ನಾಳೆ ಮಾನವಿ ಪುರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ,ಆ೨೮: ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಪುರಸಭೆ ಕಾರ್ಯಾಲಯದಲ್ಲಿ ನಾಳೆ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ.ಸರ್ಕಾರದ ಆದೇಶದಂತೆ ಅಧ್ಯಕ್ಷರ ಸ್ಥಾನಕ್ಕೆ ಹಿಂದುಳಿದ ವರ್ಗ ಮಹಿಳೆ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿಯನ್ನು ಸರಕಾರ ಆದೇಶ ನೀಡಿ ಚುನಾವಣಾಧಿಕಾರಿಯನ್ನಾಗಿ ತಾಲೂಕಿನ ತಾಶೀಲ್ದಾರ್ ರಾಜು ಪಿರಂಗಿ ಅವರನ್ನು ಆಯ್ಕೆ ಮಾಡಿ ಚುನಾವಣೆ ಜರುಗಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಮಾನವಿ ಪುರಸಭೆಯಲ್ಲಿ ೨೭ ವಾರ್ಡ್ ಗಳ ಸದಸ್ಯರಿದ್ದು ಅದರಲ್ಲಿ ಕಾಂಗ್ರೆಸ್ ಪಕ್ಷದ ೧೯ ಸದಸ್ಯರು ಹಾಗೂ
ಜೆಡಿಎಸ್ ಪಕ್ಷದಿಂದ ೦೮ ಸದಸ್ಯರಿದ್ದಾರೆ.
ಇದರಲ್ಲಿ ತಾಲೂಕಿನ ಶಾಸಕರು ಮತ್ತು ಲೋಕಸಭಾ ಸದಸ್ಯರು ತಲಾ ಒಂದು ಮತವನ್ನು ಚಲಾಯಿಸಲು ಅವಕಾಶವಿದೆ ಕಾಂಗ್ರೆಸ್ ಪಕ್ಷ ಸರಳ ಬಹುಮತ ಹೊಂದಿದೆ.
ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ ಹೆಚ್ಚಾಗಿದೆಎನ್ನಲಾಗುತ್ತಿದೆ.
ಹಿಂದುಳಿದ ವರ್ಗದ ಕಾಂಗ್ರೆಸ್ ಪಕ್ಷದ ಸದಸ್ಯರು ಅಧ್ಯಕ್ಷರ ಸ್ಥಾನಕ್ಕೆ ನಾಲ್ಕು ಜನ ಪೈಪೋಟಿ ನಡೆಸಿದ್ದಾರೆ ಎನ್ನಲಾಗಿದೆ.
ವಾರ್ಡ್ ನಂಬರ್ ೧೬ ರ ಲಕ್ಷ್ಮಿ ಗಂಡ ಡಿ. ವಿರೇಶ್, ವಾರ್ಡ್ ನಂಬರ್ ೦೬ ರ ರೇಷ್ಮಾ ಬೇಗಂ, ವಾರ್ಡ್ ನಂಬರ್ ೨೪ ರ ರಶೀದಾ ಬೇಗಂ, ಹಾಗೂ ವಾರ್ಡ್ ನಂಬರ್ ೧೧ ರ ಸೂಫಿಯ ಬೇಗಂ ಪೈಪೋಟಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರೂ ಪೈಪೋಟಿ ನಡೆಸಿದ್ದಾರೆ ಎನ್ನಲಾಗುತ್ತಿ.
ನಾಳೆ ಯಾವ ಅಭ್ಯರ್ಥಿಗಳು ಕಣದಲ್ಲಿ ಇರುತ್ತಾರೆ ಎಂದು ಕಾದು ನೋಡಬೇಕಿದೆ ಯಾವ ಸದಸ್ಯರು ಕೈ ಮೇಲೆ ಯಾರಿಗೆ ಎತ್ತುತ್ತಾರೆ ಅದರಿಂದ ಯಾರು ಗೆಲ್ಲುತ್ತಾರೆ ಎಂದು ನಾಳೆಯವರೆಗೆ ಕಾದು ನೋಡಬೇಕಿದೆ.