ಇಡೀ ದೇಶಕ್ಕೆ ಅನ್ನ ಆಹಾರ ನೀಡುವ ರೈತರೇ ದೇವರು: ದೀಪಕ್
ಸಂಜೆವಾಣಿ ವಾರ್ತೆ
ಸುತ್ತೂರು: ಆ.28:- ಇಡೀ ದೇಶಕ್ಕೆ ಅನ್ನ ಆಹಾರ ನೀಡುವವರೇ ನಮ್ಮ ರೈತರು, ಅವರ ದೇವರ ಸಮಾನ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ದೀಪಕ್‍ರವರು ತಿಳಿಸಿದರು.
ಅವರು ಮೈಸೂರು ತಾಲ್ಲೂಕು ಬ್ಯಾತಹಳ್ಳಿ ಗ್ರಾಮದ ಮಾದಪ್ಪರವರ ಜಮೀನಿನಲ್ಲಿ ಪ್ರಗತಿಪರ ರೈತರುಗಳಿಗಾಗಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಬಡತನಕ್ಕೆ ಆಹಾರ ಉತ್ಪಾದನೆಯಲ್ಲಿ ಕಡಿಮೆಯಾಗಿರುವುದೇ ಕಾರಣ, ಬಡತನದಿಂದ ನಿರುದ್ಯೋಗ ಹೆಚ್ಚಾಗಿದೆ.
ರೈತರ ಬದುಕು ಹಸನಾಗಲು ಸರ್ಕಾರಗಳು ರೈತರ ಪರ, ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ಅವರಿಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಿ ನೀಡಿದರೆ ಮಾತ್ರ ಅವರ ಪ್ರಗತಿ ಸಾಧ್ಯ, ಅಲ್ಲದೇ ರೈತರು ಕಡಿಮೆ ವೆಚ್ಚದ ಬೇಸಾಯ ಪದ್ದತಿಯನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿ ಬರುವಂತಹ ಬೆಳೆಗಳನ್ನು ಬೆಳೆದು ಆರ್ಥಿಕಾಭಿವೃದ್ದಿಯನ್ನು ಸಾಧಿಸಬೇಕೆಂದು ತಿಳಿಸಿದರಲ್ಲದೇ ಬ್ಯಾತಹಳ್ಳಿ ಮಾದಪ್ಪರವರು ಪ್ರತಿ ತಿಂಗಳು ಪ್ರಗತಿಪರ ರೈತರನ್ನು ಗುರ್ತಿಸಿ ಅವರಿಗೆ ಸನ್ಮಾನ ಮಾಡಿ ಗೌರವಿಸುತ್ತಿರುವುದು ಇಡೀ ವಿಶ್ವವೇ ಮೆಚ್ಚುವಂತಹ ಕೆಲಸವಾಗಿದೆ. ಇಂತಹ ಕಾರ್ಯಕ್ರಮಗಳನ್ನು ಮುಂದುವರೆಸಲು ಸ್ಥಳೀಯ ರೈತ ಬಾಂಧವರು ಪ್ರಗತಿ ಪರ ರೈತರೊಡಗೂಡಿ ಉತ್ತಮ ಬೇಸಾಯವನ್ನು ತಿಳಿದುಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸನ್ಮಾನಿತರ ರೈತರಾದ ಕೆ.ಆರ್.ನಗರ ಮೀನಾಕ್ಷಮ್ಮ, ನಂಜನಗೂಡು ನಂಜಪ್ಪ, ಸುತ್ತೂರು ಮಹದೇವಪ್ಪ, ಸಿದ್ದಲಿಂಗಸ್ವಾಮಿ, ಗುರುಸಿದ್ದಪ್ಪ, ಕಿರುಗುಂದ ಶೇಖರ್, ಕಿರಣ, ಮುಖ್ಯ ಅತಿಥಿಗಳಾದ ಓಂಕಾರ್ ಪ್ರಸಾದ್, ಕೆ.ದೀಪಕ್, ಜಿ.ಪಂ. ಮಾಜಿ ಅಧ್ಯಕ್ಷ ಸಿದ್ದವೀರಪ್ಪ, ಕೆಂಡಗಣ್ಣಪ್ಪ, ಹದಿನಾರು ಗ್ರಾಮದ ಗುರುಸ್ವಾಮಿ, ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ರೈತರು ಉಪಸ್ಥಿತರಿದ್ದರು.