ವಿದ್ಯಾರ್ಥಿಗಳಿಂದ ಪರಿಸರ ಸ್ನೇಹಿ ಗಣಪ
ಸಿರವಾರ.ಆ೨೮:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ಸ್ಥಳೀಯ ಸಂಸ್ಥೆ,ಮಾನ್ವಿ, ಜಿಲ್ಲಾ ಸಂಸ್ಥೆ ರಾಯಚೂರು ಇವರ ಸಹಕಾರದಲ್ಲಿ ಶಾಂತಿನಿಕೇತನ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಪರಿಸರ ಸ್ನೇಹಿ ಗಣೇಶನನ್ನು ಸಿದ್ದಪಡಿಸಿದರು.ಪ್ರಕೃತಿಯ ಜೊತೆಗೇ ಮನುಷ್ಯ ಬಾಳಬೇಕು,ಪ್ರಕೃತಿಗೆ ಹಾನಿ ಉಂಟು ಮಾಡುವ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಪ್ರಾಂಶುಪಾಲರು ಮತ್ತು ಮಾರ್ಗದರ್ಶಿ ಕ್ಯಾಪ್ಟನ್ ಅನುರಾಧ ಹೇಳಿದರು.