ಮೆಟಲ್ ಡಿಟೆಕ್ಟರ್ನಲ್ಲಿ ಆನೆಗಳ ಪಾದ ಪರಿಶೀಲನೆ
ಸಂಜೆವಾಣಿ ನ್ಯೂಸ್
ಮೈಸೂರು, ಆ.28:- ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ತಾಲೀಮಿನ ವೇಳೆ ಆನೆಗಳ ಪಾದಕ್ಕೆ ಲೋಹದ ಚೂರುಗಳು ಸೇರಿರುವ ಶಂಕೆಯಿಂದಾಗಿ ಆನೆಗಳ ಪಾದವನ್ನು ಮೆಟಲ್ ಡಿಟೆಕ್ಟರ್ ಮೂಲಕ ಪರೀಕ್ಷಿಸಲಾಯಿತು.
ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಮೊದಲ ತಂಡದ 9 ಆನೆಗಳನ್ನು ತೂಕದ ಪರೀಕ್ಷೆ ಮಾಡಿಸಲು ಶನಿವಾರ ಕರೆ ತರುವ ವೇಳೆ ಕಂಜನ್ ಆನೆ ಕುಂಟಲಾರಂಭಿಸಿತ್ತು. ಸ್ಥಳದ¯?ಲÉ? ಪರೀಕ್ಷಿಸಲಾಗಿತ್ತಾದರೂ ಯಾವುದೆ ಮೊಳೆ ಅಥವಾ ಲೋಹದ ಚೂರು ಪತ್ತೆಯಾಗಿರಲಿಲ್ಲ. ಅರಮನೆಗೆ ವಾಪಸ್ ಕರೆದೊಯ್ದ ಬಳಿಕ ಕಂಜನ್ ಆನೆಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗಿ ಅದರ ದುಷ್ಪರಿಣಾಮದಿಂದ ಕುಂಟುತ್ತಿರಬಹುದು ಎಂದು ಶಂಕಿಸಿ, ಭಾನುವಾರ ತಾಲೀಮಿನಿಂದ ವಿಶ್ರಾಂತಿ ನೀಡಲಾಗಿತ್ತು. ಆದರೆ ಇಂದು ಸಂಜೆ ಗಜಪಡೆಯ 9 ಆನೆಗಳಿಗೆ ಪಾದದಲ್ಲಿ ಕಬ್ಬಿಣದ ವಸ್ತುಗಳು ಸೇರಿರುವ ಬಗ್ಗೆ ಪರೀಕ್ಷೆ ನಡೆಸಲಾಯಿತು.
ನಿತ್ಯವೂ ಬೆಳಗ್ಗೆ ಮತ್ತು ಸಂಜೆ ಅರಮನೆ ಆವರಣದಿಂದ ಆಯುರ್ವೇದ ವೃತ್ತ ಇಲ್ಲವೇ ಹೈವೆ ವೃತ್ತದವರೆಗೆ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಸೋಮವಾರ ಮತ್ತು ಮಂಗಳವಾರ ಬೆಳಗ್ಗೆ ಹಾಗೂ ಸಂಜೆ ತಾಲೀಮು ನಡೆಸಲಾಯಿತು. ಬಳಿಕ ಸಂಜೆ ವೇಳೆ ಮೆಟಲ್ ಡಿಟೆಕ್ಟರ್ ಮೂಲಕ ಎಲ್ಲಾ ಆನೆಗಳ ಪಾದ ಪರೀಕ್ಷೆ ಮಾಡಲಾಯಿತು. ಅದೃಷ್ಟವಶಾತ್ ಯಾವುದೇ ಲೋಹದ ವಸ್ತುಗಳು ಈ ಸಂದರ್ಭದಲ್ಲಿ ಪತ್ತೆಯಾಗಿಲ್ಲ.
ಈವರೆಗೆ ತಾಲೀಮು ಹೊರಡುವ ಆನೆಗಳ ಮುಂಭಾಗದಲ್ಲಿ ಲೋಹದ ವಸ್ತುಗಳನ್ನು ಸೆಳೆದುಕೊಳ್ಳುವ ಆಯಸ್ಕಾಂತವಿರುವ ವಾಹನ ತೆರಳುತ್ತಿತ್ತು. ಇದೇ ಮೊದಲ ಬಾರಿಗೆ ಲೋಹದ ವಸ್ತುಗಳನ್ನು ಪತ್ತೆ ಮಾಡುವ ಉಪಕರಣ ಖರೀದಿಸಿ ಅವುಗಳ ಸಹಾಯದಿಂದ ಎ¯?ಲÁ ಆನೆಗಳ ಪಾದದಲ್ಲಿ ಯಾವುದಾದರೂ ಲೋಹ ಸೇರಿದೆಯೇ ಎಂಬುದನ್ನು ಪರೀಕ್ಷಿಸಲಾಯಿತು. ಇನ್ನು ಮುಂದೆ ಪ್ರತಿದಿನ ತಾಲೀಮು ಮುಕ್ತಾಯಗೊಂಡ ಬಳಿಕ ಈ ಪರೀಕ್ಷೆ ನಡೆಸಲು ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ತಿಳಿಸಿದರು.
ಆನೆಗಳ ಪಾದದಲ್ಲಿ ಯಾವುದಾದರೂ ಲೋಹ ಸೇರಿಕೊಂಡರೆ ಅದು ಕ್ರಮೇಣ ದೊಡ್ಡ ಗಾಯವಾಗಿ ನಡೆಯಲು ಸಾಧÀ?ಯವಾಗದ ಸನ್ನಿವೇಶ ಸೃಷ್ಟಿಯಾಗುತ್ತದೆ. ಪತ್ತೆ ಮಾಡದಿದ್ದರೆ ಅದು ತಿಳಿಯುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ಆನೆಗಳು ನೋವಿನಿಂದಲೇ ನಡೆಯುತ್ತಿರುತ್ತವೆ. ಅದನ್ನು ತಪ್ಪಿಸಲು ಈ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಮಂಗಳವಾರ 8 ಕಿ.ಮೀ ವರೆಗೆ ತಾಲೀಮು ನಡೆಸಲಾಯಿತು. ಬುಧÀವಾರದಿಂದ ಎಲ್ಲಾ ಆನೆಗಳಿಗೂ ಪೂರ್ಣಪ್ರಮಾಣದಲ್ಲಿ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುವುದು ಎಂದು ಡಿಸಿಎಫ್ ತಿಳಿಸಿದ್ದಾರೆ.