೨ ನೀರಿನ ಟ್ಯಾಂಕರ್ ಉದ್ಘಾಟಿಸಿದ ಶಾಸಕರು
ಸಿರವಾರ.ಆ.೨೮:ಸಾರ್ವಜನಿಕರಿಗೆ ಬೋರ್ ವೇಲ್ ಕೆಟ್ಟಾ ನಿಂತಾಗ ನೀರು ಸರಬರಾಜುನಲ್ಲಿ ವ್ಯತ್ಯಯ ವಾದಗ ಟ್ಯಾಂಕ್ ಮೂಲಕ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಮೂಲಕ ಸಾರ್ವಜನಿಕರ ಬಳಕೆಗೆ ಟ್ಯಾಂಕ್ ಉಪಯೋಗವಾಗಲಿ ಎಂದು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ೨೦೨೪-೨೫ನೇ ಪಟ್ಟಣ ಪಂಚಾಯಿತಿ ಅನುದಾನದಲ್ಲಿ ೩೦ ಲಕ್ಷ ರೂಪಾಯಿ ೨ ನೀರಿನ ಟ್ಯಾಂಕರನ್ನು ಉದ್ಘಾಟಿಸಿ ಮಾತನಾಡಿದ ಅವರು “ಈ ಕಳೆದ ಬೇಸಿಗೆಯಲ್ಲಿ ಅಂತರ್ಜಾಲ ಕುಸಿತದಿಂದಾಗಿ ಕುಡಿಯುವ ನೀರಿನ ಸರಬರಾಜುಗೆ ತೀರಾ ತೊಂದರೆಯಾಗಿತ್ತು. ಇದನ್ನು ಮನಗಂಡು ಪಟ್ಟಣ ಪಂಚಾಯಿತಿಗೆ ೨ ನೂತನ ನೀರಿನ ಟ್ಯಾಂಕರ್ ಖರೀದಿಸಲು ತಿಳಿಸಲಾಗಿತ್ತು ಅದರನ್ವಯ ೨ ಟ್ಯಾಂಕರ್‌ನ್ನು ಖರೀದಿಸಲಾಗಿದ್ದು. ಇಂದಿನಿಂದ ಜನರು ಉಪಯೋಗಕ್ಕೆ ದೊರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರವಿ.ಎಸ್.ಅಂಗಡಿ, ಪ.ಪಂ.ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬ್ರಿಜೇಶ್ ಪಾಟೀಲ್, ಶಿವಶರಣ ಸಾಹುಕಾರ ಅರಿಕೇರಿ,ರಮೇಶ್ ದರ್ಶನಕರ್, ಅಕ್ರಮ ಸಕ್ರಮ ನಾಮನಿರ್ದೇಶನ ಸದಸ್ಯ ರಂಗನಾಥ ನಾಯಕ,
ಉಪ ತಹಸೀಲ್ದಾರ ಸಿದ್ದನಗೌಡ, ಕಂದಾಯ ನಿರೀಕ್ಷಕ ಶ್ರೀನಾಥ,ಚಿನ್ನನ್ ನಾಗರಾಜ ನಾತಾ ಸಜ್ಜನ್,ಯಕ , ಕಿರಿಯ ಆರೋಗ್ಯ ನೀರಿಕ್ಷಧಿಕಾರಿ ಸುನಿ