ವಕೀಲನ ಮೇಲೆ ಹಲ್ಲೆ ,ನ್ಯಾಯಾಲಯದ ಕಲಾಪಗಳಿಂದ ಹಿಂದೆ ಸರಿದ ವಕೀಲರು
ಸಂಜೆವಾಣಿ ವಾರ್ತೆ.
ಸಿಂಧನೂರು ಆ.೨೮ ತಾಲೂಕಿನ ಯದ್ದಲದೊಡ್ಡಿ ಗ್ರಾಮದ ಮೌನೇಶ ತಂ ದ್ಯಾವಣ್ಣ ವಕೀಲನ ಹಲ್ಲೆ ಮೇಲೆ ನಿನ್ನೆ ಹಲ್ಲೆ ನಡೆದಿದ್ದು ,ಹಲ್ಲೆ ಖಂಡಿಸಿ ತಾಲೂಕು ನ್ಯಾಯವಾದಿಗಳ ಸಂಘದ ತೀರ್ಮಾನ ದಂತೆ ಇಂದು ನ್ಯಾಯಾಲಯದ ಕಲಾಪಗಳಿಂದ ಹಿಂದೆ ಸರಿದು ,ಡಿವಾಯ್‌ಎಸ್ಪಿ ಬಿ.ಎಸ್ ತಳವಾರ ಅವರಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ತಾಲೂಕು ನ್ಯಾಯವಾದಿಗಳ ಸಂಘದ ವತಿ ಮೌಖಿಕ ವಾಗಿ ಮನವಿ ಮಾಡಿದರು.
ಯದ್ದಲದೊಡ್ಡಿ ಗ್ರಾಮದ ಮೌನೇಶ ಎಂದಿನಂತೆ ಸಿಂಧನೂರು ನ್ಯಾಯಾಲಯದಲ್ಲಿ ಅಕ್ಬರ್ ಕಂದಗಲ್ ಹಿರಿಯ ವಕೀಲರ ಬಳಿ ಕರ್ತವ್ಯಕ್ಕೆ ಹಾಜರಾಗಿ ನಂತರ ಸ್ವ ಗ್ರಾಮಕ್ಕೆ ಮರಳಿದಾಗ ಷರೀಪ್ ಸಾಬ ತಂ ಹುಸೇನ್ ಸಾಬ ಹಾಗೂ ಬಂದೇಸಾಬ ತಂ ಹುಸೇನ್ ಸಾಬ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ .ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕ ನ್ಯಾಯವಾದಿಗಳ ಸಂಘದ ವತಿಯಿಂದ ನಗರ ಠಾಣೆಗೆ ಹೋಗಿ ಹಲ್ಲೆಗೊಳಗಾದ ವಕೀಲನಿಗೆ ನ್ಯಾಯ ಕೊಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿದರು.
ತಾಲೂಕು ನ್ಯಾಯವಾದಿಗಳ ಸಂಘದ ಅದ್ಯಕ್ಷ ಎನ್.ರಾಮನಗೌಡ,ಕಾರ್ಯದರ್ಶಿ ಶಿವಕುಮಾರ ಬೈರಿದೊರೆ,ಖಜಾಂಚಿ ಶರಣಬಸವ ಉಮಲೂಟಿ, ಹಿರಿಯರ ವಕೀಲರು ವೀರನಗೌಡ ಕಲಮಂಗಿ,ಜಿ.ಎಸ್.ಆರ್ ಕೆ ರಡ್ಡಿ, ಅಬ್ದುಲ್ ಘನಿಸಾಬ,ಜಿ.ನಾಗರಾಜ,ಸೋಮ ಲಿಂಗಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು