ವರ್ಷದೊಳಗೆ ಫಲಾನುಭವಿಗಳಿಗೆ ನಿವೇಶನ, ಮನೆ
ಸಂಜೆವಾಣಿ ನ್ಯೂಸ್
ಮೈಸೂರು, ಆ.28:- ಒಂದು ತಿಂಗಳಲ್ಲಿ ಆಶ್ರಯ ಮನೆಗಾಗಿ ಅರ್ಜಿ ಸಲ್ಲಿಸಿದ ಅರ್ಹ ಲಾನುಭÀವಿಗಳನ್ನು ಗುರುತಿಸುವ ಪಕ್ರಿಯೆ ನಡೆಸಿ ವರ್ಷದೊಳಗೆ ನಿವೇಶನ ಅಥವಾ ಮನೆ ನೀಡಲಾಗುವುದು ಎಂದು ಶಾಸಕ ಕೆ. ಹರೀಶ್‍ಗೌಡ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಚಾಮರಾಜ ಕ್ಷೇತ್ರದ ಆಶ್ರಯ ವಸತಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಆಶ್ರಯ ಮನೆಗಾಗಿ ಕಳೆದ 24 ವರ್ಷಗಳಿಂದ ಕಾಯುತ್ತಿದ್ದ 3279 ಮಂದಿ ಅರ್ಜಿ ಸಲ್ಲಿಸಿದ್ದು, ಇನ್ನೊಂದು ತಿಂಗಳಲ್ಲಿ ಅರ್ಹ ಲಾನುಭÀವಿಗಳನ್ನು ಗುರುತಿಸುವ ಪಕ್ರಿಯೆ ನಡೆಯಲಿದೆ ಎಂದರು.
ಚಾಮರಾಜ ಕ್ಷೇತ್ರದಲ್ಲಿ ಆಶ್ರಯ ಮನೆ ನಿರ್ಮಿಸಲು ಸರ್ಕಾರಿ ಜಾಗದ ಕೊರತೆ ಇದ್ದು, ಚಾಮುಂಡೇಶ್ವರಿ ಕ್ಷೇತ್ರ ಸೇರಿದಂತೆ ಆಯ್ದ ಕಡೆ ಸರ್ಕಾರಿ ಜಾಗಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
3279 ಮಂದಿಗೆ ಆಶ್ರಯ ಮನೆ ಯೋಜನೆಯಡಿ ನಿವೇಶನ ಕೊಡುವುದು ಮತ್ತು ಗುಂಪು ಮನೆ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಎಲ್ಲರಿಗೂ ನಿವೇಶನ ಹಂಚಿಕೆ ಮಾಡುವುದು ನಮ್ಮ ಉz್ದÉೀಶವಾಗಿದೆ. ಈ ಹಿನ್ನಲೆಯಲ್ಲಿ ಚಾಮರಾಜ ಕ್ಷೇತ್ರ ಸೇರಿದಂತೆ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿ ಇರುವ ಸರ್ಕಾರಿ ಜಾಗಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಮೈಸೂರು ತಾಲೂಕಿನ ಹಂಚ್ಯಾದಲ್ಲಿ 24 ಎಕರೆ, ಹೆಬ್ಬಾಳಿನಲ್ಲಿ 8.28 ಎಕರೆ, ಅಯ್ಯಜಯ್ಯನಹುಂಡಿಯಲ್ಲಿ 15 ಎಕರೆ ಜಾಗ ಇರುವುದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ನಮ್ಮ ಆಶ್ರಯ ಸಮಿತಿ ಸದಸ್ಯರು ಗುರುತು ಮಾಡಿz್ದÁರೆ. ಹಂಚ್ಯಾದಲ್ಲಿನ 800 ಮಂದಿಗೆ ನಿವೇಶನ ನೀಡುವ ಅವಕಾಶವಿದೆ. ಉಳಿದವರಿಗೆ ನಿವೇಶನ ನೀಡಲು ಜಾಗದ ಕೊರತೆ ಎದುರಾಗುವುರಿಂದ ಅಂತಹ ಕಡೆಗಳಲ್ಲಿ ಗುಂಪು ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವ ಉz್ದÉೀಶ ಹೊಂದಲಾಗಿದೆ ಎಂದು ತಿಳಿಸಿದರು.
ಅಧಿಕಾರಿ ನೇಮಕ:
ಕಳೆದ 24 ವರ್ಷಗಳ ಹಿಂದೆ ಚಾಮರಾಜ ಕ್ಷೇತ್ರದಲ್ಲಿ ಆಶ್ರಯ ಮನೆಗಳಿಗೆ ಅರ್ಜಿ ಸಲ್ಲಿಸಿದ್ದ 3279 ಮಂದಿ ಗುರುತಿಸುವ ಕೆಲಸವನ್ನು ಪಾಲಿಕೆ ಮಾಡಲಿದ್ದು, ಅದಕ್ಕಾಗಿ ಯೋಗೇಶ್ ಎಂಬ ಅಧಿಕಾರಿ ನೇಮಿಸಲಾಗಿದೆ. ಇವರು ಒಂಟಿಕೊಪ್ಪಲಿನಲ್ಲಿರುವ ಪಾಲಿಕೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಅರ್ಜಿ ಸಲ್ಲಿಸಿದ್ದ ಫಲಾನುಭÀವಿಗಳು ತಮ್ಮ ಬಳಿ ಇರುವ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬದಲಿ ನಿವೇಶನ ಹಂಚಿಕೆ:
ಇದರೊಂದಿಗೆ ಬೋಗಾದಿ ರಿಂಗ್ ರಸ್ತೆಯ ನಿರ್ಮಾಣದ ವೇಳೆ ನಿವೇಶನ ಕಳೆದು ಕೊಂಡಿದ್ದ 33 ಮಂದಿ ಆಶ್ರಯ ಮನೆ ಲಾನುಭÀವಿಗಳಿಗೆ ಬದಲಿ ನಿವೇಶನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜತೆಗೆ ಚಾಮರಾಜ ಕ್ಷೇತ್ರದಲ್ಲಿ ಸಮರ್ಪಕವಾಗಿ ತೆರಿಗೆ ಪಾವತಿ ಮಾಡದ ಮತ್ತು ಬಾಡಿಗೆ ಪಾವತಿ ಮಾಡದ ವಾಣಿಜ್ಯ ಮಳಿಗೆದಾರರರಿಗೆ ಕೂಡಲೇ ನೋಟಿಸ್ ನೀಡುವ ಮೂಲಕ ಬಾಕಿ ಇರುವ ತೆರಿಗೆ ಮತ್ತು ಬಾಡಿಗೆಯನ್ನು ವಸೂಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಆಶ್ರಯ ಸಮಿತಿ ಸದಸ್ಯರಾದ ಅನಂತ ನಾರಾಯಣ, ಎಸ್.ಮಂಜುನಾಥ್, ಮಹಮ್ಮದ್ ಇಬ್ರಾಹಿಂ, ರಾಣಿ ಸಿದ್ದಪ್ಪಾಜಿ, ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್, ಕಂದಾಯ ವಿಭಾಗದ ಉಪ ಆಯುಕ್ತ ದಾಸೇಗೌಡ, ಎಸ್‍ಇ ಸಿಂಧು, ಸಹಾಯಕ ಆಯುಕ್ತ ಸತ್ಯ ಮೂರ್ತಿ ಸೇರಿದಂತೆ ಕ್ಷೇತ್ರದ ವಲಯ ಕಚೇರಿ ವ್ಯಾಪ್ತಿಯ ಅಧಿಕಾರಿಗಳು ಇದ್ದರು.