ನೂತನ ರಥ ಉದ್ಘಾಟನೆ
ಸಿರವಾರ.ಆ.೨೭- ತಾಲ್ಲೂಕಿನ ಹರವಿ ಗ್ರಾಮದ ಸುಕ್ಷೇತ್ರವಾದ ಶ್ರೀ ಹರವಿ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ೪ ನೇ ಶ್ರಾವಣ ಅಂಗವಾಗಿ ಶ್ರೀ ಹರವಿ ಬಸವೇಶ್ವರನ ಮಹಾ ಮೂರ್ತಿಗೆ ರುದ್ರ ಅಭಿಷೇಕ ಪೂಜೆ ಎಲೆ ಪೂಜೆ ಸಹಸ್ರ ಬಿಲ್ವಾಚ೯ನೆ,ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ನಂತರ ನೂತನ ತೇರಿನ ರಥೋತ್ಸವ ಮಹಿಳೆಯರು ರಿಂದ ವಿಶೇಷವಾಗಿ ಎಳೆದು ರಥೋತ್ಸವವನ್ನು ಅದ್ದೂರಿಯಾಗಿ ಜರುಗಿತು.. ದೇವಸ್ಥಾನ ಸಮಿತಿ ಅದ್ಯಕ್ಷ ಶಶಿಧರಗೌಡ ಮಾತನಾಡಿ ಪ್ರತಿಯೊಬ್ಬರೂ ಒತ್ತಡ ಜೀವನ ಕಳೆಯುತ್ತಿದ್ದಾರೆ,ಇದರಿಂದ ಮಾನಸಿಕ ಹಾಗೂ ದೈಹಿಕ ರೋಗಿಗಳಿಗೆ,ತುತ್ತಾಗುತ್ತಿದ್ದಾರೆ ಇವುಗಳಿಂದ ಮುಕ್ತಿ ಪಡೆಯಲು ಕನಿಷ್ಠ ಶ್ರಾವಣ ಮಾಸದಲ್ಲಿಯಾದರೂ ನಡೆಯುವ ಪುರಾಣ ಪ್ರವಚನಗಳನ್ನು ಆಲಿಸಿ ಧರ್ಮಚಾರಣಗೈಯಿರಿ ಇದರಿಂದ ಮನಸ್ಸಿಗೆ ಶಾಂತಿ,ಸಮಾಧಾನ ದೊರೆಯುತ್ತೆದೆ ಎಂದರು. ಇದೆ ಸಂದರ್ಭದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಶಶಿಧರಗೌಡ ಮಾಲೀ ಪಾಟೇಲ್,ಎಸ್ ಮಲ್ಲಿಕಾರ್ಜುನ ಗೌಡ,ಎಮ್ ಬಸಪ್ಪ ಗೌಡ,ಟಿ ಶಂಕರಗೌಡ ವಕೀಲ,ಈರಣ್ಣ ಗೌಡ ದಳಪತಿ,ಮುತ್ತಿನ ಬಸಪ್ಪ ಗೌಡ,ತೇರಿನ ರಾಜಶೇಖರ ಗೌಡ,ಮರಿಸಿದಪ್ಪ ಕಾರಮಂಚಿ,ಮುತ್ತಿನ ಶಂಕರ ಗೌಡ,ಕೊಂಕಲ್ ಶರಣಪ್ಪ ಗೌಡ,ರಾಜಶೇಖರಪ್ಪ ಮಾಸ್ಟರ್,ದೂಳ್ಳನಗೌಡ,ಪಂಪಣ್ಣ ತಾತ,ಪ್ರಶಾಂತ ಶಾಸ್ತ್ರಿಗಳು,ಅದಿಬಸವ ಗೌಡ,ಸುರೇಶ್ ಗೌಡ, ಎಮ್ ಮಾರಪ್ಪ ನಾಯಕ,ಗೋಪಾಲ ನಾಯಕ ಹರವಿ,ಪೂಜಾರಿ ಶರಣಬಸವ,ಬಸವರಾಜ ಪೂಜಾರಿ,ಕುಂಬಾರ ಮೌನಪ್ಪ,ಕುಂಬಾರ ಗಂಗಾಧರ,ಬಸವರಾಜ ನಾಯಕ,ಹರವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಾವಿರಾರು ಭಕ್ತರು ಉಪಸ್ಥಿತರಿದ್ದರು