾಡಿ ಕೇಂದ್ರಗಳ ಮೂಲಕ ಪೂರಕ ಪೌಷ್ಟಿಕ ಆಹಾರವಿತರಣೆ ಕಾರ್ಯಕ್ರಮ, ಚುಚ್ಚುಮದ್ದು ಕಾರ್ಯಕ್ರಮ,ಆರೋಗ್ಯ ತಪಾಸಣೆ, ತಾಯಂದಿರಿಗೆ ಆರೋಗ್ಯ ಮತ್ತು ಪೌಷ್ಟಿಕಶಿಕ್ಷಣ, ಶಾಲಾ ಪೂರ್ವ ಶಿಕ್ಷಣ ಹಾಗೂ ಮಾಹಿತಿ ಸೇವೆಯನ್ನುಇಲಾಖೆಯಿಂದ ಒದಗಿಸಲಾಗುತ್ತಿದ್ದು, ಈ ಸೇವೆಗಳನ್ನುಒದಗಿಸಲು ಹೆಚ್ಚಿನ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.ಈ ವೇಳೆ ಕೌಂಟಬಿಕ ದೌರ್ಜನ್ಯ ಯೋಜನೆ, ಬಾಲಕಿಯರ ವಸತಿ ಯೋಜನೆ, ಸಖಿ ಓನ್ ಸ್ಟಾಪ್ ಸೆಂಟರ್, ಒನ್ ಸ್ಟಾಪ್ ಸೆಂಟರ್, ಸ್ವಧಾರಕೇಂದ್ರ, ಸ್ವಧಾರ ಯೋಜನೆ, ೨೦೨೪ರ ಎಪ್ರೀಲ್ ರಿಂದ ಜೂನ್ ರಬಾಲ್ಯವಿವಾಹ ಅನುಸರಣಾ ಮಾಹಿತಿ, ಉದ್ಯೋಗ್ಯಸ್ಥ ಮಹಿಳೆಯರ ವಸತಿ ನಿಲಯದ ವಿವರ, ಮಿಷನ್ ಶಕ್ತಿ ಯೋಜನೆ ಸಭಾಕಾರ್ಯಸೂಚಿ, ಜಿಲ್ಲಾ ಮಹಿಳಾ ಸಬಲೀಕರಣ ಘಟಕದಿಂದನಡೆಯುತ್ತಿರುವ ಕಾರ್ಯಕ್ರಮಗಳು, ೨೦೨೩-೨೪ನೇ ಸಾಲಿನ ಚೇತನ, ಧನಶ್ರೀ, ಉದ್ಯೋಗಿನಿ ಯೋಜನೆಯಫಲಾನುಭವಿಗಳ ಆಯ್ಕೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಬಾಲ್ಯವಿವಾಹ ತಡೆಗೆ ಜಾಗೃತಿ ಮೂಡಿಸಿ: ಜಿಲ್ಲೆಯ ಗ್ರಾಮೀಣಭಾಗದಲ್ಲಿ ಬಾಲ್ಯ ವಿವಾಹ ತಡೆಗೆ ಸಾರ್ವಜನಿಕರಲ್ಲಿ ಹೆಚ್ಚಿನ ಮಟ್ಟದಅರಿವು ಮೂಡಸಲು ಜಾಗೃತಿ ಕಾರ್ಯಕ್ರಮಗಳ ಮೂಲಕಬಾಲ್ಯ ವಿವಾಹಕ್ಕೆ ತಡೆ ನೀಡಬೇಕು. ಅಲ್ಲದೆ ಜಿಲ್ಲೆಯ ಪ್ರತಿ ಗ್ರಾಮಮಟ್ಟದಲ್ಲಿ ಪೊಷಕರ ಒಳಗೊಂಡ ಜಾಗೃತಿ ಸಭೆಗಳುನಡೆಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು. ಪೋಶನ್‌ಅಭಿಯಾನ ಯೋಜನೆ ಟ್ರ್ಯಾಕ್ ನಲ್ಲಿ ಮಾಹಿತಿ ಅಳವಡಿಕೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಪಡಿಸಿ ಪ್ರಗತಿಯನ್ನುಸಾಧಿಸಬೇಕೆಂದರು.
ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶರುಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿಗಳಾದ ಹೆಚ್.ಎ.ಸಾತ್ವಿಕ್, ಹೆಚ್ಚುವರಿ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಹರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಉಪ ನಿರ್ದೇಶಕರಾದ ನವೀನ್ ಕುಮಾರ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಡಾ.ಸುರೇಂದ್ರ ಬಾಬು, ಜಿಲ್ಲಾ ಕೈಗಾರಿಕಾರಿ ಅಧಿಕಾರಿ ಬಸವರಾಜ, ಜಿಲ್ಲಾಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳರಕ್ಷಣಾಧಿಕಾರಿಗಳಾದ ಮುದುಕಪ್ಪ ಸೇರಿದಂತೆ ವಿವಿಧಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಎಲ್ಲ ತಾಲೂಕಿನ ಮಹಿಳಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಹಾಗೂ ವಿವಿಧಯೋಜನೆಗಳ ಫಲಾನುಭವಿಗಳ ಇದ್ದರು.